Advertisement

ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಬಂಗಾರ ದಾನ

02:55 PM Mar 01, 2022 | Team Udayavani |

ನವದೆಹಲಿ: ಅನಾಮಧೇಯ ದಾನಿಯೊಬ್ಬರು ಕಾಶಿ ವಿಶ್ವನಾಥ ದೇವಸ್ಥಾನ(ಕೆವಿಟಿ)ಕ್ಕೆ ಬರೋಬ್ಬರಿ 60 ಕೆಜಿ ಚಿನ್ನವನ್ನು ದಾನವಾಗಿ ನೀಡಿದ್ದು, ಇದರಲ್ಲಿ 37 ಕೆಜಿ ಬಂಗಾರವನ್ನು ದೇವಾಲಯದ ಗರ್ಭಗುಡಿಯ ಒಳ ಗೋಡೆಗಳಿಗೆ ಬಳಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನು ಘೋಷಿಸಲು ಆರ್‌ಸಿಬಿ ಯಾಕೆ ವಿಳಂಬ ಮಾಡುತ್ತಿದೆ?

ಭಕ್ತರು ದೇವಾಲಯವನ್ನು ಪ್ರವೇಶಿಸಿದಾಗ ಝೋರೊಖಾ ದರ್ಶನ್ (ಹೊರಗಿನ ಬಾಗಿಲಿನಿಂದ ದರ್ಶನ ಪಡೆಯುವುದು) ಪಡೆಯುವ ವೇಳೆ ಭಕ್ತರಿಗೆ ಚಿನ್ನದ ಲೇಪನದ ಗೋಡೆಗಳನ್ನು ನೋಡಬಹುದಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ದೃಶ್ಯವನ್ನು ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಮಂಡಳಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಗರ್ಭಗುಡಿಯ ಒಳ ಗೋಡೆಗೆ ಚಿನ್ನದ ಲೇಪನ ಮಾಡಿರುವುದು ಗಮನ ಸೆಳೆಯುವಂತಿತ್ತು ಎಂದು ವರದಿ ತಿಳಿಸಿದೆ.

ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ದಾನಿಯೊಬ್ಬರು 60ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಡಿವಿಷನಲ್ ಕಮಿಷನರ್ ದೀಪಕ್ ಅಗರ್ವಾಲ್ ತಿಳಿಸಿದ್ದಾರೆ. ಸುಮಾರು 37 ಕೆಜಿ ಚಿನ್ನವನ್ನು ಗರ್ಭಗುಡಿಯ ಒಳಗೋಡೆಗೆ ಬಳಸಿಕೊಳ್ಳಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯ ಗರ್ಭಗುಡಿಯ ಕೆಳಭಾಗದ ಗುಮ್ಮಟಕ್ಕೆ ಬಳಸಲಾಗುವುದು ಎಂದು ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 13ರಂದು ಕಾಶಿ ವಿಶ್ವನಾಥ್ ಧಾಮ್ ಅನ್ನು ಔಪಚಾರಿಕವಾಗಿ ತೆರೆಯುವ ಒಂದು ತಿಂಗಳ ಮೊದಲು ಈ ದಾನಿ ದೇವಾಲಯದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. 60 ಕೆಜಿ ಚಿನ್ನ ದೇಣಿಗೆಯಾಗಿ ನೀಡಲಿದ್ದು, ತನ್ನ ಹೆಸರನ್ನು ಬಹಿರಂಗಪಡಿಸಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next