Advertisement

ಸಿದ್ದರಾಮಯ್ಯಗೆ ಸಡ್ಡು ಹೊಡೆದ ವರ್ತೂರು ಪ್ರಕಾಶ್‌

10:10 PM Nov 13, 2022 | Team Udayavani |

ವೇಮಗಲ್‌/ಕೋಲಾರ: ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ. ನಾನೂ ಕುರುಬ ಸಮಾಜದವನೇ. ಇಲ್ಲಿಗೆ ಬಂದರೆ ಇಡೀ ಕುರುಬ ಸಮಾಜ ಅವರಿಗೆ ಛೀಮಾರಿ ಹಾಕುತ್ತದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಎಚ್ಚರಿಸಿದರು.

Advertisement

ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲೇ ಮಾಜಿ ಸಿಎಂ ಸಂಚರಿಸುವ ಮಾರ್ಗದಲ್ಲೇ ವೇಮಗಲ್‌ ಮೂಲಕ ಸೀತಿ -ಮದ್ದೇರಿ-ರಾಜಕಲ್ಲಹಳ್ಳಿವರೆಗೂ ಬೃಹತ್‌ ಬೈಕ್‌ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿ, ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆದು ಎಚ್ಚರಿಕೆಯ ಸಂದೇಶ ರವಾನಿಸಿದ ನಂತರ ನೂರಾರು ಮಂದಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ರಮೇಶ್‌ಕುಮಾರ್‌,ಎಸ್‌.ಎನ್‌.ನಾರಾಯಣಸ್ವಾಮಿ ಮತ್ತಿತರರು ಸೋಲಿನ ಭಯದಿಂದ ಸಿದ್ದರಾಮಯ್ಯರನ್ನು ಕರೆಯುತ್ತಿದ್ದಾರೆ. ಆದರೆ ಈವರೆಗೂ ಸಿದ್ದರಾಮಯ್ಯ ಬರುವುದಾಗಿ ಎಲ್ಲೂ ಹೇಳಿಲ್ಲ. ವೇಮಗಲ್‌ ಹೋಬಳಿಯಲ್ಲಿ ನನ್ನ ಬಳಿಯೇ ತಿಂದು ತೇಗಿ ಕೊಬ್ಬಿದ ಮೂವರು ವಂಚಕರನ್ನು ನಂಬಿ ಕೋಲಾರಕ್ಕೆ ಬರುವ ಧೈರ್ಯ ಮಾಡುವುದಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next