Advertisement
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೃಷಿ ಇಲಾಖೆಯಲ್ಲಿ ಶೇ.42, ಜಲಸಂಪನ್ಮೂಲ ಇಲಾಖೆಯಲ್ಲಿ ಶೇ.35, ನಗರಾಭಿವೃದ್ಧಿ ಇಲಾಖೆಯಲ್ಲಿ ಶೇ.37, ಮೂಲಸೌಕರ್ಯ ಇಲಾಖೆಯಲ್ಲಿ ಶೇ.23.19, ಲೋಕೋಪಯೋಗಿ ಇಲಾಖೆಯಲ್ಲಿ ಶೇ.28.74ರಷ್ಟು ಮಾತ್ರ ಸಾಧನೆಯಾಗಿದೆ ಎಂದು ದೂರಿದರು.
Related Articles
Advertisement
ಹಣ ಬಿಡುಗಡೆ ವಿಚಾರದಲ್ಲಿ ದೂರು ಅರ್ಜಿ ಕೊಟ್ಟರೆ ಅವರೊಂದಿಗೆ ಪ್ರಾಧಿಕಾರದ ಅಧ್ಯಕ್ಷರು ಡೀಲಿಂಗ್ ನಡೆಸಿ ದೂರು ವಾಪಸ್ ಪಡೆಯುವಂತೆ ಮಾತುಕತೆ ನಡೆಸಿದ್ದಾರೆ. ಆ ಬಗ್ಗೆ ಸೀಡಿ ಸಹ ಇದೆ ಎಂದು ಸದನದಲ್ಲಿ ಪ್ರದರ್ಶಿಸಿದರು.
ಸಚಿವ ಎಂ.ಬಿ.ಪಾಟೀಲ್ ಜಾಸ್ತಿ ಮಾತಾಡ್ತಾರೆ… ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸದನದಲ್ಲಿ ಜಾಸ್ತಿ ಮಾತಾಡುತ್ತಾರೆ. ಆದರೆ, ಅವರ ಇಲಾಖೆ ಜಸ್ಟ್ ಪಾಸ್. ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ಶೇ.35ರಷ್ಟು ಮಾತ್ರ ವೆಚ್ಚ ಮಾಡಲಾಗಿದೆ. ವಿನಯ ಕುಲಕರ್ಣಿ ಹಾಗೂ ಎಂ.ಬಿ.ಪಾಟೀಲ್ ಅವರನ್ನು ಧರ್ಮ ರಾಜಕಾರಣಕ್ಕೆ ಮುಖ್ಯಮಂತ್ರಿಯವರು ಹಚ್ಚಿದ್ದಾರೆ. ಹೀಗಾಗಿ, ಅವರು ಇಲಾಖೆಯ ಬಗ್ಗೆ ಗಮನ ಹರಿಸಿಲ್ಲ ಎಂದು ಶೆಟ್ಟರ್ ಟೀಕಿಸಿದರು.