Advertisement

Train ಸಂಚಾರದಲ್ಲಿ ವ್ಯತ್ಯಯ: ಯಾವಾಗ, ಏನು? ಇಲ್ಲಿದೆ ವಿವರ…

12:19 AM Sep 02, 2023 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದ ಹೆಚ್ಚುವರಿ ನಾಲ್ಕು ಹಾಗೂ 5ನೇ ಪ್ಲಾಟ್‌ ಫಾರಂಗಳ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Advertisement

ಪೂರ್ಣ ರದ್ದು: ನಂ. 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್‌ ರೈಲು ಸೆ. 8ರಂದು ಪೂರ್ಣ ರದ್ದು. ನಂ. 06485 ಮಂಗಳೂರು ಸೆಂಟ್ರಲ್‌ ಕಬಕ ಪುತ್ತೂರು ರೈಲು ಸೆ.9ರಂದು ಪೂರ್ಣ ರದ್ದು. ನಂ .06484 ಕಬಕ ಪುತ್ತೂರು ಮಂಗಳೂರು ಸೆಂಟ್ರಲ್‌ ರೈಲು ಸೆ.9ರಂದು ಪೂರ್ಣ ರದ್ದಾಗಲಿದೆ.

ಭಾಗಶ ರದ್ದು: ನಂ.10107 ಮಡಗಾಂವ್‌ ಜಂಕ್ಷನ್‌ ಮಂಗಳೂರು ಸೆಂಟ್ರಲ್‌ ಮೆಮು ಎಕ್ಸ್‌ಪ್ರೆಸ್‌ ರೈಲು ಸೆ.8ರಂದು ತೋಕೂರು ಹಾಗೂ ಮಂಗಳೂರು ಸೆಂಟ್ರಲ್‌ ಮಧ್ಯೆ ಸಂಚರಿಸುವುದಿಲ್ಲ.

ನಂ. 10108 ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಜಂಕ್ಷನ್‌ ಮೆಮು ರೈಲು ಸೆ.8ರಂದು ಮಂಗಳೂರು ಸೆಂಟ್ರಲ್‌ ಹಾಗೂ ತೋಕೂರು ಮಧ್ಯೆ ಸಂಚರಿಸುವುದಿಲ್ಲ. ಬದಲಾಗಿ ಈ ರೈಲು ತೋಕೂರಿನಿಂದಲೇ ತನ್ನ ನಿಗದಿತ ಸಮಯ ಸಂಜೆ 4.25ಕ್ಕೆ ಹೊರಡಲಿದೆ.

ನಂ.06602 ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಸ್ಪೆಷಲ್‌ ರೈಲು ಮಂಗಳೂರಿನಿಂದ ಬೆಳಗ್ಗೆ 5.30ಕ್ಕೆ ಹೊರಡಬೇಕಿರುವುದು ಸೆ. 5, 6, 9ರಂದು ಬೆಳಗ್ಗೆ 6ಕ್ಕೆ ಹೊರಡಲಿದೆ.

Advertisement

ನಂ 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಜಂಕ್ಷನ್‌ ಪರಶುರಾಮ ಎಕ್ಸ್‌ಪ್ರೆಸ್‌ ರೈಲು ಸೆ.9ರಂದು ಮಂಗಳೂರು ಸೆಂಟ್ರಲ್‌ನಿಂದ ನಿಗದಿತ ಸಮಯ ಬೆಳಗ್ಗೆ 5.05ಕ್ಕೆ ಹೊರಡುವ ಬದಲು 5.35ಕ್ಕೆ ಹೊರಡಲಿದೆ.
ನಂ.16610 ಮಂಗಳೂರು ಸೆಂಟ್ರಲ್‌ ಕೋಝಿಕೋಡ್‌ ಎಕ್ಸ್‌ಪ್ರೆಸ್‌ ರೈಲು ಸೆ.9ರಂದು ಮಂಗಳೂರು ಸೆಂಟ್ರಲ್‌ ಬದಲಾಗಿ ಮಂಗಳೂರು ಜಂಕ್ಷನ್‌ನಿಂದ 5.15ಕ್ಕೆ ಹೊರಡಲಿದೆ.

ನಂ.22638 ಮಂಗಳೂರು ಸೆಂಟ್ರಲ್‌ -ಡಾ ಎಂಜಿಆರ್‌ ಚೆನ್ನೈ ಸೆಂಟ್ರಲ್‌ ವೆಸ್ಟ್‌ಕೋಸ್ಟ್‌ ಸೂಪರ್‌ಫಾಸ್ಟ್‌ ಅನ್ನು ಎಕ್ಸ್‌ಪ್ರೆಸ್‌ ಸೆ.8ರಂದು ಮಾರ್ಗಮಧ್ಯೆ 30 ನಿಮಿಷ ಕಾಲ ನಿಯಂತ್ರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next