ಹೊಸದಿಲ್ಲಿ: ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಎರಡು ವರ್ಷಗಳಲ್ಲಿ ದಾಖಲೆಯ 12.92 ಕೋಟಿ ಜನರು ಭೇಟಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2021 ರಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಉದ್ಘಾಟಿಸಿದ್ದರು. ಅಂದಿನಿಂದ, ಮಹಾದೇವನ ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ಮತ್ತು ಶ್ರಾವಣ ಪವಿತ್ರ ಮಾಸದಲ್ಲಿ ದೇವಾಲಯವು ಅಪಾರ ಸಂಖ್ಯೆಯ ಭಕ್ತರನ್ನು ಕಂಡಿದೆ.
ಶ್ರಾವಣ ತಿಂಗಳೊಂದರಲ್ಲೇ 1.6 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜುಲೈನಲ್ಲಿ 72 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಆಗಸ್ಟ್‌ನಲ್ಲಿ ಈ ಸಂಖ್ಯೆ 95.6 ಲಕ್ಷದಷ್ಟಿತ್ತು. ಜನವರಿ 2023 ರಿಂದ ಡಿಸೆಂಬರ್ ವರೆಗೆ ದೇವಾಲಯವು 5.3 ಕೋಟಿ ಜನರನ್ನು ಕಂಡಿತು.
ಈ ಹಿಂದೆ ದೇವಾಲಯದ ವಿಸ್ತೀರ್ಣ ಕೇವಲ 3000 ಚದರ ಅಡಿ ಇತ್ತು. 2021 ರಲ್ಲಿ, ಇದನ್ನು ಸುಮಾರು 5 ಲಕ್ಷ ಚದರ ಅಡಿಗಳಿಗೆ ವಿಸ್ತರಿಸಲಾಯಿತು, ಇದು ದೇವಾಲಯದ ಆವರಣದಲ್ಲಿ 50,000 – 75,000 ಭಕ್ತರಿಗೆ ಅವಕಾಶ ನೀಡುತ್ತದೆ.