Advertisement

ವರದರಾಜು ಪ್ರಶಸ್ತಿ ಪ್ರದಾನ

07:20 AM Feb 23, 2019 | |

ಡಾ. ರಾಜ್‌ಕುಮಾರ್‌ ಅಭಿನಯದ ಎಲ್ಲ ಚಿತ್ರಗಳ ಕಥೆಯನ್ನು ಆಯ್ಕೆ ಮಾಡುತ್ತಿದ್ದವರೇ ಅವರ ಸೋದರ ಎಸ್‌.ಪಿ. ವರದರಾಜ್‌. ಭೂತಯ್ಯನ ಮಗ ಅಯ್ಯು, ಒಡಹುಟ್ಟಿದವರು ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದು ಅವರ ಹೆಗ್ಗಳಿಕೆ. ವರದರಾಜು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಈ ಬಾರಿ, ರಂಗಭೂಮಿ ಕಲಾವಿದೆ ಇಂದಿರಮ್ಮ ಹಾಗೂ ಸಿನಿಮಾ ಸಾಹಿತಿ, ನಿರ್ದೇಶಕ ಚಿ. ದತ್ತರಾಜ್‌ ಭಾಜನರಾಗಿದ್ದಾರೆ. 6ನೇ ವರ್ಷಕ್ಕೆ ರಂಗದ ಮೇಲೆ ಬಣ್ಣ ಹಚ್ಚಿದ ಇಂದಿರಮ್ಮ, ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Advertisement

ಡಾ.ರಾಜ್‌ಕುಮಾರ್‌ ಹಾಗೂ ತಂದೆ ಪುಟ್ಟಸ್ವಾಮಯ್ಯ ಅವರೊಂದಿಗೆ ಒಟ್ಟಿಗೆ ಅಭಿನಯಿಸಿದ ಹೆಗ್ಗಳಿಕೆ ಇಂದಿರಮ್ಮ ಅವರದ್ದು. ಇನ್ನು, ಸಿನಿಮಾ ಸಾಹಿತಿ, ನಿರ್ದೇಶಕ, ನಟ, ಕಂಠದಾನ ಕಲಾವಿದ ಹೀಗೆ, ಕನ್ನಡ ಚಿತ್ರರಂಗಕ್ಕೆ ಚಿ. ದತ್ತರಾಜ್‌ ಅವರ ಕೊಡುಗೆ ಅಪಾರ. ಸನಾದಿ ಅಪ್ಪಣ್ಣ, ಬಂಗಾರದ ಪಂಜರ, ಶ್ರೀನಿವಾಸ ಕಲ್ಯಾಣ ಮುಂತಾದ ಸಿನಿಮಾಗಳ ಹಿಂದೆ ಇವರ ಪರಿಶ್ರಮ ಇದೆ. ಚಿ. ಉದಯಶಂಕರ ಅವರ ಕಿರಿಯ ಸೋದರರಾಗಿರುವ ದತ್ತರಾಜ್‌, ಅದೇ ಕಣ್ಣು ಸೇರಿದಂತೆ, ರಾಜಕುಮಾರ್‌ ಅಭಿನಯದ ನಾಲ್ಕು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಈ ಇಬ್ಬರು ಹಿರಿಯ ಕಲಾವಿದರಿಗೆ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಗೀತ ನಿರ್ದೇಶಕ ವಿ. ಮನೋಹರ್‌, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಉಪಸ್ಥಿತರಿರಲಿದ್ದಾರೆ. 

ಎಲ್ಲಿ?: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ | ಯಾವಾಗ?: ಫೆ. 23, ಶನಿವಾರ ಸಂಜೆ 5.30

Advertisement

Udayavani is now on Telegram. Click here to join our channel and stay updated with the latest news.

Next