ಅಹಮದಾಬಾದ್: ವೇಗದ ವಂದೇ ಭಾರತ್ ರೈಲು ಗುಜರಾತ್ ನ ವಲ್ಸಾಡ್ ನಲ್ಲಿ ಶನಿವಾರ (ಅಕ್ಟೋಬರ್ 29) ಹಸುವಿಗೆ ಡಿಕ್ಕಿ ಹೊಡೆದ ಘಟನೆ ಗುಜತಾತ್ ವಲ್ಸಾಡ್ ನ ಅತುಲ್ ಸಮೀಪ ದುರಂತ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಂದ ದಾಂಧಲೆ, ಕಲ್ಲೆಸೆತ
ಮುಂಬೈ ಸೆಂಟ್ರಲ್ ಗುಜರಾತ್ ನಿಂದ ಗಾಂಧಿ ನಗರಕ್ಕೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದ ವೇಳೆಯಲ್ಲಿ ಈ ಅಫಘಾತ ಸಂಭವಿಸಿದೆ. ಒಂದೇ ಭಾರತ್ ರೈಲು ಹಸುವಿಗೆ ಡಿಕ್ಕಿ ಹೊಡೆದ ನಾಲ್ಕನೇ ಪ್ರಕರಣ ಇದಾಗಿದೆ.
ಘಟನೆಯಿಂದಾಗಿ ವಂದೇ ಭಾರತ್ ರೈಲು ಸಂಚಾರ ಸುಮಾರು ಅರ್ಧ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಕಪ್ಲರ್, ನೀರಿನ ಪೈಪ್ ಮತ್ತು ಬಿಸಿಯು ಕವರ್ ಜಖಂಗೊಂಡಿರುವುದಾಗಿ ವರದಿ ತಿಳಿಸಿದೆ.
ಅಕ್ಟೋಬರ್ 6ರಂದು ರೈಲು ಹಸುವಿಗೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. ಕಳೆದ ತಿಂಗಳು ಮುಂಬೈ- ಗಾಂಧಿನಗರ ಮಾರ್ಗಕ್ಕೆ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭಗೊಂಡಿದ್ದು, ಒಂದು ತಿಂಗಳಲ್ಲಿಯೇ ವಂದೇ ಭಾರತ್ ರೈಲು ಹಸುವಿಗೆ ಡಿಕ್ಕಿ ಹೊಡೆದ ನಾಲ್ಕನೇ ಘಟನೆ ಇದಾಗಿದೆ ಎಂದು ವರದಿ ವಿವರಿಸಿದೆ.