Advertisement

ನಭಾ ನಟನೆಗೆ ವರ್ಮಾ ಮೆಚ್ಚುಗೆ

09:00 AM Jul 25, 2019 | Lakshmi GovindaRaj |

ಕನ್ನಡದ ಅನೇಕ ನಟಿಯರು ಪರಭಾಷೆಯಲ್ಲಿ ನಟಿಸುತ್ತಿದ್ದಾರೆ. ಒಂದಷ್ಟು ಮಂದಿ ಅಲ್ಲೇ ಕಂಡಿದ್ದಾರೆ ಕೂಡಾ. ಈಗ ಆ ಸಾಲಿಗೆ ಹೊಸ ಸೇರ್ಪಡೆ ನಭಾ ನಟೇಶ್‌. ಯಾವ ನಭಾ ಎಂದರೆ ನಿಮಗೆ “ವಜ್ರಕಾಯ’ ಸಿನಿಮಾ ಬಗ್ಗೆ ಹೇಳಬೇಕು. ಶಿವರಾಜಕುಮಾರ್‌ ನಾಯಕರಾಗಿರುವ “ವಜ್ರಕಾಯ’ ಚಿತ್ರದಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ ನಭಾ, ಆ ನಂತರ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

Advertisement

ತೆಲುಗು ಚಿತ್ರರಂಗ ಪ್ರವೇಶಿಸಿದ ನಭಾ ಅಲ್ಲಿ ನೆಲೆಯೂರುವ ಲಕ್ಷಣ ತೋರುತ್ತಿದ್ದಾರೆ. ಈಗಾಗಲೇ ನಭಾ ನಟಿಸಿರುವ ಪುರಿ ಜಗನ್ನಾಥ್‌ ನಿರ್ದೇಶನದ “ಇಸ್ಮಾರ್ಟ್‌ ಶಂಕರ್‌’ ಚಿತ್ರ ಬಿಡುಗಡೆಯಾಗಿದ್ದು, ಹಿಟ್‌ಲಿಸ್ಟ್‌ ಸೇರಿದೆ. ಈ ಚಿತ್ರದ ಇಬ್ಬರು ನಾಯಕಿಯರಲ್ಲಿ ನಭಾ ಕೂಡಾ ಒಬ್ಬರು. ಈ ಸಿನಿಮಾವನ್ನು ಇತ್ತೀಚೆಗೆ ವೀಕ್ಷಿಸಿದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, ನಭಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

“ನಭಾ ನಟನೆ ನೋಡಿದ ನಂತರ ಆಕೆ ಇಲಿಯಾನ 2.0 ಆಗುತ್ತಾಳೆ’ ಎನ್ನುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಇದು ನಭಾ ಉತ್ಸಾಹವನ್ನು ಹೆಚ್ಚಿಸಿದೆ. ಈ ಹಿಂದೆ ಕನ್ನಡದ “ಟಗರು’ ಸಿನಿಮಾ ನೋಡಿ, ಮಾನ್ವಿತಾ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.