Advertisement

ವಂದೇ ಭಾರತ್‌ ರೈಲಿಗೆ ಸಂಪರ್ಕಿಸುವಂತೆ ಕೊಲ್ಲೂರಿಗೆ ಬಸ್‌ ಸೇವೆ ಆರಂಭಿಸಲು ಆಗ್ರಹ

11:26 PM Apr 29, 2023 | Team Udayavani |

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರಿಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೇರವಾಗಿ ತೆರಳಲು ಮತ್ತು ವಾಪಸಾಗಲು ಕೇರಳ ಸರಕಾರಿ ಬಸ್‌ ಸಂಚಾರವನ್ನು ಆರಂಭಿಸಬೇಕೆಂದು ಕುಂಬಳೆ ರೈಲ್ವೇ ಪ್ಯಾಸೆಂಜರ್ ಅಸೋಸಿಯೇಶನ್‌ ಆಗ್ರಹಿಸಿದೆ.

Advertisement

ಬೆಳಗ್ಗೆ 9 ಗಂಟೆಗೆ ಕೊಲ್ಲೂರಿನಿಂದ ಹೊರಟು ಮಧ್ಯಾಹ್ನ 1.30ಕ್ಕೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪುವ ರೀತಿಯಲ್ಲಿ ಹವಾನಿಯಂತ್ರಿತ (ಎಸಿ) ಬಸ್‌ ಆರಂಭಿಸಿದರೆ ತಿರುವನಂತಪುರ ವರೆಗಿನ ವಂದೇ ಭಾರತ್‌ ರೈಲು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಅಲ್ಲದೆ ಅಪರಾಹ್ನ ಹೊರಡುವ ರೈಲಿನಲ್ಲಿ ಹಿಂದಿರುಗಿ ಪ್ರಯಾಣಿಸಲು ಸಾಧ್ಯವಿದೆ.

ಅಲ್ಲದೆ ಈ ಬಸ್‌ ಮಧ್ಯಾಹ್ನ 1.50ಕ್ಕೆ ಕಾಸರಗೋಡಿನಿಂದ ಹೊರಟು ಸಂಜೆ 6 ಗಂಟೆಗೆ ಕೊಲ್ಲೂರಿಗೆ ತಲುಪುವಂತೆ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಸಂಪರ್ಕಿಸುವ ಬಸ್‌ನಿಂದ ಕುಂಬಳೆ, ಉಪ್ಪಳ, ಮಂಜೇಶ್ವರ, ಮಂಗಳೂರು, ಉಡುಪಿ ಭಾಗದ ಸಂಪರ್ಕವೂ ಸುಲಭವಾಗಲಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರಿಗೆ ಅಸೋಸಿಯೇಶನ್‌ನ ಪದಾ ಧಿಕಾರಿಗಳು ಮನವಿ ನೀಡಿ ಆಗ್ರಹಿಸಿದ್ದಾರೆ. ಈ ಸಂದರ್ಭ ಸಂಘಟನೆಯ ಅಧ್ಯಕ್ಷ ನಿಸಾರ್‌ ಪೆರುವಾಡ್‌, ಅಶ್ರಫ್‌ ಸೇರಿದಂತೆ ಇನ್ನಿತರರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next