Advertisement

First Look:ವಂದೇ ಭಾರತ್‌ ಸ್ಲೀಪರ್‌ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!

04:20 PM Oct 25, 2024 | |

ಬಹುನಿರೀಕ್ಷಿತ ವಂದೇ ಭಾರತ್‌ ರೈಲಿನ ಸ್ಲೀಪರ್‌ ಕೋಚ್‌ ಆವೃತ್ತಿಯನ್ನು ಬಿಡುಗಡೆ ಮಾಡಲು ಚೆನ್ನೈನ ಇಂಟಗ್ರಲ್‌ ಕೋಚ್‌ ಫ್ಯಾಕ್ಟರಿ (ICF) ಸಿದ್ಧಗೊಂಡಿರುವುದಾಗಿ ವರದಿ ತಿಳಿಸಿದೆ. ಶುಕ್ರವಾರ (ಅ.25) ನೂತನವಾಗಿ ಬಿಡುಗಡೆಗೊಳಿಸಿದ ಚಿತ್ರಗಳಲ್ಲಿ ರೈಲಿನ ಇಂಟಿರಿಯರ್ಸ್‌, ಐಶಾರಾಮಿ ಡಿಸೈನ್‌ ಮತ್ತು ಅತ್ಯಾಧುನಿಕ ಫೀಚರ್ಸ್‌ ಅನ್ನು ನೋಡಬಹುದಾಗಿದೆ.

Advertisement

ಮೊದಲ ಬಾರಿಗೆ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಗಳನ್ನು ಐಸಿಎಫ್‌ ರೈಲ್ವೆ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ. ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲಿನಲ್ಲಿ 820 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ಹೆಚ್ಚುವರಿ ಎಂಬಂತೆ ವಂದೇ ಭಾರತ್‌ ರೈಲಿನಲ್ಲಿ Chair Car ಮತ್ತು ಮೆಟ್ರೋ ಟ್ರೈನ್ಸ್‌ ಶ್ರೇಣಿಯನ್ನು ಹೊಂದಿದೆ. ರಾತ್ರಿ ನಿದ್ದೆಯ ಪ್ರಯಾಣದ ವಂದೇ ಭಾರತ್‌ ಸ್ಲೀಪರ್‌ ರೈಲು 800 ಕಿಲೋ ಮೀಟರ್‌ ನಿಂದ 1,200 ಕಿಲೋ ಮೀಟರ್‌ ದೂರದ ನಡುವೆ ಸಂಚಾರ ನಡೆಸಲಿದೆ ಎಂದು ವರದಿ ವಿವರಿಸಿದೆ.

ಸ್ಲೀಪರ್‌ ಕೋಚ್‌ ನಲ್ಲಿ ಹಲವು ವೈಶಿಷ್ಟ್ಯ:

Advertisement

ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲಿನಲ್ಲಿ ಪ್ರಯಾಣಿಕರ ಸುಖಕರ ಮತ್ತು ಸುರಕ್ಷತೆಯೊಂದಿಗೆ ಹಲವಾರು ಫೀಚರ್ಸ್‌ ಗಳನ್ನು ಒಳಗೊಂಡಿದೆ. ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಸಂಪೂರ್ಣ ಹವಾನಿಯಂತ್ರಿತ( Air Conditioned). ಒಟ್ಟು 16 ಬೋಗಿ (ಕೋಚ್ಸ್)‌ ಗಳನ್ನು ಹೊಂದಿದ್ದು, ಸುಮಾರು 820 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಗಂಟೆಗೆ 160 ಕಿಲೋ ಮೀಟರ್‌ ವೇಗದಲ್ಲಿ ಚಲಿಸುವ ವಂದೇ ಭಾರತ್‌ ಮುಖ್ಯವಾಗಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.

ಐಸಿಎಫ್‌ ನ ಜನರಲ್‌ ಮ್ಯಾನೇಜರ್‌ ಯು. ಸುಬ್ಬಾ ರಾವ್‌ ಅವರು ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಇತರ ಸಾಂಪ್ರದಾಯಿಕ ರೈಲುಗಳಿಗಿಂತ ಭಿನ್ನವಾಗಿರುವ ಅತ್ಯಾಧುನಿಕ ಸೌಲಭ್ಯದ ಕುರಿತು ವಿವರಿಸಿದ್ದರು.

ಕೀ ಫೀಚರ್ಸ್(Key Features):

*ಸೆನ್ಸಾರ್‌ ನಿಯಂತ್ರಿತ ಬಾಗಿಲುಗಳು: ಪ್ರಯಾಣಿಕರು ಡೋರ್‌ ಅನ್ನು ಸ್ಪರ್ಶಿಸಿದಾಗ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದೆ.

*ಟಚ್‌ ಫ್ರೀ ಬಯೋ ವ್ಯಾಕ್ಯೂಮ್‌ ಟಾಯ್ಲೆಟ್ಸ್:‌ ಇದು ನೈರ್ಮಲ್ಯ ಮತ್ತು ಅನುಕೂಲಕ್ಕೆ ತಕ್ಕ ಸೌಲಭ್ಯವಾಗಿದೆ.

*ಇಂಟರ್‌ ಕನೆಕ್ಟಿಂಗ್‌ ಡೋರ್ಸ್‌ (ಪರಸ್ಪರ ಸಂಪರ್ಕಿಸುವ ಬಾಗಿಲುಗಳ ವ್ಯವಸ್ಥೆ): ಸುಲಭವಾಗಿ ಪ್ರವೇಶಿಸಲು ಅನುಕೂಲವಾಗಲು.

*ಅತ್ಯುತ್ತಮ ಒಳಾಂಗಣ ವ್ಯವಸ್ಥೆ

*ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ

*ಟಾಕ್‌ ಬ್ಯಾಕ್‌ ಯೂನಿಟ್ಸ್:‌ ಈ ವ್ಯವಸ್ಥೆಯಿಂದ ಪ್ರಯಾಣಿಕರು ಮತ್ತು ರೈಲು ಸಿಬಂದಿಗಳ ನಡುವೆ ಉತ್ತಮ ಸಂವಹನಕ್ಕೆ ಸಹಾಯಕವಾಗಲಿದೆ.

*ಫ್ಲೈಟ್‌ ಸ್ಟೈಲ್‌ Attendant Buttons: ( ವಿಮಾನ ಮಾದರಿಯ ಬಟನ್‌ ವ್ಯವಸ್ಥೆ) ಇದು ಫಸ್ಟ್‌ ಕ್ಲಾಸ್‌ ಕಂಪಾರ್ಟ್‌ ಮೆಂಟ್ಸ್‌ ನಲ್ಲಿ ಇದ್ದು, ಈ ಬಟನ್‌ ಪ್ರಯಾಣಿಕರಿಗೆ Upper ಬರ್ತ್ಸ್‌ ಗೆ ಹೋಗಲು ಅನುಕೂಲ ಕಲ್ಪಿಸಲಿದೆ.

Safety Measures:

ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ ಎಮರ್ಜೆನ್ಸಿ ಬ್ರೇಕ್‌ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಇನ್ನಿತರ ಅತ್ಯಾಧುನಿಕ ಭದ್ರತಾ ಫೀಚರ್ಸ್‌ ಒಳಗೊಂಡಿದೆ. ವಂದೇ ಭಾರತ್‌ ಸ್ಲೀಪರ್‌ ಕೋಚ್‌ ನಲ್ಲಿ  ಅಪಘಾತ ನಿಗ್ರಹ ವ್ಯವಸ್ಥೆ “ಕವಚ್”‌ ವ್ಯವಸ್ಥೆ ಸೇರಿದಂತೆ Anti Climbing Technologyಯನ್ನು ಹೊಂದಿದೆ.

ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲು ಎರಡು ತಿಂಗಳ ಕಾಲ 90ರಿಂದ 180 ಕಿಲೋ ಮೀಟರ್‌ ವೇಗದಲ್ಲಿ ರೈಲನ್ನು ಪರೀಕ್ಷಾರ್ಥವಾಗಿ ಓಡಾಟ ನಡೆಸುತ್ತಿದ್ದು, ನವೆಂಬರ್‌ 15ರಂದು ಪರೀಕ್ಷಾರ್ಥ ಓಡಾಟ ಮುಕ್ತಾಯಗೊಳ್ಳಲಿದ್ದು, ನಂತರ ಅಧಿಕೃತ ಬಿಡುಗಡೆಗೆ ದಿನಾಂಕ ಘೋಷಿಸುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next