ಮುಂಬಯಿ: ವಸಾಯಿ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಬೊಸ್ತು ಕೊಂಕಣಿ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಎ. 15 ರಂದು ಸಂಜೆ ಉಪನಗರ ವಸಾಯಿ ಪಶ್ಚಿಮದ ಮಾಣಿಕ್‌ಪುರ ಪರಿಸರದಲ್ಲಿರುವ ವೈಎಂಸಿಎ ಸಭಾಗೃಹದಲ್ಲಿ ನಡೆಯಿತು.
ನಾಟಕ ಪ್ರದರ್ಶನದ ಮಧ್ಯಾಂತರದಲ್ಲಿ ನಡೆದ ಸರಳ ಸಭಾ ಕಾರ್ಯಕ್ರಮಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಕೊಂಕಣಿ ನಾಟಕಗಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಹಾಗೂ ಗೌರವ ಅತಿಥಿಗಳಾಗಿ ಸಮಾಜ ಸೇವಕರಾದ ರೋಬರ್ಟ್ ಮಿನೇಜಸ್, ಜೊಸ್ಸಿ ಮಿನೇಜಸ್, ನಾಟಕಕಾರ ಜೋಯ್ ಪಾಲಡ್ಕ, ಅಸೋಸಿಯೇಶನ್‌ನ ನಿಕಟ ಪೂವಾìಧ್ಯಕ್ಷ ಸ್ಟೀಫನ್ ಫೆರ್ನಾಂಡಿಸ್, ಮೋಡೆಲ್ ಕೋ. ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಆ್ಯನ್ಸಿ ಡಿ’ಸೋಜಾ ಪಾಲಡ್ಕ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಬೊಸ್ತು ನಾಟಕದ ರೂವಾರಿ, ನಿರೂಪಕ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಅವರನ್ನು ಅತಿಥಿ-ಗಣ್ಯರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಕೊಂಕಣಿ ಸೇವೆಗೈದ ಫೆಲಿಕ್ಸ್ ಡಿ’ಸೋಜಾ ವಸಾಯಿ ಅವರನ್ನು ಶಾಲು ಹೊದೆಸಿ, ಫಲ-ಪುಷ್ಪವನ್ನಿತ್ತು ಸತ್ಕರಿಸಲಾಯಿತು.
ಲಿಯೋ ಫೆರ್ನಾಂಡಿಸ್ ನಿರ್ದೇಶನದಲ್ಲಿ ಪ್ರದರ್ಶಿಸಿಸಲ್ಪಟ್ಟ ಬೊಸ್ತು ನಾಟಕದಲ್ಲಿ ಪ್ಲೇವಿ ಕೊರ್ಡೆರೊ, ಸಿಲ್ವಿಯಾ ಫೆರ್ನಾಂಡಿಸ್, ಪ್ಲೇವಿಯಾ ಫೆರ್ನಾಂಡಿಸ್, ಹೆನ್ರಿ ಮಿನೇಜಸ್, ಜೋನ್ ಡಿಸೋಜಾ, ಜೊನ್ ರೊಡ್ರಿಗಾಸ್, ಫ್ರಾನ್ಸಿಸ್ ಲುವಿಸ್, ನವೀನ್ ಡಿಸೋಜಾ, ವಿಲ್ಡಾ ಡಿಸೋಜಾ, ಲೊರೆನ್ಸ್ ಮೆಂಡೊನ್ಸಾ, ಸೊಫಿಯಾ ಡಿಸೋಜಾ, ನಿಕ್ಸನ್ ಡಿಸೋಜಾ ಮತ್ತಿತರ ಕಲಾವಿದರಾಗಿ ಸಹಕರಿಸಿದರು. ಹೆನ್ರಿ ಪಿಂಟೊ, ಅಲ್ಬರ್ಟ್ ಡಿ’ಕೋಸ್ತಾ, ಮೇಬಲ್ ರೆಜಿನಾಲ್ಡ್ ಸಾಂತ್ಮೇಯರ್ ಸಹಕರಿಸಿದರು.
ರಿಯೊನಾ ಮಸ್ಕರೇನ್ಹಸ್ ರಾಷ್ಟ್ರಗೀತೆಯನ್ನಾಡಿದರು. ವಸಾಯಿ ಕೊಂಕಣಿ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ರೆಜಿನಾಲ್ಡ್ ಸಾಂತೆ¾ಯರ್ ಸ್ವಾಗತಿಸಿದರು. ರೊಮಿಲಿ ಸಾಂತ್ಮೇಯರ್ ಮತ್ತು ಕ್ವಿನ್ಸಿ ಪಿಲ್ಲಿ ಸ್ವಾಗತ ನತ್ಯಗೈದರು. ಜಾನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಹೆನ್ರಿ ಪಿಂಟೊ ವಂದಿಸಿದರು.
ಚಿತ್ರ-ವರದಿ : ರೊನಿಡಾ ಮುಂಬಯಿ