Advertisement
ಈ ಬಾರಿ ಬರದ ಛಾಯೆ ರಾಮನಗರ ಜಿಲ್ಲೆಯ ಜೊತೆಗೆ ಚನ್ನಪಟ್ಟಣ ತಾಲೂಕನ್ನು ಆವರಿಸಿದ್ದು, ಇದರ ಜೊತೆಗೆ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣಿನ ದರ ದುಬಾರಿ ಯಾಗಿ ಪರಿಣಮಿಸಿ ರುವುದು ಹಬ್ಬ ಮಾಡಲು ಜನತೆ ಉತ್ಸಾಹ ತೋರದೆ ಹಿಂಜರಿಯುವ ಲಕ್ಷಣ ಗಳು ಗೋಚರಿಸುತ್ತಿವೆ.
Related Articles
Advertisement
ಕೃತಕ ಅಭಾವ: “ಹಬ್ಬದ ಸಂದರ್ಭದಲ್ಲಿ ಗ್ರಾಹಕ ರಿಂದ ಹೂವುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ರೈತರು ಹಬ್ಬಕ್ಕೆ ಮುಖ್ಯವಾಗಿ ಬಳಸುವ ಕನಕಾಂಬರ, ಸೇವಂತಿಗೆ ಹಾಗೂ ಗುಲಾಬಿ ಯನ್ನು ಹೆಚ್ಚಾಗಿ ಕೀಳದೆ ಹಾಗೆಯೇ ಬಿಟ್ಟಿರುತ್ತಾರೆ. ಇದ ರಿಂದಾಗಿ, ಮಾರುಕಟ್ಟೆಯಲ್ಲಿ ಸ್ವಲ್ಪ ಅಭಾವ ಉಂಟಾ ಗುತ್ತದೆ’ ಎಂದು ಹೆಸರು ಹೇಳಲಿಚ್ಚಿಸದ ವ್ಯಾಪಾರಿ ಯೊಬ್ಬರ ಅಭಿಪ್ರಾಯವಾಗಿದೆ.
“ಹಬ್ಬದ ವಾರ ಬಂದಾಗ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಇದೇ ಸಂದರ್ಭಕ್ಕಾಗಿ ಕಾಯುವ ರೈತರು, ಹೂವು ಕೀಳತೊಡಗುತ್ತಾರೆ. ಬೇಡಿಕೆ ಹೆಚ್ಚಳದ ಜೊತೆಗೆ ದರವು ಏರಿಕೆಯಾಗುತ್ತದೆ. ಗ್ರಾಹ ಕರಿಗೆ ಸ್ವಲ್ಪ ಹೊರೆ ಎನಿಸಿದರೂ, ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.
ಒಂದೇ ದಿನದಲ್ಲಿ ದರ ದುಪ್ಪಟ್ಟಾಗಿದೆ:
ಆಷಾಢ ಮಾಸ ಕಳೆದು ಅಧಿಕ ಶ್ರಾವಣ ಮಾಸ ಬಂದಿದ್ದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಎರಡು ತಿಂಗಳಿಂದ ಹೂವುಗಳ ದರವೂ ಇಳಿಮುಖವಾಗಿತ್ತು. ಹಬ್ಬದ ವಾರ ಆರಂಭವಾ ಗುತ್ತಿದ್ದಂತೆ, ಒಂದೇ ದಿನದಲ್ಲಿ ಬೆಲೆಯು ದುಪ್ಪಟ್ಟಾಗಿದೆ. ಇದರ ಜೊತೆಗೆ, ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.
ಹಬ್ಬಕ್ಕೆ ಹೂವಿನಷ್ಟೇ ಹಣ್ಣುಗಳಿಗೂ ಬೇಡಿಕೆ ಹೆಚ್ಚು. ಹಾಗಾಗಿ, ಹೂವಿನ ದರದ ಜೊತೆಗೆ ಹಣ್ಣುಗಳ ದರವೂ ಏರುಗತಿಯಲ್ಲಿ ಸಾಗಿದೆ. ಪ್ರತಿ ಕೆ.ಜಿ.ಗೆ ?180 ಇದ್ದ ಸೇಬಿನ ದರ ಇದೀಗ ? 250ಕ್ಕೆ ಹೆಚ್ಚಳವಾಗಿದೆ. ಏಲಕ್ಕಿ ಬಾಳೆಹಣ್ಣು 120ರಿಂದ 160ಕ್ಕೆ ಜಿಗಿದಿದೆ. ಜೋಡಿ (2) ಪೈನಾಪಲ್ ಹಣ್ಣಿನ ದರ 60ರಿಂದ 100 ಆಗಿದೆ.
ಹೂವಿನ ದರವನ್ನು ಕೇಳಿ ಆಶ್ಚರ್ಯ ವ್ಯಕ್ತಪಡಿಸುತ್ತಿರುವ ಗ್ರಾಹಕರು ಒಂದು ಕೆ.ಜಿ ಖರೀದಿಸುವ ಬದಲು ಅರ್ಧ ಕೆ.ಜಿ. ಖರೀದಿಸಿ ಕೊಂಡು ಹೋಗು ತ್ತಿದ್ದಾರೆ. ಇದೇ ರೀತಿ ಎರಡು ಕೆ.ಜಿ. ಖರೀದಿಸಲು ಬರುವವರು ದರ ಕೇಳಿ ಹೌಹಾರಿ, ತಾವಂದುಕೊಂಡಕ್ಕಿಂತ ಅರ್ಧ ಕೊಂಡುಕೊಳ್ಳುತ್ತಾರೆ.-ಜಯಮ್ಮ, ಹೂವಿನ ವ್ಯಾಪಾರಿ, ಚನ್ನಪಟ್ಟಣ
ಶ್ರಾವಣ ಮಾಸದಲ್ಲಿ ಹಣ್ಣುಗಳ ಪೂರೈಕೆ ಸ್ವಲ್ಪಮಟ್ಟಿಗೆ ಕಡಿಮೆ ಇರಲಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಳವಾ ಗಿರುವುದರಿಂದ ದರವೂ ಏರಿಕೆಯಾಗು ವುದು ಮಾಮೂಲು. ದರ ಇಷ್ಟಕ್ಕೇ ನಿಲ್ಲು ವುದಿಲ್ಲ’ “ವರಮಹಾಲಕ್ಷ್ಮೀ ಹಬ್ಬದ ವಾರ ಈಗಷ್ಟೇ ಆರಂಭವಾಗಿದೆ. ಹಬ್ಬದ ದಿನ ವಾದ ಶುಕ್ರವಾರ ದವರೆಗೂ ಹೂವು ಮತ್ತು ಹಣ್ಣಿನ ವ್ಯಾಪಾರ ಜೋರಾಗಿ ಇರ ಲಿದೆ. ಹಬ್ಬದ ದಿನದ ಹೊತ್ತಿಗೆ ಹಣ್ಣುಗಳ ದರ ಮತ್ತಷ್ಟು ಏರಿಕೆಯಾಗಬಹುದು. -ಶಿವಕುಮಾರ್,ಹಣ್ಣಿನ ವ್ಯಾಪಾರಿ, ಚನ್ನಪಟ್ಟಣ
– ಎಂ.ಶಿವಮಾದು