Advertisement
ಶನಿವಾರವಷ್ಟೇ 20ರ ಹರೆಯಕ್ಕೆ ಕಾಲಿಟ್ಟ ಹರ್ಯಾಣದ ರೋಹrಕ್ ಜಿಲ್ಲೆಯ ರಿಠಾಲ್ ಪೋಗಟ್ ಗ್ರಾಮದವರಾದ ಮಂಜುರಾಣಿ, ಈ ಕೂಟದಲ್ಲಿ ಫೈನಲ್ ತಲುಪಿದ ಭಾರತದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಇವರ ಮೇಲೆ ಚಿನ್ನದ ನಿರೀಕ್ಷೆ ಇತ್ತಾದರೂ ರಶ್ಯದ ಎದುರಾಳಿ ಹೆಚ್ಚು ಬಲಿಷ್ಠ ಹಾಗೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚಿನ ಅನುಭವ ಹೊಂದಿದ್ದ ಕಾರಣ ನೆಚ್ಚಿನ ಸ್ಪರ್ಧಿಯಾಗಿ ಹೋರಾಟ ಆರಂಭಿಸಿದ್ದರು.
ಈ ವರ್ಷದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ವೇಳೆ ಹರ್ಯಾಣವನ್ನು ಪ್ರತಿನಿಧಿಸಲು ಸಾಧ್ಯವಾಗದ ಕಾರಣ ಮಂಜುರಾಣಿ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿ ಪ್ರಶಸ್ತಿ ಗೆದ್ದ ಬಳಿಕ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದರು. ಪ್ರತಿಷ್ಠಿತ “ಸ್ಟ್ರಾಂಜಾ ಮೆಮೋರಿಯಲ್ ಟೂರ್ನಿ’ಗೆ ಪದಾರ್ಪಣೆಗೈದು ಬೆಳ್ಳಿ ಪದಕ ಗೆದ್ದದ್ದು ಮಂಜುರಾಣಿಯ ಮಹತ್ವದ ಸಾಧನೆಯಾಗಿದೆ. ಬಿಎಸ್‌ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ 9 ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾದ ಬಳಿಕ ಮಂಜುರಾಣಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಮೇಲೆದ್ದು ಬಂದ ಪರಿ ಅಮೋಘ.