ವನ್ನು ಸೃಷ್ಟಿಸಿ, ಅದನ್ನು ಮುಚ್ಚಿ ಹಾಕಲು ಹಣಕ್ಕೆ ಬೇಡಿಕೆ ಇರಿಸಿದ ಆರೋಪದಲ್ಲಿ ಆಂಧ್ರ ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
Advertisement
ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಪುರುಷೋತ್ತಮ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತಾನು ಮಂಗಳೂರು ಲೋಕಾಯುಕ್ತ ಇಲಾಖೆಯ ಅಧಿ ಕಾರಿ ಪ್ರಭಾಕರ ಎಂದು ಪರಿಚಯಿಸಿದ್ದ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದು, ಟೆಕ್ನಿಕಲ್ ಟೀಮ್ ಬರುವ ಮೊದಲು ಮಾತನಾಡಿ ಮುಗಿಸಿ ಎಂದಿದ್ದ. ಪುರುಷೋತ್ತಮ ಅವರು ಮಂಗಳೂರು ಲೋಕಾಯುಕ್ತದಲ್ಲಿ ವಿಚಾರಿಸಿದಾಗ ಪ್ರಭಾಕರ ಎಂಬ ವ್ಯಕ್ತಿ ಇಲ್ಲವೆಂದು ತಿಳಿದುಬಂದಿತ್ತು. ಟ್ರಾ ಕಾಲರ್ನಲ್ಲಿ ಪ್ರಭಾಕರ, ಲೋಕಾಯುಕ್ತ ಪಿಐ ಎಂದು ತೋರಿಸಿತ್ತು. ಇದೇ ರೀತಿ ಪುರಸಭೆಯಲ್ಲಿ ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳಾದ ಲಿಲ್ಲಿ ನಾಯರ್ ಮತ್ತು ಕೃಷ್ಣ ಅವರಿಗೂ ಇದೇ ರೀತಿ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಅನುಮಾನಗೊಂಡ ಪುರುಷೋತ್ತಮ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಿವಾಸಿ ಧನಂಜಯ ರೆಡ್ಡಿ ತೋಟಾ(31)ನನ್ನು ಪೊಲೀಸರು ಬಂಧಿಸಿದ್ದಾರೆ.