Advertisement

Reliance ‘ವಂತಾರಾ’; ಅನಂತ್ ಅಂಬಾನಿ ಅವರಿಂದ ಪ್ರಾಣಿ ಕಲ್ಯಾಣ ಉಪಕ್ರಮ ಅನಾವರಣ

05:59 PM Feb 26, 2024 | Team Udayavani |

ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸೋಮವಾರ ‘ವಂತಾರ’ (ಸ್ಟಾರ್ ಆಫ್ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮ ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ಸಂಕಷ್ಟಕ್ಕೊಗೊಳಗಾದ ಮತ್ತು ಬೆದರಿಕೆಗೆ ಒಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಮೇಲೆ ಕೇಂದ್ರೀಕರಿಸಲಿದೆ.

Advertisement

ಆರ್‌ಐಎಲ್ ಮತ್ತು ರಿಲಯನ್ಸ್ ಫೌಂಡೇಶನ್‌ನ ನಿರ್ದೇಶಕ ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ ವಂತಾರಾ ಉಪಕ್ರಮದ ಪರಿಕಲ್ಪನೆ ಮಾಡಲಾಗಿದ್ದು, “ಚಿಕ್ಕ ವಯಸ್ಸಿನಲ್ಲೇ ಉತ್ಸಾಹವಾಗಿ ಪ್ರಾರಂಭವಾದದ್ದು ಈಗ ‘ವಂತಾರಾ’.  ನಮ್ಮ ಅದ್ಭುತ ಮತ್ತು ಬದ್ಧತೆಯ ತಂಡದೊಂದಿಗೆ ಮಿಷನ್ ಆಗಿ ಮಾರ್ಪಟ್ಟಿದೆ. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ ನಾವು ಗಮನಹರಿಸಿದ್ದೇವೆ” ಎಂದು ಹೇಳಿದ್ದಾರೆ.

“ನಾವು ಪ್ರಾಣಿಗಳ ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಬಯಸುತ್ತಿದ್ದು, ಪ್ರಾಣಿಗಳಿಗೆ ತುರ್ತು ಬೆದರಿಕೆಗಳನ್ನು ಪರಿಹರಿಸಲು ಮತ್ತು ವಂತಾರಾವನ್ನು ಪ್ರಮುಖ ಸಂರಕ್ಷಣ ಕಾರ್ಯಕ್ರಮವಾಗಿಸಲು ಬಯಸುತ್ತೇವೆ. ನಮ್ಮ ಪ್ರಯತ್ನಗಳು ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ, ”ಎಂದು ಅನಂತ್ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಕೆಲವು ಉನ್ನತ ಪ್ರಾಣಿಶಾಸ್ತ್ರ ಮತ್ತು ವೈದ್ಯಕೀಯ ತಜ್ಞರು ವಂತಾರಾ ಮಿಷನ್‌ಗೆ ಸೇರಿಕೊಂಡಿದ್ದಾರೆ. ಕಾರ್ಯಕ್ರಮ ಸರಕಾರಿ ಸಂಸ್ಥೆಗಳು, ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಸಕ್ರಿಯ ಸಹಯೋಗ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಿದೆ ಎಂದು ಅನಂತ್ ಅಂಬಾನಿ ವಿಚಾರ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next