Advertisement

ಪಂಚಾಯತ್‌ ರಾಜ್‌ ಇಲಾಖೆಯಲ್ಲಿದೆ ವಿವಿಧ ಹುದ್ದೆ

02:47 AM Sep 17, 2020 | Hari Prasad |

ಮಣಿಪಾಲ: ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮೀಣಾಭಿವೃದ್ಧಿಯ ಆಯುಕ್ತಾಲಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ Cluster Facilitation Project ಅಡಿಯಲ್ಲಿ, ವಿವಿಧ ಹುದ್ದೆಗಳ ನೇಮಕಾತಿಗೆ ಸೂಚನೆ ಹೊರಡಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ GIS, NRM, Livelihodd (CFP) ಪರಿಣತರ ಸೇವೆಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Advertisement

ವಿದ್ಯಾರ್ಹತೆ ಮತ್ತು ಕಾರ್ಯಾನುಭವ ಜಿಐಎಸ್‌ ಹುದ್ದೆಗಳಿಗೆ ಎಂ.ಟೆಕ್‌ / ಎಂಇ / ಎಂ.ಎಸ್ಸಿ ಜತೆಗೆ 2 ವರ್ಷ ಕಾರ್ಯಾನುಭವ ಇರಬೇಕು.

ಬ್ಲಾಕ್‌ ಎನ್‌ಆರ್‌ಎಂ ಎಕ್ಸ್‌ಪರ್ಟ್‌ ಹುದ್ದೆಗಳಿಗೆ ಬಿ.ಟೆಕ್‌ ಇನ್‌ ಸಿವಿಲ್‌ ಎಂಜಿನಿಯರಿಂಗ್‌, ಅಗ್ರಿಕಲ್ಚರ್‌ ಎಂಜಿನಿಯರಿಂಗ್‌, ಡಿಪ್ಲೊಮಾ ಇನ್‌ ಸಿವಿಲ್‌ ಎಂಜಿನಿಯರಿಂಗ್‌ ಜತೆಗೆ 2 ವರ್ಷ ಕಾರ್ಯಾನುಭವ ಹೊಂದಿರಬೇಕು.
ಬ್ಲಾಕ್‌ ಲೈವ್ಲಿಹುಡ್‌ಎಕ್ಸ್‌ಪರ್ಟ್‌ ಹುದ್ದೆಗೆ ಕೃಷಿ ಅರ್ಥಶಾಸ್ತ್ರ, ತೋಟಗಾರಿಕೆ, ಆಗ್ರೋಫಾರೆಸ್ಟ್ರಿ , ಅಗ್ರೋನಮಿ, ಫಾರೆಸ್ಟ್ರಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
ವೇತನ : ಜಿಐಎಸ್‌ ಹುದ್ದೆಗೆ ಮಾಸಿಕ 35,000 ರೂ. ಜತೆಗೆ ಇತರೆ ವಿಶೇಷ ಭತ್ತೆಗಳನ್ನು ನೀಡಲಾಗುತ್ತದೆ. ಇತರೆ ಹುದ್ದೆಗಳಿಗೆ ಮಾಸಿಕ 30,000ರೂ. ಜತೆಗೆ ಇತರೆ ಭತ್ತೆಯನ್ನು ನಿಗದಿ ಮಾಡಲಾಗಿದೆ.

ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ

ನೇಮಕಾತಿ ವಿಧಾನ
ನಿಗದಿತ ವಿದ್ಯಾರ್ಹತೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಅನುಭವವುಳ್ಳ ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ನೇರವಾಗಿ ನೇಮಕಾತಿ ಮಾಡಲಾಗುತ್ತದೆ. ಜತೆಗೆ ಲಿಖೀತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ.  ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆ.21 ಕಡೆಯ ದಿನ.

Advertisement

ಹೆಚ್ಚಿನ ಮಾಹಿತಿಗಾಗಿ
https://rdpr.karnataka.gov.in/storage/pdf-files/Recruitment/MGNREGA.pdf

Advertisement

Udayavani is now on Telegram. Click here to join our channel and stay updated with the latest news.

Next