Advertisement

Vande Bharat; ಮಂಗಳೂರು-ಮಡಗಾಂವ್‌ ಮಧ್ಯೆ ವಂದೇ ಭಾರತ್‌?

01:12 AM Nov 09, 2023 | Team Udayavani |

ಮಂಗಳೂರು: ಮಂಗಳೂರು-ಮಡಗಾಂವ್‌ ಮಧ್ಯೆ ಶೀಘ್ರ ವಂದೇಭಾರತ್‌ ರೈಲು ಆರಂಭವಾಗುವ ಸಾಧ್ಯತೆ ಗೋಚರಿಸಿದೆ.

Advertisement

ಈ ವಿಚಾರವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಟ್ವೀಟ್‌ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ. ಅದೇ ರೀತಿ ಮಂಗಳೂರು-ಬೆಂಗಳೂರು ವಂದೇಭಾರತ್‌ ರೈಲಿಗೆ ಮಾಡಿದ ಮನವಿ ಫಲಪ್ರದವಾಗಿದೆ, ಶೀಘ್ರದಲ್ಲಿ ಅದು ಕೂಡ ನೆರವೇರಲಿದೆ ಎಂದು ಅವರು ಪೋಸ್ಟ್‌ನಲ್ಲಿ ಹಾಕಿಕೊಂಡಿದ್ದಾರೆ.

ಈ ಪೋಸ್ಟ್‌ ರೈಲ್ವೇ ಯಾತ್ರಿಗಳ ಸಂಘಟನೆಯವರಲ್ಲಿ ಚರ್ಚೆ ಹುಟ್ಟು ಹಾಕಿದೆ. ಮಂಗಳೂರು-ಮಡಗಾಂವ್‌ ನಡುವೆ ಈಗಾಗಲೇ ಹಲವು ರೈಲುಗಳಿವೆ. ಅದರ ನಡುವೆ ಬೆಳಗ್ಗೆಯೇ ವಂದೇಭಾರತ್‌ ರೈಲು ಹಾಕಿದರೆ ಹೆಚ್ಚು ಪ್ರಯೋಜನವಾಗದು. ಬದಲು ಸಂಜೆ ವೇಳೆ ಇದನ್ನು ಹಾಕಿ, ಮಡಗಾಂವ್‌-ಮುಂಬಯಿ ವಂದೇಭಾರತ್‌ಗೆ ಲಿಂಕ್‌ ಮಾಡಿದರೆ ಪ್ರಯಾಣಿಕರಿಗೆ ಉಪಕಾರವಾಗಬಹುದು ಎಂದು ದಕ್ಷಿಣ ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷ ಹನುಮಂತ ಕಾಮತ್‌ ತಿಳಿಸುತ್ತಾರೆ.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈಗಾಗಲೇ ವಂದೇಭಾರತ್‌ ರೈಲುಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದ್ದು, ಒಂದು ಪಿಟ್‌ಲೆçನನ್ನೇ ಮೀಸಲಿರಿಸಲಾಗಿದೆ. ಹಾಗಾಗಿ ರೈಲು ಸ್ವೀಕಾರಕ್ಕೆ ಸಮಸ್ಯೆಯಿಲ್ಲ. ಆದರೆ ಬೆಂಗಳೂರು-ಮಂಗಳೂರು ಮಧ್ಯೆ ವಂದೇಭಾರತ್‌ ರೈಲು ಆರಂಭಿಸುವುದಕ್ಕೆ ಅಡ್ಡಿಯಾಗುವಂಥದ್ದು ಘಾಟಿ ಪ್ರದೇಶ. ಮಂಗಳೂರಿನಿಂದ ಸುಬ್ರಹ್ಮಣ್ಯ ವರೆಗೆ ರೈಲು ಮಾರ್ಗ ವಿದ್ಯುದೀಕರಣ ಪ್ರಗತಿಯಲ್ಲಿದೆ. ಆದರೆ ಇದು ಘಾಟಿಯಲ್ಲಿ ಆರಂಭಗೊಳ್ಳದಿರುವುದು ವಂದೇ ಭಾರತ್‌ ರೈಲು ಆರಂಭಕ್ಕೆ ಸವಾಲು.

ವಂದೇ ಭಾರತ್‌ ಸ್ಲೀ ಪರ್‌ ?
ಮುಂದಿನ ವರ್ಷ ವಂದೇ ಭಾರತ್‌ ಸ್ಲಿàಪರ್‌ ರೈಲುಗಳು ಆರಂಭಗೊಳ್ಳಲಿದ್ದು, ಮೊದಲ ರೈಲನ್ನು ಮಂಗಳೂರು-ಮುಂಬಯಿ ಮಧ್ಯೆ ಆರಂಭಿಸಲಾಗುವುದು ಎಂದು ಈಗಾಗಲೇ ರೈಲ್ವೇ ಸಚಿವರು ಆಶ್ವಾಸನೆ ನೀಡಿರುವುದು ಮತ್ತೂಂದು ಧನಾತ್ಮಕ ಅಂಶ. ಇದು ಆರಂಭಗೊಂಡರೆ ತ್ವರಿತವಾಗಿ ಮಂಗಳೂರು-ಮುಂಬಯಿ ಮಧ್ಯೆ ಕನಿಷ್ಠ ನಿಲುಗಡೆಯೊಂದಿಗೆ ಪ್ರಯಾಣಿಸಬಹುದು.

Advertisement

ಕೇರಳದ ವಂದೇ ಭಾರತ್‌ಗೆ ವಿರೋಧ
ಕೇರಳದಿಂದ ಪ್ರಸ್ತುತ ಕಾಸರಗೋಡಿಗೆ ವಂದೇ ಭಾರತ್‌ ರೈಲು ಆಗಮಿಸುತ್ತಿದೆ. ಇದನ್ನು ಮಂಗಳೂರಿಗೆ ವಿಸ್ತರಿಸು ವುದಕ್ಕೂ ಯತ್ನ ನಡೆಯುತ್ತಿದೆ. ಆದರೆ ಈ ರೈಲು ಮಂಗಳೂರಿಗೆ ಬಂದರೆ ಈ ಭಾಗದವರಿಗೆ ಯಾವುದೇ ಪ್ರಯೋಜನವಾಗದು ಎನ್ನುವ ಕಾರಣಕ್ಕೆ ಆದಕ್ಕೆ ರೈಲ್ವೇ ಯಾತ್ರಿ ಸಂಘದವರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next