Advertisement

ವಸ್ತುಗಳ ಮಾರಾಟ ಮೇಳದಲ್ಲಿ ಮಹಿಳೆಯರ ಕಲರವ

05:29 PM Mar 20, 2021 | Team Udayavani |

ಮಂಡ್ಯ: ನಗರದ ಬಾಲ ಭವನದ ಉದ್ಯಾನದಲ್ಲಿ ವಸ್ತು ಪ್ರದರ್ಶನ, ಮಾರಾಟ ಮೇಳ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಸ್ತ್ರೀಶಕ್ತಿ ಒಕ್ಕೂ ಟದಿಂದ ನಡೆದ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌. ರಾಜಮೂರ್ತಿ ಉದ್ಘಾಟಿಸಿದರು.

ಮಹಿಳೆಯರಿಗೆ ಕಾರ್ಯಕ್ರಮ ಪೂರಕ: ನಂತರ ಮಾತನಾಡಿದ ಅವರು, ಮಹಿಳೆಯರು ಉತ್ಪಾದಿ ಸುವ ವಸ್ತುಗಳ ವ್ಯಾಪಾರವಾಗಿದೆ. ಸರಿಯಾದ ಬೆಲೆ ಸಿಗದೆ ಆರ್ಥಿಕವಾಗಿ ಮುಂದೆ ಬರುವುದಕ್ಕೆ ತೊಡ ಕಾಗಿದೆ. ಇದನ್ನು ಮನಗಂಡು ಇಲಾಖೆ ವತಿಯಿಂದ ಸ್ತ್ರೀಶಕ್ತಿ ಸಂಘಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿ ಸುವುದು. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಉತ್ಪನ್ನ ಖರೀದಿಸಿ ಪ್ರೋತ್ಸಾಹಿಸಿ: ಕೇವಲ ತೋರಿಕೆಗೆ ಮಾತ್ರ ಪ್ರದರ್ಶನ ಮಾಡಬಾರದು. ಮಹಿಳೆಯರು ಉತ್ಪಾದನೆ ಮಾಡುವಂಥ ಉತ್ಪನ್ನ ಗಳು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನೊಡ್ಡುವ ನಿಟ್ಟಿನಲ್ಲಿ ಗುಣಾತ್ಮಕವಾಗಿ ತಯಾರಿಸಬೇಕು. ಸ್ತ್ರೀಶಕ್ತಿ ಸಂಘಟನೆಗಳು ಉತ್ಪಾದಿಸುವ ಉತ್ಪನ್ನಗಳನ್ನೇ ಖರೀದಿ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಪೋಷಣ್‌ ಅಭಿಯಾನ ಜಾರಿ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಪೋಷಣ್‌ ಅಭಿ ಯಾನ ಕಾರ್ಯಕ್ರಮವನ್ನೂ ಜಾರಿ ಮಾಡಲಾಗು ತ್ತಿದೆ. ಗರ್ಭಿಣಿ, ಬಾಣಂತಿಯರಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಅಂಗನವಾಡಿಯಲ್ಲಿ 15ರಿಂದ 30ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ. ನಮ್ಮ ಎಲ್ಲ ಕಾರ್ಯಕರ್ತರು ಪರಿ ಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಾಣಂತಿಯರು, ಮಕ್ಕಳು ಬಳಲಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದೆ ಎಂದು ವಿವರಿಸಿದರು.

Advertisement

ಈಗಾಗಲೇ ಶೇ.50ರಷ್ಟು ಮಹಿಳೆಯರಿಗೆ ಮೀಸ ಲಾತಿ ನೀಡಲಾಗಿದೆ. ಮಹಿಳೆಯರಿಗೆ ಸಮಾನತೆ ಕೊಡುವುದಲ್ಲ. ಅವರೇ ತೆಗೆದುಕೊಳ್ಳುವ ರೀತಿ ಯಲ್ಲಿ ಆರ್ಥಿಕ, ಸಾಮಾಜಿಕವಾಗಿ ಸಭಲರಾಗು ವಂಥ ಕಾರ್ಯಕ್ರಮಗಳನ್ನು ರೂಪಿಸುವುದು. ಮಹಿಳೆಯರ ಶೋಷಣೆಯಾಗದಂತೆ ನೋಡಿ ಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಮಾಡಿದಲ್ಲಿ ಮಹಿಳಾ ಸಮಾನತೆಗೂ ಅರ್ಥ ಬರುತ್ತದೆ ಎಂದು ಅಭಿಪ್ರಾಯಿಸಿದರು.

ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಿ: ಮಹಿಳೆಯರಿಗೆ ಮಾರಕವಾಗಿರುವ ಅಂಶಗಳು, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ಕೌಟಂಬಿಕ ದೌರ್ಜನ್ಯಗಳು ನಡೆಯದಂತೆ ಅಂಗನವಾಡಿ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಎಚ್ಚರ ವಹಿಸುವ ಮೂಲಕ ಮಹಿಳಾ ದಿನಾಚರಣೆಗೂ ಅರ್ಥ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕಾ ಗಿದೆ. ಈ ನಿಟ್ಟಿನಲ್ಲಿ ಸೀಶಕ್ತಿ ಸಂಘಟನೆಗಳು, ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಿ ಸಮಾನ ಸದೃಢವಾಗಿ ಸಮಾಜಕ್ಕೆ ಕೊಡುವ ನಿಟ್ಟಿನಲ್ಲಿ ಎಲ್ಲರೂ ಪೂರಕವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲಾಖೆ ನಿರೂಪಣಾಧಿ ಕಾರಿ ಚೇತನ್‌ಕುಮಾರ್‌, ಸಿಡಿಪಿಒಗಳಾದ ಕುಮಾರ ಸ್ವಾಮಿ, ಯೋಗೇಶ, ಸ್ವಾಮಿ, ನಟರಾಜು, ರಾಣಿ ಚಂದ್ರಶೇಖರ್‌, ಸರಸ್ವತಿ, ಶಶಿಕಲಾ, ಮಂಜುಳಾ, ಸಿ.ಕುಮಾರಿ, ಅನುಪಮಾ, ಕೋಮಲ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next