ವಾರಣಾಸಿ: ವಾರಣಾಸಿಯಲ್ಲಿ ಆಟೋಗೆ ಕಾರು ಅಡ್ಡಗಟ್ಟಿದ ಕಾರಣ ಪೊಲೀಸರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಪೊಲೀಸ್ ಅಧಿಕಾರಿಯ ಹೆಂಡತಿ ಮತ್ತು ಮಕ್ಕಳು ಗಾಬರಿಯಿಂದ ಕಾರಿನೊಳಗೆ ಕಾಯುತ್ತಿದ್ದಾಗ ಅರ್ಧ ಡಜನ್ ಜನರು ಅತನ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಆರಂಭದಲ್ಲಿ ಹೋರಾಡಲು ಪ್ರಯತ್ನಿಸಿದರು ಆದರೆ ಗುಂಪಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಸಾಧ್ಯವಾಗಲಿಲ್ಲ. ನಂತರ ಬೇರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸಿದ್ದಾರೆ.
ಸಮವಸ್ತ್ರದಲ್ಲಿಲ್ಲದ ಪೊಲೀಸ್ ಅಧಿಕಾರಿ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದಾಗ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಜನಸಮೂಹ ಜಮಾಯಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕಾರಿನಿಂದ ಅವರನ್ನು ಹೊರಗೆಳೆದು ಹಲ್ಲೆ ನಡೆಸಲಾಗಿದೆ.
ರಾಜತಾಲಾಬ್‌ನ ಸ್ಟೇಷನ್ ಹೆಡ್ ಆಫೀಸರ್ (ಎಸ್‌ಎಚ್‌ಒ) ಅಜಿತ್ ವರ್ಮಾ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ. ಕುಟುಂಬದವರ ಮುಂದೆ ಥಳಿಸಬೇಡಿ ಎಂದು ನೆರೆದಿದ್ದ ಜನರಲ್ಲಿ ಮನವಿ ಮಾಡಿದರೂ ಜನರು ಕೇಳಲಿಲ್ಲ.
ಒಬ್ಬ ಕಾನ್ಸ್‌ಟೇಬಲ್ ಪೊಲೀಸರನ್ನು ಉಳಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದನು, ಆದರೆ ಗುಂಪನ್ನು ತಡೆಯಲು ಸಾಧ್ಯವಾಗಲಿಲ್ಲ, ಅವರು ಎಸ್‌ಎಚ್‌ಓ ಗೆ ಥಳಿಸುತ್ತಿದ್ದರು. ಕೆಲವರು ಕೋಲುಗಳಿಂದ ಕೂಡ ಹೊಡೆದಿದ್ದಾರೆ ಎನ್ನಲಾಗಿದೆ.
ಸಮೀಪದ ಪೊಲೀಸ್ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಜನರನ್ನು ಮನವೊಲಿಸಿ ಅವರನ್ನು ಹೋಗಲು ಬಿಡುವಂತೆ ಮಾಡಿದರು.
ಎರಡೂ ಕಡೆಯವರು ಪರಸ್ಪರ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.