Advertisement
ಉಬ್ಬು ನೆವರಿ ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- ಒಂದೂವರೆ ಕಪ್, ತೆಂಗಿನತುರಿ- 2 ಕಪ್, ಬೆಲ್ಲ- 1 ಕಪ್, ಅರಳುಹುಡಿ- 1/2 ಕಪ್, ಏಲಕ್ಕಿ ಹುಡಿ, ಚಿಟಿಕೆ ಉಪ್ಪು , ಕರಿಯಲು ಎಣ್ಣೆ, ಹುರಿದ ಕರಿ ಎಳ್ಳು.
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು- 1 ಕಪ್, ಜೀರಿಗೆ- 1 ಚಮಚ, ಕಾಳುಮೆಣಸು 5-6, ಮೈದಾ- 2 ಚಮಚ, ಕರಿಯಲು ಎಣ್ಣೆ , ಬೆಲ್ಲ- 1/2 ಕಪ್, ತೆಂಗಿನತುರಿ- 1 ಕಪ್, ಏಲಕ್ಕಿ ಹುಡಿ ಸ್ವಲ್ಪ , ತುಪ್ಪ- 2 ಚಮಚ.
Related Articles
Advertisement
ಗೇರುಬೀಜ -ಅರಳುಹುಡಿ ಉಂಡೆಬೇಕಾಗುವ ಸಾಮಗ್ರಿ: ಅರಳುಹುಡಿ- 2 ಕಪ್, ಅಂಟಿನ ಬೆಲ್ಲ- 1 ಕಪ್, ಸ್ವಲ್ಪ ಏಲಕ್ಕಿ ಹುಡಿ, ಕರಿ ಎಳ್ಳು- 1/2 ಕಪ್, ಗೇರುಬೀಜ- 10, ತುಪ್ಪ ಉಂಡೆ ಕಟ್ಟಲು. ತಯಾರಿಸುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಪಾಕ ಮಾಡಿ ಏಲಕ್ಕಿ ಹುಡಿ ಹಾಕಿ. ಎಳ್ಳು ತೊಳೆದು ಒಣಗಿಸಿ ಪಸೆ ಇಲ್ಲದೆ ಬಾಣಲೆಯಲ್ಲಿ ಹುರಿದು ತೆಗೆದಿಡಿ. ಗೇರುಬೀಜ ಚೂರನ್ನು ತುಪ್ಪದಲ್ಲಿ ಹುರಿಡಿದಿ. ಎಳ್ಳು, ಗೇರುಬೀಜ, ಅರಳುಹುಡಿ, ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಮಗುಚಿರಿ. ಅಂಗೈಗೆ ತುಪ್ಪ ಸವರಿ ಸ್ವಲ್ಪ ಬಿಸಿಯಾಗಿರುವಾಗಲೆ ಉಂಡೆ ಕಟ್ಟಿ ಸ್ಟೀಲ್ ಡಬ್ಬಿಯಲ್ಲಿಡಿ. ಒಂದು ತಿಂಗಳಾದರೂ ಸ್ವಾದಿಷ್ಟವಾಗಿರುವುದು. ಬೇಳೆಗಳ ಪಂಚಕಜ್ಜಾಯ
ಬೇಕಾಗುವ ಸಾಮಗ್ರಿ: ಅರಳುಹುಡಿ- 2 ಕಪ್, ಬೆಲ್ಲ- 1 ಕಪ್, ಏಲಕ್ಕಿಹುಡಿ, ಎಳ್ಳು- 1/4 ಕಪ್, ಗೇರುಬೀಜದ ಚೂರು ಸ್ವಲ್ಪ, ಒಣದ್ರಾಕ್ಷೆ- 10, ಕಡಲೆಬೇಳೆ- 4 ಚಮಚ, ಹೆಸರುಬೇಳೆ- 4 ಚಮಚ, ತುಪ್ಪ- 2 ಚಮಚ, ಕಾಯಿತುರಿ- ಒಂದೂವರೆ ಕಪ್. ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ದ ಪಾಕ ಮಾಡಿ ಕಾಯಿತುರಿ, ಅರಳು ಹುಡಿ, ಏಲಕ್ಕಿ ಹಾಕಿ ಚೆನ್ನಾಗಿ ಮಗುಚಿಡಿ. ಕಡಲೆಬೇಳೆ, ಹೆಸರುಬೇಳೆ ಬಾಣಲೆಯಲ್ಲಿ ಬೇರೆ ಬೇರೆಯಾಗಿ ಹುರಿದು ತರಿ ತರಿ ಹುಡಿ ಮಾಡಿ. ಎಳ್ಳು ಹುರಿದಿಡಿ. ತುಪ್ಪದಲ್ಲಿ ಗೇರುಬೀಜ, ದ್ರಾಕ್ಷಿ, ಹುರಿದಿಟ್ಟ ಎಲ್ಲವನ್ನೂ ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಮಗುಚಿರಿ. ಆರೋಗ್ಯದಾಯಕ ಘಮಘಮ ಪಂಚಕಜ್ಜಾಯ ಸವಿಯಿರಿ. ಎಸ್. ಜಯಶ್ರೀ ಶೆಣೈ