Advertisement
ಬಾಳೆಹೂವಿನ ಚಟ್ನಿಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆಮೋತೆ- ಒಂದು, ಹುಣಸೆಹಣ್ಣು- ಒಂದು ಚಮಚ, ತೆಂಗಿನತುರಿ- ಒಂದೂವರೆ ಕಪ್, ಉದ್ದಿನಬೇಳೆ- ಮೂರು ಚಮಚ, ಇಂಗು- ಒಂದು ಚಮಚ, ಕೆಂಪುಮೆಣಸು- ಐದು, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಎರಡು, ತೆಂಗಿನತುರಿ- ಒಂದು ಕಪ್, ಹಸಿಮೆಣಸಿನಕಾಯಿ- ಎರಡು, ಉಪ್ಪು ರುಚಿಗೆ.
Related Articles
Advertisement
ಕೆಸುವಿನ ದಂಟಿನ ಚಟ್ನಿ ಬೇಕಾಗುವ ಸಾಮಗ್ರಿ: ನಾರು ತೆಗೆದು ಹೆಚ್ಚಿದ ಕೆಸುವಿನದಂಟು- ಒಂದು ಕಪ್, ಹುಣಸೆಹಣ್ಣು- ಒಂದು ಚಮಚ, ಬೆಲ್ಲ- ಒಂದು ಚಮಚ, ಧನಿಯ- ಎರಡು ಚಮಚ, ಇಂಗು- ಅರ್ಧ ಚಮಚ, ಕೆಂಪುಮೆಣಸು- ನಾಲ್ಕು, ತೆಂಗಿನತುರಿ- ಒಂದು ಕಪ್, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಕೆಸುವಿನದಂಟಿಗೆ ಹುಣಸೆಹಣ್ಣು, ಉಪ್ಪು, ಬೆಲ್ಲ ಮತ್ತು ಬೇಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಧನಿಯಾ, ಇಂಗು, ಕೆಂಪುಮೆಣಸು- ಇವುಗಳನ್ನು ಹುರಿದು ಮಿಕ್ಸಿಗೆ ಹಾಕಿ. ನಂತರ, ಬೇಯಿಸಿಟ್ಟ ಕೆಸುವಿನದಂಟು ಮತ್ತು ತೆಂಗಿನತುರಿ ಮತ್ತು ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೆಳ್ಳುಳ್ಳಿ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ಇದಕ್ಕೆ ನೀಡಿ. ದಾಳಿಂಬೆ ವಿದ್ ಪುದಿನಾ ಚಟ್ನಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಎಂಟು ಚಮಚ, ಪುದಿನ- ಆರು ಚಮಚ, ಶುಂಠಿ- ಅರ್ಧ ಇಂಚು, ಹಸಿಮೆಣಸಿನಕಾಯಿ- ಮೂರು, ತೆಂಗಿನತುರಿ- ಒಂದು ಕಪ್, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ತೆಂಗಿನತುರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ, ಲಿಂಬೆರಸ ಸೇರಿಸಿ ಮಿಶ್ರಮಾಡಿ, ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿ. ಗೀತಸದಾ