Advertisement

ಅಮೆಜಾನ್ ಪೇ ಮೂಲಕ ಅಮೆಜಾನ್ ಗ್ರಾಹಕರಿಗೆ ವಿವಿಧ ಆಫರ್ ಗಳು

05:02 PM Oct 11, 2021 | |

ಬೆಂಗಳೂರು: ಅಮೆಜಾನ್ ಆನ್ ಲೈನ್ ಸ್ಟೋರ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಒಂದು ತಿಂಗಳ ಅವಧಿಯ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಅವಧಿಯಲ್ಲಿ ಅನೇಕ ಕೊಡುಗೆಗಳನ್ನು ಕಲ್ಪಿಸಿದೆ. ಅಮೆಜಾನ್ ಪೇ ಬಹುಮಾನ, ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. ಗ್ರಾಹಕರು ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಸೌಂದರ್ಯ ಮತ್ತು ಫ್ಯಾಷನ್, ಪ್ರಯಾಣದ ಟಿಕೆಟ್, ಡಿಜಿಟಲ್ ಚಿನ್ನ ಇತ್ಯಾದಿ ಖರೀದಿಸಲು ಇನ್ನಷ್ಟು ಅನುಕೂಲತೆಗಳನ್ನೊದಗಿಸಿದೆ.

Advertisement

ಅಮೆಜಾನ್ ಪೇನಲ್ಲಿ ವಿವಿಧ ಪಾವತಿ ವಿಧಾನಗಳನ್ನು ಬಳಸಬಹುದು, ಇದರಲ್ಲಿ ಅಮೆಜಾನ್ ಪೇ ಲೇಟರ್, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಅಮೆಜಾನ್ ಪೇ ಯುಪಿಐ ಮೂಲಕ ಶಾಪಿಂಗ್ ಮಾಡಬಹುದು.

ಅಮೆಜಾನ್ ಪೇ ಮೂಲಕ ಗ್ರಾಹಕರು ಹಬ್ಬದ ಅವಧಿಯಲ್ಲಿ 5000 ರೂ.ಗಳವರೆಗೆ  ಹಣವನ್ನು ಉಳಿಸಬಹುದು, ಹಣವನ್ನು ಕಳುಹಿಸುವುದು, ಬಿಲ್‌ಗಳನ್ನು ಪಾವತಿಸುವುದು, ಟಿಕೆಟ್ ಕಾಯ್ದಿರಿಸುವುದು ಇತ್ಯಾದಿ ಮೂಲಕ ರಿವಾರ್ಡ್ ಹಾಗೂ ಬಹುಮಾನ ಪಡೆಯಬಹುದು‌. ಪ್ರಮುಖ ಪಾಲುದಾರ ಬ್ಯಾಂಕುಗಳಿಂದ ಅತ್ಯಾಕರ್ಷಕ ಕೊಡುಗೆಗಳನ್ನು ಎದುರು ನೋಡಬಹುದು; ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೋ ಕಾಸ್ಟ್ EMI, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್ ಮತ್ತು ಇತರ ಪ್ರಮುಖ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿಂದ ತಕ್ಷಣದ ಕ್ಯಾಶ್ ಬ್ಯಾಕ್ ಪಡೆಯಬಹುದು.

ಗ್ರಾಹಕರು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 5% ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ರೂ 750 ಅನ್ನು ಜಾಯ್ನಿಂಗ್ ಬೋನಸ್ ಆಗಿ ಖರೀದಿಸಬಹುದು.

ಇದನ್ನೂ ಓದಿ:MAA ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್‍ಗೆ ಸೋಲು

Advertisement

60,000 ರೂ. ವರೆಗಿನ ತ್ವರಿತ ಸಾಲದ‌ ಜೊತೆಗೆ 150  ರೂ. ಅನ್ನು ಮರಳಿ ಪಡೆಯಬಹುದು. ಅಮೆಜಾನ್ ಪೇ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸುವ ಮೂಲಕ ರೂ. 200 ಮೌಲ್ಯದ ಬಹುಮಾನಗಳನ್ನು ಪಡೆಯಬಹುದು. ಅಮೆಜಾನ್ ಪೇ ಯುಪಿಐ ಬಳಸುವಾಗ ಶಾಪಿಂಗ್‌ನಲ್ಲಿ 10% ವರೆಗೆ 100 ರೂ. ವಾಪಸ್ ಪಡೆಯುತ್ತಾರೆ.

ಅಮೆಜಾನ್ ಪೇ ಅತ್ಯುನ್ನತ ಮಟ್ಟದ ಸುರಕ್ಷತಾ ಮಾನದಂಡ ಒಳಗೊಂಡಿದೆ. ಹೀಗಾಗಿ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ಮಾಡಬಹುದು.  ಎರಡು ಹಂತದ ಪರಿಶೀಲನೆಯನ್ನು (2SV) ಆರಿಸಿಕೊಂಡರೆ ಖಾತೆಯ ಸೈನ್-ಇನ್ ಹಂತದಲ್ಲಿ ಹೆಚ್ಚುವರಿ ಭದ್ರತೆ ನೀಡುತ್ತದೆ.

ಇದಲ್ಲದೆ, ಅವರು ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಆಯ್ಕೆ ಮಾಡಬಹುದು ಅದು ಸುಲಭವಾದ ಸೆಟಪ್ ಪ್ರಕ್ರಿಯೆಯೊಂದಿಗೆ ತಮ್ಮ ನೋಂದಾಯಿತ ಬ್ಯಾಂಕ್ ಖಾತೆಯಿಂದ ತಕ್ಷಣವೇ ಪಾವತಿಸಲು ಸಹಾಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next