Advertisement
ಕೆಂಪು ಚೆಂಡು
ಕೆಂಪು ಚೆಂಡಿನ ಬಳಕೆ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರ. ಇಲ್ಲಿ ಒಂದು ಚೆಂಡಿನಲ್ಲಿ 80 ಓವರ್ ತನಕ ಆಡಬಹುದು. ಅಂದರೆ ಒಂದು ದಿನದ ಸಂಪೂರ್ಣ ಆಟ ಎಂದು ಪರಿಗಣಿಸಬಹುದು. ಕೆಂಪು ಚೆಂಡು ಏಕದಿನ, ಟಿ20ಯಲ್ಲಿ ಬಳಸುವ ಬಿಳಿ ಚೆಂಡಿಗಿಂತ ಹೆಚ್ಚು ಗಟ್ಟಿಯಾಗಿದೆ. ಕೆಂಪು ಚೆಂಡಿನಲ್ಲಿ ಸ್ವಿಂಗ್ ಮಾಡುವುದು ಕಷ್ಟ ಎನ್ನುವುದು ಹಿಂದೆ ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಗಾಳಿಯ ಒತ್ತಡವು ಚೆಂಡಿನ ಪ್ರತಿ ಬದಿಯ ಮೇಲಿರುವ ಗಾಳಿಯ ಹರಿವನ್ನು ಆಧರಿಸುತ್ತದೆ. ಚೆಂಡಿನ ಒಂದು ಬದಿಯ ಮೇಲೆ ಗಾಳಿಯ ಹರಿವು ತಡೆದಾಗ ಚೆಂಡು ಸ್ವಿಂಗ್ ಆಗುತ್ತದೆ. ಬಿಳಿ ಚೆಂಡು
Related Articles
ಬಿಳಿ ಚೆಂಡು ಏಕದಿನ ಹಾಗೂ ಟಿ20ನಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ಕೆಂಪು ಚೆಂಡಿಗೆ ಹೋಲಿಸಿದರೆ ಈ ಚೆಂಡು ಸ್ವಲ್ಪ ಮೆದು, ಹೊನಲುಬೆ ಳಕಿನಲ್ಲಿ ಹೆಚ್ಚು ಕಣ್ಣಿಗೆ ಕಾಣುತ್ತದೆ. ಬಿಳಿ ಚೆಂಡಿನಲ್ಲಿ ವೇಗದ ಬೌಲರ್‌ಗಳು ಸ್ವಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಾರೆ. ಅದರಂತೆ ಈ ಚೆಂಡಿನಲ್ಲಿ ಸುಲಭವಾಗಿ ಸ್ವಿಂಗ್ ಮಾಡಬಹುದು.
Advertisement
ಗುಲಾಲಿ ಚೆಂಡು
ಇತ್ತೀಚೆಗೆ ಕ್ರಿಕೆಟ್‌ಗೆ ಬಂದ ಗುಲಾಲಿ ಚೆಂಡಿನ ಬಳಕೆ ಹಗಲುರಾತ್ರಿ ಟೆಸ್ಟ್‌ಗೆ ಮಾತ್ರ. ಕತ್ತಲೆಯಲ್ಲಿ ಈ ಚೆಂಡು ಹೆಚ್ಚು ಹೊಳಪಿನಿಂದ ಕಾಣುತ್ತದೆ. ಬ್ಯಾಟ್ಸ್‌ಮನ್, ಬೌಲರ್ ಅಥವಾ ಫೀಲ್ಡರ್ ಯಾರೇ ಆದರೂ ಅವರಿಗೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಾರದು. ಕೆಂಪು ಬಣ್ಣದ ಚೆಂಡು, ಬಿಳಿ ಚೆಂಡಿಗಿಂತಲೂ ಇದು ಹೆಚ್ಚು ಗಟ್ಟಿ. ಫೀಲ್ಡರ್‌ಗಳಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿಯೇ ಕೆಲವು ಕ್ರಿಕೆಟಿಗರು ಈ ಚೆಂಡನ್ನು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಚೆಂಡಿನ ತಯಾರಿಕೆ ಹೇಗೆ?
ವಿಶೇಷ ಮರವೊಂದರ ತಿರುಳಿನಿಂದ ಚೆಂಡನ್ನು ರಚಿಸಲಾಗುತ್ತದೆ. ಇದಕ್ಕೆ ಹೊಲಿದ ಚರ್ಮದ ಹೊದಿಕೆಯ ತಿರುಳನ್ನು ಸುತ್ತಲಾಗುತ್ತದೆ. ನಂತರ ಬಿಗಿಯಾದ ದಾರದಿಂದ ಕಟ್ಟಲಾಗುತ್ತದೆ. ಹೊದಿಕೆಯ ಕಾಲು ಭಾಗ ಕಿತ್ತಳೆ ಹಣ್ಣಿನ ಸಿಪ್ಪೆಯ ಆಕಾರದಲ್ಲಿರುವ ಚರ್ಮದ ನಾಲ್ಕು ತುಂಡುಗಳಿಂದ 90 ಡಿಗ್ರಿಯಿಂದ ಸುತ್ತುವ ಒಂದು ಅರೆಗೋಲದಂತೆ ನಿರ್ಮಿಸಲಾಗುತ್ತದೆ. ಪ್ರಧಾನ ಮಧ್ಯಗೆರೆ ರಚನೆಗೆ ಆರು ಸಾಲುಗಳನ್ನು ದಾರದಿಂದ ಹೊಲಿಯಲಾಗುತ್ತದೆ. ಪುರುಷರ ಕ್ರಿಕೆಟ್‌ಗೆ 5.5ರಿಂದ 5.75 ಔನ್ಸ್ (155.9 ರಿಂದ 163.0 ಗ್ರಾಮ್) ತೂಕವಿರಬೇಕು. ಸುತ್ತಳತೆ 8 13/16ರಿಂದ 9 (224 ಮತ್ತು 229 ಎಂಎಂ) ಒಳಗಿರಬೇಕು. ಪ್ರಮುಖ ಚೆಂಡು ಉತ್ಪಾದಕ ಸಂಸ್ಥೆಗಳು
ಗನ್ ಅಂಡ್ ಮೋರ್ ಕ್ರಿಕೆಟ್ ಬಾಲ್ಸ್, ಕೊಕಬುರ್ರಾ ಕ್ರಿಕೆಟ್ ಬಾಲ್ಸ್, ಸ್ಲಂಜರ್ ಕ್ರಿಕೆಟ್ ಬಾಲ್ಸ್, ಸಿಎ ಕ್ರಿಕೆಟ್ ಬಾಲ್ಸ್ , ಎಸ್‌ಜಿ ಕ್ರಿಕೆಟ್ ಬಾಲ್ಸ್ ಇವುಗಳು ಚೆಂಡು ತಯಾರಿಕೆಯಲ್ಲಿ ಪ್ರಸಿದ್ಧಿ ಹೊಂದಿದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಪಾಯಕಾರಿ ಚೆಂಡುಗಳಿವು?
ಟೆನಿಸ್ ಬಾಲ್‌ಗಳು ಮೆದುವಾಗಿರುತ್ತದೆ. ಲೆದರ್ ಚೆಂಡುಗಳು ಗಡುಸಾಗಿರುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ತಲೆಗೆ ಹೆಲ್ಮೆಟ್, ಕೈಗೆ ಗ್ಲೌಸ್, ಪ್ಯಾಡ್ ಸೇರಿದಂತೆ ಮತ್ತಿತರ ರಕ್ಷಣಾ ಕವಚಗಳನ್ನು ಧರಿಸಿಯೇ ಆಡಬೇಕು. ಚೆಂಡಿನೇಟಿಗೆ ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಭಾರತದ ಕ್ರಿಕೆಟಿಗ ರಮಣ್ ಲಾಂಬಾ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಕಣ್ಣೆದುರಿದೆ. ತಲೆ, ಮುಖದ ಭಾಗಕ್ಕೆ ಈ ಚೆಂಡು ಜೋರಾಗಿ ಬಡಿದರೆ ಪ್ರಾಣಾಪಾಯ ಸಂಭವಿಸಬಹುದು. ಹೀಗಾಗಿ ಐಸಿಸಿ ಮಾನ್ಯತೆ ಪಡೆದ ಕಂಪೆನಿಗಳು ಮಾತ್ರ ವೃತ್ತಿಪರ ಕ್ರಿಕೆಟಿಗರ ಕ್ರಿಕೆಟ್ ಕಿಟ್ ತಯಾರಿಸುತ್ತಾರೆ. ಹೊಸ ಚೆಂಡು ಬಳಕೆಗೆ ಒಂದೇ ಸಲ ಅವಕಾಶ
ಅಂತಾರಾಷ್ಟ್ರೀಯ ಪಂದ್ಯವೊಂದು ಆರಂಭವಾದ ಶುರುವಾತಿನಲ್ಲಿ ತಂಡವೊಂದಕ್ಕೆ ಎಸೆಯಲು ಹೊಸ ಚೆಂಡು ನೀಡಲಾಗುತ್ತದೆ. ಮತ್ತೊಂದು ಇನಿಂಗ್ಸ್ ಆರಂಭವಾದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. ಇದಾದ ಬಳಿಕ ಪಂದ್ಯದ ನಡುವಿನಲ್ಲಿ ಎಲ್ಲಿಯೂ ಹೊಸ ಚೆಂಡು ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಚೆಂಡು ಕಾಣೆಯಾದರೆ ಅಥವಾ ಚೆಂಡು ವಿರೂಪಗೊಂಡರೆ ಮಾತ್ರ ಹೊಸ ಚೆಂಡು ಕೊಡಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 80 ಓವರ್ ಮುಗಿದ ಬಳಿಕ ಹೊಸ ಚೆಂಡನ್ನು ಪಡೆಯಲು ಅವಕಾಶವಿರುತ್ತದೆ. ಕ್ರೀಡಾಂಗಣಕ್ಕೆ ಚೆಂಡನ್ನು ಉಜ್ಜುವುದು, ಚೆಂಡನ್ನು ಸ್ಯಾಂಡ್‌ಪೇಪರ್ ಬಳಸಿ ತಿಕ್ಕುವುದು, ಚೆಂಡಿನ ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ. 2018ರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಆಸೀಸ್ ನಾಯಕ ಸೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷಗಳ ಕಾಲ ನೀಷೇದಕ್ಕೊಳಗಾಗಿದ್ದರು. -ಅಭಿ