Advertisement

ವರದಪುರದಲ್ಲಿ ಪಾದುಕೆ ಪೂಜೆಗೆ ಅವಕಾಶ

07:50 PM Feb 05, 2022 | Suhan S |

ಸಾಗರ: ಫೆ. ಏಳರ ಸೋಮವಾರದಿಂದ ತಾಲೂಕಿನ ವರದಪುರದ ಶ್ರೀಧರಾಶ್ರಮದಲ್ಲಿ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳವರ ದಿವ್ಯ ಪಾದುಕೆಗಳ ಪಾದಪೂಜೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಭಕ್ತಾದಿಗಳ ಹೆಸರು, ಗೋತ್ರ, ರಾಶಿ, ನಕ್ಷತ್ರ ಮುಂತಾದವುಗಳೊಡನೆ ಸಂಕಲ್ಪ ಮಾಡಿ ಭಕ್ತರ ಉಪಸ್ಥಿತಿಯಲ್ಲಿ ಅರ್ಚಕರ ಹಸ್ತದಿಂದ ಮಾಡಲು ಸಂಕಲ್ಪಿಸಲಾಗುತ್ತದೆ ಎಂದು ಶ್ರೀಕ್ಷೇತ್ರ ವರದಪುರದ ಶ್ರೀಧರ ಸೇವಾ ಮಹಾಮಂಡಲ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಹೆಚ್ಚಿನ ವಿವರ ಪ್ರಕಟಿಸಿರುವ ಮಹಾಮಂಡಲ, ಅರ್ಚಕರು ಭಕ್ತರ ಎದುರು ಸಂಕಲ್ಪವನ್ನು ಮಾಡಿ ಪಾದ ಪೂಜೆಯನ್ನು ನೆರವೇರಿಸಿ ಪ್ರಸಾದವನ್ನು ನೀಡುತ್ತಾರೆ. ಭಕ್ತರಿಗೆ ಪಾದುಕೆಯನ್ನು ಸ್ಪರ್ಶ ಮಾಡಲು ಮತ್ತು ಹೂವು, ತುಳಸಿ, ಅಕ್ಷತೆಯನ್ನು ಹಾಕಲು ಅವಕಾಶವಿರುವುದಿಲ್ಲ. ಈ ನಿಯಮಕ್ಕೆ ಒಪ್ಪಿಗೆ ಇದ್ದವರು ಮಾತ್ರ ಈ ಸೇವೆಯನ್ನು ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.

ಪಾದುಕಾ ಪೂಜೆಯ ಸಮಯ ಬೆಳಗ್ಗೆ 8-30 ರಿಂದ 9-30 ವರೆಗೆ ಹಾಗೂ 10-30ರಿಂದ 11-30ವರೆಗೆ ಮಾತ್ರ. ಒಂದು ಬಾರಿಗೆ ಇಪ್ಪತ್ತೈದು ಪೂಜೆಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ ಎಂದು ಶ್ರೀಧರಾಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next