Advertisement

ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ ವರವಿಕೊಳ್ಳ ಜಲಪಾತ

08:55 PM Jun 10, 2024 | Team Udayavani |

ಮುನವಳ್ಳಿ : ನಿಸರ್ಗದ ಮಡಿಲಲ್ಲಿರುವ ವರವಿಕೊಳ್ಳ ಜಲಪಾತ ಮಳೆಗಾಲದಲ್ಲಿ ಮೈತುಂಬಿ ಸುಮಾರು 200 ಅಡಿ ಎತ್ತರದಿಂದ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯ ಅದ್ಭುತವಾಗಿದೆ. ಜಲಪಾತದ ಅಡಿಯ ಗವಿಯಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನವಿದೆ. ತಿಂಡಿ, ಊಟ, ವಸತಿಗಾಗಿ ಮುನವಳ್ಳಿಯಲ್ಲಿ ಉತ್ತಮವಾದ ಹೊಟೇಲ್, ಲಾಡ್ಜ್ ಗಳ ಅನುಕೂಲತೆ ಇದೆ.

Advertisement

ಜಲಪಾತಕ್ಕೆ ಹೋಗುವ ದಾರಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಿಂದ ನರಗುಂದ ಮಾರ್ಗವಾಗಿ 4 ಕಿಮೀ ಕ್ರಮಿಸಬೇಕು, ನಂತರ ವರವಿಕೊಳ್ಳ ಜಲಪಾತದ ಮಾರ್ಗಸೂಚಿ ಫಲಕದಿಂದ 2 ಕಿಮೀ ಕ್ರಮಿಸಬೇಕು. ಪ್ರಸಿದ್ಧ ಪುಣ್ಯಕ್ಷೇತ್ರ ಯಕ್ಕೇರಿ ಕರೆಮ್ಮ ದೇವಸ್ಥಾನಕ್ಕಿಂತ 1 ಕಿ.ಮೀ. ಮೊದಲೇ ವರವಿಕೊಳ್ಳ ಜಲಪಾತ ತಿರುವು ರಸ್ತೆ ಇದೆ. ಕಚ್ಚಾ ರಸ್ತೆ ಇದ್ದರೂ ಜಲಪಾತದ ವರೆಗೆ ವಾಹನ ಸಂಚಾರಕ್ಕೆ ಅನುಕೂಲಕರವಿದೆ. ಗುಡ್ಡದ ಮೇಲೆ ಅಡ್ಡಾಡಲು ಬಹಳ ಮಜವೆನಿಸುತ್ತದೆ. ಪ್ರವಾಸಿಗರಿಗೆ ಅನುಕೂಲವಾಗಲೆಂದು ಮಾರ್ಗಸೂಚಿ ಫಲಕವನ್ನು ಅಳವಡಿಸಲಾಗಿದೆ. ಸವದತ್ತಿಯಿಂದ ಮುನವಳ್ಳಿ ಮಾರ್ಗವಾಗಿ 20 ಕಿಮೀ ಕ್ರಮಿಸಬೇಕು.

ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ಪೂಜಾ ಕೈಂಕರ್ಯ ನೆರವೇರಿಸಿ, ಪೂಜೆ ನೆರವೇರಿಸುತ್ತಾರೆ. ಕೋರಿಶೆಟ್ಟರ ಮನೆತನದವರಿಂದ ಪ್ರತಿ ಸೋಮವಾರ ಪೂಜೆ ನೆರವೇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next