Advertisement

ವಿವಿಧೆಡೆ ಸ್ವಚ್ಛತಾ ಜನಸಂಪರ್ಕ ಅಭಿಯಾನ, ಸ್ವಚ್ಛತಾ ಜಾಗೃತಿ

11:32 PM Apr 08, 2019 | Sriram |

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಜರಗುತ್ತಿರುವ ಸ್ವಚ್ಛತಾ ಜನಸಂಪರ್ಕ ಅಭಿಯಾನವನ್ನು ಮಾರ್ಚ್‌ ತಿಂಗಳಲ್ಲಿ ಮಂಗಳೂರಿನ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಮಾ. 1ರಿಂದ 30ರ ವರೆಗೆ ಕಾರ್ಯಕ್ರಮ ನಡೆಯಿತು. ಅಭಿಯಾನದ ಪ್ರಯುಕ್ತ 22 ಕಾರ್ಯಕ್ರಮಗಳು ಜರಗಿತು.

Advertisement

4 ತಿಂಗಳಲ್ಲಿ 98 ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸ್ವಚ್ಛತಾ ಜಾಗೃತಿ ಮಾಡ ಲಾಯಿತು. ಸುಮಾರು 3,000 ಜನರು ಹಸಿತ್ಯಾಜ್ಯ ನಿರ್ವಹಣೆ ಮಾಡಲು “ಮೂರು ಮಡಕೆ ಸಾಧನ’ ಬೇಕು ಎಂದು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಎಕ್ಕೂರು: ಧ್ರುವ ರೆಸಿಡೆನ್ಸಿ, ಶ್ರೀನಿಧಿ ರೆಸಿಡೆನ್ಸಿ ನಿವಾಸಿಗಳ ಆಶ್ರಯದಲ್ಲಿ ಪ್ರಶಾಂತ ಎಕ್ಕೂರ ನೇತೃತ್ವದಲ್ಲಿ 77ನೇ ಮಡಕೆ ಗೊಬ್ಬರದ ಕುರಿತು ಪ್ರಾತ್ಯಕ್ಷಿಕೆ ಜರಗಿತು. ಉಮಾನಾಥ್‌ ಕೋಟೆಕಾರ್‌ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಸುಜಾತಾ ಕುಲಾಲ, ಶಶಿಧರ ಶೆಟ್ಟಿ ಮತ್ತಿತರರಿದ್ದರು. ಕಿರಣ ರೈ ಸ್ವಾಗತಿಸಿ, ನಿರೂಪಿಸಿದರು.

ಸುರತ್ಕಲ್‌: ಬಂಟರ ಸಂಘ ಸುರತ್ಕಲ್‌ ಸಹಯೋಗದಲ್ಲಿ 78ನೇ ಸ್ವಚ್ಛತಾ ಜನಜಾಗೃತಿ ಕಾರ್ಯಕ್ರಮವನ್ನು ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಹಸಿಕಸ ಒಣಕಸದ ನಿರ್ವಹಣೆ ಕುರಿತು ಸಂವಾದಗಳು ನಡೆದವು. ಗಣ್ಯರಾದ ಸುಧಾಕರ ಪೂಂಜ, ನವೀನ್‌ ಶೆಟ್ಟಿ ಪಡ್ರೆ, ಲೋಕಯ್ಯ ಪಡ್ರೆ ಮತ್ತಿತರರು ಭಾಗಿಯಾಗಿದ್ದರು.

ವಿಶೇಷ ಗೋಷ್ಠಿ
ಥಿಯಾಸೋಫಿಕಲ್‌ ಸೊಸೈಟಿ: ಕೊಡಿ ಯಾಲಬೈಲ್‌ನಲ್ಲಿರುವ ಥಿಯಾಸೋಫಿಕಲ್‌ ಸೊಸೈಟಿಯಲ್ಲಿ “ನಮ್ಮ ತ್ಯಾಜ್ಯ ನಮ್ಮ ಹೊಣೆ’ ಎಂಬ ಕುರಿತು ವಿಶೇಷ ಗೋಷ್ಠಿ ಜರಗಿತು. ಉಮಾನಾಥ್‌ ಕೋಟೆಕಾರ್‌, ಸಚಿನ್‌ ಶೆಟ್ಟಿ ಗೋಷ್ಠಿಯಲ್ಲಿ ಮಾತನಾಡಿದರು. ನರಸಿಂಹ ಶೆಟ್ಟಿ ಸ್ವಾಗತಿಸಿದರು, ಕೃಷ್ಣಾನಂದ ಶೆಣೈ ವಂದಿಸಿದರು. 79ನೇ ಈ ಕಾರ್ಯಕ್ರಮವನ್ನು ಸೋಮಶೇಖರ್‌ ಬಿ ಎಮ್‌ ಸಂಯೋಜಿಸಿದರು.

Advertisement

ಪ್ರೊ| ಎಂ. ರಾಘವೇಂದ್ರ ಪ್ರಭು, ರೋಹನ್‌ ಸಿರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಉರ್ವದಲ್ಲಿರುವ ಯಶಸ್ವಿ ನಗರದ ನಿವಾಸಿಗಳ ಒಕ್ಕೂಟದ ಸದಸ್ಯರಿಗಾಗಿ ಸ್ವಚ್ಛತಾ ಜನ ಸಂಪರ್ಕ ಅಡಿಯಲ್ಲಿ 80ನೇ ಕಾರ್ಯಕ್ರಮವನ್ನು ಶ್ರೀಕೃಷ್ಣ ಕೃಪಾದಲ್ಲಿ ನಡೆಸಿಕೊಡಲಾಯಿತು. ಪ್ರಕಾಶ ರಾವ್‌ ಅತಿಥಿಯಾಗಿ ಭಾಗವಹಿಸಿದ್ದರು. ಸತೀಶ್‌ ಶೆಟ್ಟಿ ಸಂಯೋಜಿಸಿದರು.

ಮಡಕೆ ಗೊಬ್ಬರ ತಯಾರಿಕಾ ಪ್ರಾತ್ಯಕ್ಷಿಕೆ
81ನೇ ಮಡಕೆ ಗೊಬ್ಬರ ತಯಾರಿಕಾ ಪ್ರಾತ್ಯಕ್ಷಿಕೆಯನ್ನು ಅಳಪೆಯಲ್ಲಿರುವ ಪರಂಜ್ಯೋತಿ ಭಜನ ಮಂಡಳಿಯಲ್ಲಿ ನಡೆಸಿಕೊಡಲಾಯಿತು. ಭಾಸ್ಕರಚಂದ್ರ ಶೆಟ್ಟಿ, ರಾಮಚಂದ್ರ ಕೊಟ್ಟಾರಿ, ಶಾಂಭವಿ ಕೊಟ್ಟಾರಿ ಭಾಗಿಯಾಗಿದ್ದರು. ಭರತ್‌ ಶೆಟ್ಟಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಪ್ರಾಯೋಗಿಕ ಮಾಹಿತಿ
ರಥಬೀದಿಯಲ್ಲಿರುವ ಗೌರಿಮಠದ ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಸದಸ್ಯೆಯರಿಗಾಗಿ ಹಸಿಕಸವನ್ನು ಮಡಕೆಯಲ್ಲಿ ಹಾಕಿ ಗೊಬ್ಬರ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಉಮಾನಾಥ್‌ ಕೊಟೆಕಾರ್‌ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಮಂಜುಳಾ ಗೋಪಾಲ ಸ್ವಾಗತಿಸಿದರು. ಸರೋಜಾ ಸೆಲ್ವರಾಜ್‌, ಕಣಮ್ಮ ಕಂದಸ್ವಾಮಿ ವಿಶೇಷ ಆಹ್ವಾನಿತರಾಗಿದ್ದರು. ಜಗನ್‌ ಕೋಡಿಕಲ್‌ 84ನೇ ಜನಸಂಪರ್ಕ ಕಾರ್ಯಕ್ರಮ ಸಂಘಟಿಸಿದರು.

ಸಾವಯವ ಗೊಬ್ಬರ ತಯಾರಿಕೆ
ಸ್ವಚ್ಛ ಕೋಡಿಕಲ್‌ ತಂಡದ ಸದಸ್ಯರಿಂದ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಮಂದಿರದಲ್ಲಿ ಸಾವಯವ ಗೊಬ್ಬರ ತಯಾರಿಕೆಯ ಕುರಿತು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿನ್‌ ಶೆಟ್ಟಿ ಅವರು ಅಡುಗೆ ಮನೆಯಿಂದ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ನಿರ್ವಹಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿ ದರು. ದಯಾಮಣಿ ಕೋಟ್ಯಾನ್‌, ಶೋಭಾ ಅಂಚನ್‌ ಅತಿಥಿಗಳಾಗಿದ್ದರು. ದಯಾನಂದ ಮಂಗಳೂರು ಸ್ವಾಗತಿಸಿ, ವಂದಿಸಿದರು. ಶಿವು ಪುತ್ತೂರು ಹಾಗೂ ಕಿರಣ ಕೋಡಿಕಲ್‌ 85ನೇ ಸ್ವತ್ಛತಾ ಸಂಪರ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಕಸದ ನಿರ್ವಹಣೆ ಮಾಹಿತಿ
ದೇರೆಬೈಲ್‌ನಲ್ಲಿರುವ ಪೆನಿ ನ್ಸಲರ್‌ ಹೊಂಡಾ ಶೋರೂಂ ಸಿಬಂದಿಗಾಗಿ ಸ್ವಚ್ಛತೆಯ ಮಹತ್ವ ಹಾಗೂ ಕಸದ ನಿರ್ವಹಣೆಯ ಕುರಿತು ಕಾರ್ಯಕ್ರಮಹಮ್ಮಿಕೊಳ್ಳಲಾಯಿತು. ನಲ್ಲೂರು ಸಚಿನ್‌ ಶೆಟ್ಟಿ ಪಾಟ್‌ ಕಾಂಪೋಸ್ಟಿಂಗ್‌ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಸರ್ವಿಸ್‌ ಮೆನೇಜರ್‌ ರಾಜೇಶ್‌ ಸ್ವಾಗತಿಸಿದರು. ವಿನೋದ, ನಿಶ್ಚಿತಾ ಸೇರಿದಂತೆ ಅನೇಕ ಸಿಬ್ಬಂದಿ ಭಾಗಿಯಾದರು. ಶಿಶಿರ ಅಮೀನ್‌ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದರು.

ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ
ಸ್ವಚ್ಛ ಪಡೀಲ್‌ ತಂಡದ ಸಹಯೋಗದಲ್ಲಿ ಪಡೀಲ್‌ನಲ್ಲಿ 88ನೇ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆಯನ್ನು ಬಡ್ಲಗುಡ್ಡ ಶಾಂತಿನಗರ ನಿವಾಸಿಗಳ ಒಕ್ಕೂಟದ ಸದಸ್ಯರಿಗಾಗಿ ನಡೆಸಲಾಯಿತು. ಉಮಾನಾಥ ಕೋಟೆ ಕಾರ್‌ ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಿದರು. ಮೋಹನ್‌ ಪಡೀಲ್‌, ಗೋಪಾಲ ಸಾಲ್ಯಾನ್‌, ಕುಸುಮ ಕೇಶವ ಉಪಸ್ಥಿತರಿದ್ದರು. ಉದಯ ಕೆ.ಪಿ. ಕಾರ್ಯಕ್ರಮದ ಹೊಣೆ ಹೊತ್ತಿದ್ದರು.

ಮಾಹಿತಿ ಶಿಬಿರ
ಹಿಂದೂ ಜಾಗರಣ ವೇದಿಕೆ ಬೋಳಾರ, ಯುವಕ ವೃಂದ ಬೋಳಾರ ಇವುಗಳ ಆಶ್ರಯದಲ್ಲಿ ಕಡವಿನ ಬಾಗಿಲು ಬೋಳಾರದಲ್ಲಿ 82ನೇ ಸ್ವಚ್ಛಭಾರತ ಮಾಹಿತಿ ಶಿಬಿರ ನಡೆಯಿತು. ಶೋಭಾ ಶೆಟ್ಟಿ, ಗಂಗೇಶ್‌ ಬೋಳಾರ ಹಾಗೂ ಇನ್ನಿತರ ಸದಸ್ಯರು ಭಾಗಿಯಾಗಿದ್ದರು. ಪುನೀತ್‌ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.

ಪ್ರಾತ್ಯಕ್ಷಿಕೆ
ತಿರುವೈಲು ವಾರ್ಡ್‌ ಕಸ್ಟಮ್ಸ್‌ ಕಾಲನಿ ಯಲ್ಲಿರುವ ಸಾರ್ವಜನಿಕರಿಗಾಗಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ಹಾಗೂ ಸ್ವಚ್ಛತೆಯ ಮಾಹಿತಿ ಶಿಬಿರ ನಡೆಸಲಾಯಿತು. 86 ನೇ ಸಂಪರ್ಕ ಅಭಿಯಾನ ಸುಧೀರ ನರೋಹ್ನ ಉಸ್ತುವಾರಿಯಲ್ಲಿ ಜರಗಿತುರಘು ಸಾಲ್ಯಾನ್‌, ಗೋಪಾಲ, ಸುರೇಶ್‌ ರಾವ್‌, ಜಯರಾಂ ಆಳ್ವ, ಚಾರ್ಲ್ಸ್ ಉಪಸ್ಥಿತರಿದ್ದರು.

ವಿಶೇಷ ಉಪನ್ಯಾಸ
ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಶ್ರೀಗುರು ನರಸಿಂಹ ಸಭಾ ಭವನದಲ್ಲಿ 83ನೇ ಸ್ವಚ್ಛತಾ ಸಂಪರ್ಕ ಅಭಿಯಾನದ ಕಾರ್ಯ ಕ್ರಮ ಕೂಟಮಹಾ ಜಗತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ನೆರವೇರಿತು. ಸ್ವತ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ “ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಅನಂತರ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಶೇಷಗಿರಿ ರಾವ್‌, ಲೀಲಾ ರಾವ್‌ ಉಪಸ್ಥಿತರಿದ್ದರು. ಲಲಿತಾ ಉಪಾಧ್ಯಾಯ ಸ್ವಾಗತಿಸಿದರು. ವಿಜಯಲಕ್ಷ್ಮೀ ಸಂಯೋಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next