Advertisement

ಇಂದು(ಆ.16) ವರಮಹಾಲಕ್ಷ್ಮೀ ವ್ರತ: ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುವ ಮಹಾಲಕ್ಷ್ಮೀ

05:11 PM Aug 17, 2024 | Team Udayavani |

ಧಾನ್ಯ, ಆರೋಗ್ಯ, ಆಯು, ಐಶ್ವರ್ಯ, ಸೌಭಾಗ್ಯ ಮತ್ತು ಸಂತಾನಪ್ರದಾಯಕ ಒಂದು ವ್ರತಪೂಜೆಯೇ ವರಮಹಾಲಕ್ಷ್ಮೀ ವ್ರತ ಹಬ್ಬದ ವೈಶಿಷ್ಟé. ಶ್ರಾವಣ ಶುಕ್ಲ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆಯ ಮೊದಲ ಶುಕ್ರವಾರದಂದು ಆಚರಿಸಲ್ಪಡುವುದು ವಾಡಿಕೆ. ಬಹುತೇಕ ದಕ್ಷಿಣ ಭಾರತದ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳು ನಾಡು, ತೆಲಂಗಾಣ ಭಾಗಗಳಲ್ಲಿ ಈ ವ್ರತದಾಚರಣೆ ಹೆಚ್ಚು ಕಂಡುಬರುತ್ತದೆ.

Advertisement

ಸ್ಕಂದ ಪುರಾಣದಲ್ಲೊಂದು ಕಥೆಯಂತೆ, ಭೂಲೋಕದಲ್ಲಿ ಸ್ತ್ರೀಯರ ಶ್ರೇಯೋಭಿವೃದ್ಧಿಗೆ ಯಾವ ವ್ರತವನ್ನು ನಡೆಸಬೇಕು ಎಂದು ಪಾರ್ವತಿಯು ಪರಮೇಶ್ವರನನ್ನು ಭಿನ್ನವಿಸಿಕೊಂಡಾಗ, ಶಿವನು ವರಮಹಾಲಕ್ಷ್ಮೀ ವ್ರತದ ಮಹಿಮೆಯನ್ನು ತಿಳಿಸಿ ದನಂತೆ. ಚಾರುಮತಿಯ ಪತಿ ನಿಷ್ಠೆ ಮತ್ತು ಸಂಸಾರದ ಮೇಲಿನ ಭಕ್ತಿಯನ್ನು ಕಂಡು, ಲಕ್ಷ್ಮೀದೇವಿ ಕನಸಿನಲ್ಲಿ ಬಂದು ವರಮಹಾಲಕ್ಷ್ಮೀ ವ್ರತ ಕೈಗೊಳ್ಳುವಂತೆ ಸೂಚಿಸಿದಳಂತೆ. ಅಂದು ಚಾರುಮತಿ ತನ್ನ ಸಂಗಡಿಗರ ಜತೆ ವರಲಕ್ಷ್ಮೀ ಹಬ್ಬವನ್ನು ಭಕ್ತಿಯಿಂದ ನಡೆಸಿ ಮಹಾಲಕ್ಷ್ಮೀಯನ್ನು ಸ್ತುತಿಸಿದ ಈ ಪ್ರಸಿದ್ಧ ಸಾಲು ಶ್ರೀ ಮಹಾಲಕ್ಷ್ಮೀ ಧ್ಯಾನ ಸ್ತೋತ್ರ ಎಂದೇ ಜನಜನಿತ.

ಶ್ಯಾಮಬಾಲಳ ಕಥೆಯೂ ಈ ವ್ರತದ ಮಹಿಮೆಯನ್ನು ಕೊಂಡಾಡುತ್ತದೆ. ಪಗಡೆ ಆಟದಲ್ಲಿ ಶಿವನಿಂದ ಪರಾಜಿತಳಾದ ಉಮೆಯು ಸಿಟ್ಟಿನಿಂದ ನಿರ್ಣಾಯಕನಾಗಿ ನಿಂತಿದ್ದ ಚಿತ್ರನೇಮಿಗಿತ್ತ ಶಾಪ, ವರಮಹಾಲಕ್ಷ್ಮೀ ವ್ರತದಾಚರಣೆಯಿಂದ ಅದರ ವಿಮೋಚನೆಯ ಒಂದು ಕಥೆಯಿದೆ. ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿ ಮತ್ತು ಪುಷ್ಟಿ ಎಂಬ ಎಂಟು ಶಕ್ತಿಗಳನ್ನು ಉಲ್ಲೇಖೀಸುತ್ತಾರೆ ಪ್ರಾಚೀನರು. ಸಂಪತ್ತು, ಭೂಮಿ, ಅಧ್ಯಯನ, ಪ್ರೀತಿ, ಯಶಸ್ಸು, ಶಾಂತಿ, ಸುಖ ಮತ್ತು ಶಕ್ತಿ. ಈ ಎಲ್ಲ ಶಕ್ತಿಗಳು ಲಕ್ಷ್ಮಿಯೇ. ಆಕೆಯೇ ಅಷ್ಟಲಕ್ಷ್ಮೀ. ವಿಷ್ಣುವೇ ಅಷ್ಟಲಕ್ಷ್ಮೀಪತಿ. “ಆದಿಲಕ್ಷ್ಮೀ … ಧಾನ್ಯಲಕ್ಷ್ಮೀ… ಧೈರ್ಯಲಕ್ಷ್ಮೀ… ಗಜಲಕ್ಷ್ಮೀ…. ಸಂತಾನಲಕ್ಷ್ಮೀ…. ವಿಜಯಲಕ್ಷ್ಮೀ… ವಿದ್ಯಾಲಕ್ಷ್ಮೀ… ಧನಲಕ್ಷ್ಮೀ… ಸದಾ ಪಾಲಯ ಮಾಮ್‌’ ಎಂದು ಸ್ತುತಿಯೊಂದಿಗೆ ಅಷ್ಟಲಕ್ಷ್ಮೀಯರನ್ನು ಪೂಜಿಸುವುದೇ ಮಹಾಲಕ್ಷ್ಮೀ ಪೂಜೆ.

ಯಾರು ಲಕ್ಷ್ಮೀ?: ವೇದಗಳು ಲಕ್ಷ್ಮೀಯ ಗುಣಗಳ ಭಂಡಾರವಾಗಿದೆ. ರಾಮಾಯಣವನ್ನು ವೇದದ ಅಪರಾವತಾರ ಎನ್ನುತ್ತಾರೆ. ಸೀತಾದೇವಿಯ ಮಹಾ ಚರಿತ್ರೆಯೇ ಅದರ ಸಾರ. ಸೀತೆಯೇ ಲಕ್ಷ್ಮೀ. ರಾಮಾ ಯಣವೊಂದು ಲಕ್ಷ್ಮೀ ಚರಿತೆ ಎಂದು ವಾಲ್ಮೀಕಿಯೇ ವರ್ಣಿ ಸಿದ್ದಾರೆ. ವೇದಭಾಗವಾದ ಶ್ರೀಸೂಕ್ತ, ಲಕ್ಷ್ಮೀಸ್ತುತಿಯೇ ಆಗಿದೆ. ಲಕ್ಷ್ಮೀತಂತ್ರ ಸಂಹಿತೆ, ಪಾಂಚರಾತ್ರವೂ ಲಕ್ಷ್ಮೀಯನ್ನೇ ಕುರಿತಾಗಿದೆ. ಸಮಸ್ತ ಲೋಕಕ್ಕೆ ಮಾತೃ ಸ್ವರೂಪಿ ಲಕ್ಷ್ಮೀ, ಪಿತೃ ಸ್ವರೂಪಿ ವಿಷ್ಣು ಎಂದು ಶ್ರುತಿ, ಸ್ಮತಿ, ಪುರಾಣೇ ತಿಹಾಸಗಳೂ ಸಾರುತ್ತವೆ. ಲಕ್ಷ್ಮೀನಾರಾಯಣರ ಪೂಜೆಯಲ್ಲಿ ಶ್ರೀಸೂಕ್ತ ಪುರುಷಸೂಕ್ತವನ್ನು ಬಳಸುವುದನ್ನು ಕಂಡಿದ್ದೇವೆ. ಯಾರು ಲಕ್ಷ್ಮೀ? ವೇದಸಮಸ್ತ ಗುಣಲಕ್ಷಣಗಳಿಂದ ಕೂಡಿದವಳು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ ಧಾನ್ಯ, ಜಯ ಇತ್ಯಾದಿ ಲಕ್ಷಣಗಳುಳ್ಳವಳು. ಭಕ್ತರಿಗೆ ಇವೆಲ್ಲವನ್ನೂ ಕರುಣಿಸುವವಳು ಲಕ್ಷ್ಮೀ ಎಂದರ್ಥ. ಎಲ್ಲ ದೇವ ಅಸುರರಿಂದ, ಋಷಿಮುನಿಗಳಿಂದ, ಮನುಷ್ಯರಿಂದ ಪ್ರಾರ್ಥಿ ಸಲ್ಪಡುವವಳು ಅವಳು. ದಿವ್ಯ ಲಕ್ಷಣ ಸಂಪನ್ನೆಯಾದವಳು. ಸಕಲ ಜೀವರಾಶಿಗಳ ಪಾಪಪುಣ್ಯಗಳನ್ನು ಕುರಿತು ಚಿಂತಿಸುವವಳು ಲಕ್ಷ್ಮೀ ಎಂದು ಲಕ್ಷ್ಮೀ ತಂತ್ರದ ಉಲ್ಲೇಖ.

ಲ – ಕ್ಷ್ಮೀ ಎಂದರೆ ಲಾ - ದಾನೇ ಕ್ಷಿಪ – ಪ್ರೇರಣೇ.
ಭಕ್ತರಿಗೆ ಅವರ ಇಷ್ಟಾರ್ಥಗಳನ್ನು ದಾನ ಮಾಡುವವ ಳಾದುದರಿಂದ, ಅವರ ಕಾಯ ವಾಚಾ ಮನಸ್ಸನ್ನು ಪ್ರೇರಣೆ ಮಾಡು ವುದರಿಂದಲೂ ಅವಳು ಲಕ್ಷ್ಮೀ ಎಂದರ್ಥ. ಪ್ರಕೃತಿಯನ್ನು ಸೃಷ್ಟಿ ಸ್ಥಿತಿ ಲಯಗಳಲ್ಲಿ ಹಾಕುವವಳು ಎಂದು ಲಕ್ಷ್ಮೀ ಶಬ್ದವನ್ನು ಹೀಗೂ ವಿಶ್ಲೇಷಿಸುತ್ತಾರೆ. ಕಾಲತತ್ತÌವನ್ನು ಮಾಡಬಲ್ಲವಳೂ ಎಂದು ಮತ್ತೂಂದರ್ಥ. ಕಾಲದಲ್ಲೂ ಲಕ್ಷ್ಮೀ ಸಾನಿಧ್ಯವಿದೆ. ಲಕ್ಷ್ಮೀ ದೇವಿಯನ್ನು ಶ್ರೀ ಎಂದು ಕರೆಯುವುದನ್ನು ಕಾಣುತ್ತೇವೆ. ಶ್ರೀಯಂ ದೇವೀಂ !

Advertisement

ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next