Advertisement
ಪ್ರಜೆಗಳ ಸಂಕಷ್ಟ ನಿವಾರಿಸಲು ಮಾವೇಲಿ ರಾಜ (ಮಹಾಬಲಿ ಚಕ್ರವರ್ತಿ) ವರ್ಷ ಕ್ಕೊಮ್ಮೆ ಭೂಮಿಗೆ ಬರುತ್ತಾನೆ ಎಂಬುದು ಕೇರಳೀಯರ ನಂಬಿಕೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಆಚರಿಸುವ ಓಣಂ ಹಬ್ಬದ ದಿನಗಳಲ್ಲಿ ಮಾವೇಲಿಯನ್ನು ಸ್ವಾಗತಿಸಲು ಹೂಗಳ ರಂಗೋಲಿ ‘ಪೂಕಳಂ’ ಚಿತ್ತಾರ ರಂಗೇರುತ್ತದೆ. ವಿವಿಧ ಗಾತ್ರ ಮತ್ತು ಆಕೃತಿ ಗಳಲ್ಲಿ ರಚಿಸಲು ಪೂಕಳಂ ಕಳತುಂಬಲು ಕರ್ನಾಟಕದ ಹೂ ಬೇಕೇ ಬೇಕು.
Related Articles
Advertisement
ಒಂದು ಮೊಳ ಹೂವಿಗೆ 10 ರಿಂದ 30 ರೂ. ತನಕ ವಸೂಲಿ ಮಾಡಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಹೂವಿನ ಧಾರಣೆ ಕುಸಿಯುತ್ತದೆ. ಈ ತಂಡ ಕಳೆದ ಹದಿನಾಲ್ಕು ವರ್ಷಗಳಿಂದ ಕಾಸರಗೋಡಿನಲ್ಲಿ ಹೂ ವ್ಯಾಪಾರ ಮಾಡುತ್ತಿದ್ದಾರೆ. ಟೆಂಪೋ ವೊಂದರಲ್ಲಿ ಹೂ ತುಂಬಿ ಇಲ್ಲಿಗೆ ತರಲಾಗಿದೆ. ಇನ್ನೂ ಕೆಲವರು ಬಸ್‌ಗಳಲ್ಲೂ ಹೂವಿನ ರಾಶಿ ತಂದು ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಹೀಗೆ ಸಿಕ್ಕ ಸ್ಥಳಗಳಲ್ಲಿ ಹೂವಿನ ರಾಶಿ ಹರಡಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕೆಲವು ತಂಡಗಳು ಕಳೆದ 25 ವರ್ಷಗಳಿಂದ ಹೂಗಳ ರಾಶಿಯೇ ತಂದು ವ್ಯಾಪಾರ ಮಾಡುತ್ತಿದ್ದಾರೆ. ವಿವಿಧ ಬಣ್ಣಗಳ ಗೊಂಡೆ, ಜೀನಿಯಾ, ಸೇವಂತಿಗೆ, ವಾಡಾರ್‌ಮಲ್ಲಿ, ಕಾಕಡ, ಕೋಳಿ ಜುಟ್ಟು, ಗುಲಾಬಿ ಮೊದಲಾದ ಹೂಗಳನ್ನು ಮಾರಾಟ ಮಾಡಲಾಗುತ್ತಿದೆ.
ಸಾಂಪ್ರದಾಯಿಕವಾಗಿ ರಚಿಸುತ್ತಿದ್ದ ಪೂಕಳಂ ರಚನೆಯಲ್ಲೂ ವೈವಿಧಯ ಬಂದಿದೆ. ಮನೆ ಪರಿಸರದಲ್ಲಿ ಬೆಳೆಯುವ ಹೂಗಳಿಗೆ ಬದಲಾಗಿ ಸೇವಂತಿಗೆ, ಮಲ್ಲಿಗೆ, ಗುಲಾಬಿ, ಜೀನಿಯಾ ಮೊದಲಾದ ಹೂ ಗಳು ಪೂಕಳಂನಲ್ಲಿ ಸ್ಥಾನ ಪಡೆದಿವೆೆ. ಕಾಲ ಬದಲಾದಂತೆ ಪೂಕಳಂನಲ್ಲಿ ಬದಲಾಗಿದೆ. ಹಾಗಾಗಿ ಕರ್ನಾಟಕದ ಹೂಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಪೂಕಳಂ ವೈವಿಧ್ಯತೆ
ವಿವಿಧ ಬಣ್ಣಗಳ, ವೈವಿಧ್ಯಮಯವಾದ ಹೂಗಳ ಪಕಳೆಗಳಿಂದ ಹೂವಿನ ರಂಗೋಲಿ ‘ಪೂಕಳಂ’ ಅತ್ಯಾಕರ್ಷಕವಾಗಿ ರೂಪುಗೊಳ್ಳುತ್ತದೆ. ಆರಂಭದಲ್ಲಿ ಆಕೃತಿಯನ್ನು ರಚಿಸಿ, ಆ ಬಳಿಕ ಕಳಗಳಲ್ಲಿ ಒಂದ ಕ್ಕೊಂದು ಪೂರಕವಾಗುವ ವಿವಿಧ ಬಣ್ಣಗಳ ಹೂಗಳ ಪಕಳೆಗಳನ್ನು ತುಂಬಲಾಗುತ್ತದೆ. ವಿವಿಧ ಆಕೃತಿ, ಗಾತ್ರಗಳಲ್ಲಿ ಕಂಗೊಳಿಸುವ ಪೂಕಳಂ ಇಂದು ವಾಣಿಜ್ಯ ರೂಪವನ್ನು ಪಡೆದುಕೊಂಡಿದೆ. ಅಲ್ಲಲ್ಲಿ ನಡೆಯುವ ಪೂಕಳಂ ಸ್ಪರ್ಧೆಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಂದ ಪೂಕಳಂ ರಚಿಸಿ ಬಹುಮಾನಗಳನ್ನು ಪಡೆಯುವಷ್ಟರ ಮಟ್ಟಿಗೆ ಮುಂದುವರಿದಿದೆ. ಇಂದು ಪೂಕಳಂ ರಚನೆ ಪ್ರತಿಷ್ಠೆ ಎಂಬಂತಾಗಿದೆ. ಎಲ್ಲ ಮನೆಗಳಲ್ಲಿ ಪೂಕಳಂ ರಚಿಸುತ್ತಾರೆ. ಪರಿಸರದ ಸಂಘಸಂಸ್ಥೆಗಳು ಪೂಕಳಂ ರಚಿಸಿದ ಮನೆಗಳಿಗೆ ತೆರಳಿ ಅಂಕಗಳನ್ನು ನೀಡುತ್ತಾರೆ. ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಪೂಕಳಂ ಬಹುಮಾನಕ್ಕೆ ಅರ್ಹತೆ ಪಡೆಯುತ್ತದೆ. ಸ್ಪರ್ಧೆ ನಡೆ ಯುವುದ ರಿಂದಾಗಿ ಎಲ್ಲೆಡೆ ಪೂಕಳಂ ರಚಿಸ ಲಾಗುತ್ತದೆ. ಆರ್ಥಿಕ ಪರಿಸ್ಥಿತಿಯ ಮೇಲೆ ಹೂಗಳ ಖರೀದಿಯಾಗುತ್ತದೆ. ಸ್ಪರ್ಧೆಗಾಗಿ ರಚಿಸುವ ಪೂಕಳಂಗೆ ಸಾವಿರಾರು ರೂ.ಹೂ ಖರೀದಿಸುವುದಿದೆ. ಒಟ್ಟಾರೆ ಹೂವಿನ ಹಬ್ಬವೆಂದೇ ಗುರುತಿಸಿಕೊಂಡಿರುವ ಓಣಂ ಎಂದರೆ ಕೇರಳಾದ್ಯಂತ ಸಂಭ್ರಮ ಸಡಗರ.