Advertisement

ಕುಷ್ಟಗಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

02:31 PM Dec 20, 2021 | Team Udayavani |

ಕುಷ್ಟಗಿ: ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಧ್ವಂಸ ಖಂಡಿಸಿ ಹಾಲುಮತ ಸಮಾಜ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುಷ್ಟಗಿಯ ಕನಕದಾಸ ವೃತ್ತದ ನಾಮಫಲಕಕ್ಕೆ ಮಾಲರ್ಪಣೆ ಮಾಡುವ ಮೂಲಕ ಪ್ರತಿಭಟನೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಮಾರುತಿ ವೃತ್ತ, ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ  ದೇಶಭಕ್ತ ಸಂಗೊಳ್ಳಿ ರಾಯಣ್ಣಪ್ರತಿಮೆ ಭಗ್ನಗೊಳಿಸಿ ಎಂ.ಇ.ಎಸ್. ಸಂಘಟನೆ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಯಿತು.

ಈ ಕಾರ್ಯದಲ್ಲಿ ಬರೀ ಬಂಧಿಸಿದರೆ ಸಾಲದು, ಗಡಿಪಾರು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ದೇಶಭಕ್ತರ ಪ್ರತಿಮೆಗಳನ್ನು ಭಗ್ನಗೊಳಿಸಿ ಕನ್ನಡಿಗರಲ್ಲಿ ಒಡಕು ಕುತಂತ್ರಿ ಬುದ್ದಿಯ ಎಂ.ಇ.ಎಸ್ ಹಾಗೂ ಶಿವಸೇನೆ ಆಟಾಟೋಪ ಮಟ್ಟಹಾಕಬೇಕು. ಸಂಗೊಳ್ಳಿ ರಾಯಣ್ಣ ಕೇವಲ ಹಾಲುಮತಕ್ಕೆ ಸೀಮಿತ ಅಲ್ಲ ಇಡೀ ಸರ್ವ ಜನಾಂಗದ ಆಸ್ತಿಯಾಗಿದ್ದಾರೆ. ಬೆಳಗಾವಿಯಲ್ಲಿ ಪದೇ ಪದೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡುತ್ತಿರುವುದು ಹಾಲುಮತ ಸಮಾಜದ ಮನಸ್ಸುಗಳಿಗೆ ನೋವಾಗಿದೆ. ಈ ಪ್ರಕರಣದಲ್ಲಿ ಯಾರೇ ಆಗಿರಲಿ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕು  ಎಂದು ಹಾಲುಮತ ಸಮಾಜದ ತಾಲೂಕಾ ಅದ್ಯಕ್ಷ ಮಲ್ಲಣ್ಣ ಪಲ್ಲೇದ್  ಒತ್ತಾಯಿಸಿದರು.

ಹಾಲುಮತ ಸಮಾಜದ ಗುರುಗಳಾದ ಶಿವಾನಂದಯ್ಯ ಗುರುವಿನ್, ಯುವ ಘಟಕದ ಅಧ್ಯಕ್ಷ ಕಲ್ಲೇಶ ತಾಳದ,ಎಚ್.ಬಿ.ಕುರಿ, ಮಂಜುನಾಥ ನಾಲಗಾರ, ಲಕ್ಷ್ಮಿ ಪಾಟೀಲ,ಸಂಗಪ್ಪ ಪಂಚಮ್, ಕರವೇ ಸಂಘಟನೆಯ ಅಜ್ಜಪ್ಪ ಕರಡಕಲ್, ಚಂದ್ರು ವಡಿಗೇರಿ ಮತ್ತೀತರರು ನೇತೃತ್ವವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next