Advertisement
ಏನು ವಿಶೇಷ?ಫಾಡ್ ಮತ್ತು ಪಿಚ್‌ವಾಯ್ ಪೇಂಟಿಂಗ್‌ಗಳು, ಗೊಂಡ್ ಚಿತ್ರಕಲೆಗಳು, ನಾಗಾಲ್ಯಾಂಡ್‌ನ ಟ್ರೆಬಲ್ ಜ್ಯುವೆಲ್ಲರಿಗಳು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದರ ಕಲಂಕಾರಿ ಬಟ್ಟೆಗಳು, ಆಂಧ್ರದ ಇಕ್ಕತ್ ಮತ್ತು ಹ್ಯಾಂಡ್‌ಲೂಮ್ ವಸ್ತ್ರಗಳು, ಗುಜರಾತ್‌ನ ಅಜ್ರಕ್ ಯಾರ್ಡಿಜ್, ಬಿದಿರು ಮತ್ತು ಹುಲ್ಲಿನ ಗೃಹಾಲಂಕಾರ ವಸ್ತುಗಳು ಮತ್ತು ಆಕ್ಸೆಸರಿಗಳು, ಗುಜರಾತ್‌ನ ಮತಾನಿಪಚಡಿ, ಪಶ್ಚಿಮ ಬಂಗಾಳದ ಮಸ್‌ಲ್ಯಾಂಡ್ ಮ್ಯಾಟ್‌ಗಳು, ರಾಜಸ್ಥಾನದ ಮಿನಿಯೇಚರ್ ಪೇಂಟಿಂಗ್‌ಗಳು, ಆಪ್ಲಿಕ್ ಕಲೆಯ ಹೊದಿಕೆಗಳು, ಟೆರ್ರಾಕೋಟಾ, ಸೆರಾಮಿಕ್ ಮಡಕೆಗಳು, ಭುಜ್‌ನ ಶಾಲ್‌ಗಳು, ಒರಿಸ್ಸಾದ ಪಠಚಿತ್ರ ಮತ್ತು ಇಕತ್ ವಸ್ತ್ರಗಳು, ಪುಂಜಾ ದರೀಸ್ ಹೀಗೆ, ಹಿಂದಿಗಿಂತಲೂ ವೈವಿಧ್ಯಮಯ ಕರಕುಶಲ ವಸ್ತುಗಳು ಈ ಬಾರಿಯ ಮೇಳದಲ್ಲಿ ಮೇಳೈಸಿವೆ. ಕರಕುಶಲಕರ್ಮಿಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಹಕರು-ಕರಕುಶಲ ಕರ್ಮಿಗಳ ನಡುವೆ ಸೇತುವೆಯಾಗುವುದು ಕುಟೀರದ ಉದ್ದೇಶ.
ಯಾವಾಗ?: ಜು.20-25, ಬೆಳಗ್ಗೆ 10.30-7.30