Advertisement

ಗಂಜಿ ಕೇಂದ್ರದಲ್ಲಿ ವರಮಹಾಲಕ್ಷ್ಮೀ ಪೂಜೆ

11:25 AM Aug 11, 2019 | Suhan S |

ತೇರದಾಳ: ಕೃಷ್ಣಾ ನದಿಯ ಪ್ರವಾಹದಿಂದ ನಿರಾಶ್ರಿತರಾದ ತಮದಡ್ಡಿ ಹಾಗೂ ಹಳಿಂಗಳಿ ಗ್ರಾಮದ ಗುಳ್ಳಿಮಳಿ ಭಾಗದ ಜನರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಜರುಗಿತು.

Advertisement

ಮುಖಂಡ ಪ್ರೊ| ಬಸವರಾಜ ಕೊಣ್ಣೂರ ಪೂಜೆ ಹಾಗೂ ಸಿಹಿ ಭೋಜನದ ವ್ಯವಸ್ಥೆ ಮಾಡಿದ್ದರು. ನಗರದ ಜೆವಿ ಮಂಡಳದ ಸಮುದಾಯ ಭವನದಲ್ಲಿ ಮತ್ತು ನೀಲಕಂಠೇಶ್ವರ ಮಂದಿರದ ಆವರಣದಲ್ಲಿ ತಮದಡ್ಡಿ ಗ್ರಾಮದವರಿಗೆ, ಹಳಿಂಗಳಿ ಗ್ರಾಮದ ಗುಳ್ಳಿಮಳಿ ಭಾಗದ ಜನರಿಗೆ ಹಳಿಂಗಳಿ ಗುಡ್ಡದ ಭಾಗದಲ್ಲಿ ವಸತಿ ವ್ಯವಸ್ಥೆ ಜೊತೆಗೆ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ತೇರದಾಳ ಮತಕ್ಷೇತ್ರದಲ್ಲಿ ಒಟ್ಟು 9 ಕಡೆಗೆ ಗಂಜಿ ಕೇಂದ್ರಗಳಿವೆ. ಎಲ್ಲ ಗಂಜಿ ಕೇಂದ್ರಗಳಲ್ಲೂ ವರಮಹಾಲಕ್ಷ್ಮೀ ದೇವಿ

ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉಡಿ ತುಂಬಲಾಯಿತು. ನಿರಾಶ್ರಿತ ಮಹಿಳೆಯರು ಆರುತಿ ಮಾಡಿದರು. ನಂತರ ಶಿರಾ ಮತ್ತು ಫಲಾವ್‌ ಊಟ ಬಡಿಸಲಾಯಿತು. ಜೆವಿ ಮಂಡಳದ ಸಮುದಾಯ ಭವನದಲ್ಲಿ ಒಟ್ಟು 300ಕ್ಕೂ ಅಧಿಕ ಜನರು ಹಾಗೂ ನೀಲಕಂಠೇಶ್ವರ ಮಂದಿರದ ಆವರಣದ ಗಂಜಿ ಕೇಂದ್ರದಲ್ಲಿ 450ಕ್ಕೂ ಹೆಚ್ಚಿನ ಜನರು ವಾಸವಾಗಿದ್ದು, ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊ| ಬಸವರಾಜ ಕೊಣ್ಣೂರ ಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಚಂದ್ರಶೇಖರ ಶಿವಾಚಾರ್ಯ ಶ್ರೀ, ಭುಜಬಲಿ ಕೆಂಗಾಲಿ, ಬಸವರಾಜ ಬಾಳಿಕಾಯಿ, ನಂದು ಗಾಯಕವಾಡ, ಶಶಿಕುಮಾರ ವಲ್ಯಾಪೂರ, ಡಾ| ಜೆ.ಬಿ. ಆಲಗೂರ, ಡಿ.ಬಿ. ಪಾಟೀಲ, ವಿಜಯ್‌ ಶಿಗ್ಲಿ, ಎಸ್‌.ಎನ್‌. ಹೆಬ್ಟಾಳೆ, ಆರ್‌.ಬಿ. ಬಾಳಿಕಾಯಿ, ಕಲ್ಲಪ್ಪ ಕಬಾಡಗಿ, ಬಸವರಾಜ ಕಲಬುರ್ಗಿ, ಪ್ರಭು ಹೂಗಾರ, ಈರಪ್ಪ ಮಗದುಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next