ಹೊಸದಿಲ್ಲಿ : ವಂದೇ ಮಾತರಂ ಇಸ್ಲಾಂಗೆ ವಿರುದ್ಧವಾಗಿದ್ದು, ನಾವು ಅದನ್ನು ಅನುಸರಿಸುವುದಿಲ್ಲ ಎಂದು ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬರ್ಕ್ ಕಿಡಿ ಕಾರಿದ್ದಾರೆ.
ಮಂಗಳವಾರ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ ವೇಳೆ ಆಡಳಿತ ಪಕ್ಷದ ಕೆಲ ಸದಸ್ಯರು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು.
ಘೋಷಣೆಗಳ ನಡುವೆಯೇ ಪ್ರಮಾಣ ಸ್ವೀಕರಿಸಿದ ಶಫಿಕುರ್ ರೆಹಮಾನ್ ವಂದೇ ಮಾತರಂ ಇಸ್ಲಾಂಗೆ ವಿರುದ್ಧ ನಾವು ಅದನ್ನು ಅನುಸರಿಸುವುದಿಲ್ಲ ಎಂದು ಕಿಡಿಯಾದರು.
ಶಫೀಕುರ್ ಸಂಭಾಲ್ ಕ್ಷೇತ್ರದ ಸಂಸದ ರಾಗಿ ಆಯ್ಕೆಯಾಗಿದ್ದಾರೆ.
Related Articles
ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಪ್ರಮಾಣ ಸ್ವೀರಿಸುವ ವೇಳೆಯೂ ವಂದೇ ಮಾತರಂ ,ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಲಾಗಿತ್ತು.