ನವದೆಹಲಿ: ಮೊದಲ ಎಂಟು ಜೋಡಿಗಳ ವಂದೇ ಭಾರತ್ ರೈಲುಗಳ ಸೀಟು ಭರ್ತಿ ಸರಾಸರಿ ಶೇ.99.97ರಷ್ಟಾಗಿದೆ.
2022ರ ಏ.1ರಿಂದ 2023ರ ಫೆ.8 ರವರೆಗಿನ ರೈಲ್ವೆ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕನಿಷ್ಠ ಐದು ಜೋಡಿ ವಂದೇ ಭಾರತ್ ರೈಲುಗಳಲ್ಲಿ ಶೇ.100ಕ್ಕಿಂತ ಹೆಚ್ಚು ಸೀಟುಗಳು ಭರ್ತಿಯಾಗಿವೆ.
2022ರ ನ.11ರಂದು ಉದ್ಘಾಟನೆಯಾದ ಚೆನ್ನೈ-ಮೈಸೂರು ನಡುವಿನ ವಂದೇ ಭಾರತ್ ರೈಲಿನಲ್ಲಿ ಸರಾಸರಿ ಶೇ.78.12ರಷ್ಟು ಸೀಟುಗಳು ಭರ್ತಿಯಾಗಿವೆ. ಅದೇ ರೀತಿ ಮೈಸೂರು-ಚೆನ್ನೈ ನಡುವಿನ ರೈಲಿನಲ್ಲಿ ಸರಾಸರಿ ಶೇ.68.26ರಷ್ಟು ಸೀಟುಗಳು ಭರ್ತಿಯಾಗಿವೆ.
2022ರ ಸೆ.30 ಉದ್ಘಾಟನೆಯಾದ ಹೆಚ್ಚಿನ ಜನದಟ್ಟಣೆಯ ಮುಂಬೈ-ಗಾಂಧಿನಗರ ನಡುವಿನ ರೈಲಿನಲ್ಲಿ ಸರಾಸರಿ ಶೇ.126.43ರಷ್ಟು ಸೀಟುಗಳು ಭರ್ತಿಯಾಗಿವೆ. ಇವು ವೇಟಿಂಗ್ ಲಿಸ್ಟ್‌ನಲ್ಲಿದ್ದ ಸೀಟುಗಳನ್ನು ಒಳಗೊಂಡಿವೆ. ಅದೇ ರೀತಿ ಗಾಂಧಿನಗರ-ಮುಂಬೈ ನಡುವಿನ ರೈಲಿನಲ್ಲಿ ಸರಾಸರಿ ಶೇ.127.67ರಷ್ಟು ಸೀಟುಗಳು ಭರ್ತಿಯಾಗಿವೆ.
ವಾರಣಾಸಿ-ನವದೆಹಲಿ ನಡುವಿನ ರೈಲಿನಲ್ಲಿ ಸರಾಸರಿ ಶೇ.125.89ರಷ್ಟು, ನವದೆಹಲಿ-ವಾರಣಾಸಿ ಶೇ.12.51ರಷ್ಟು, ನವದೆಹಲಿ-ವೈಷ್ಣೋದೇವಿ ಕಾಟ್ರಾ ಶೇ.106.31ರಷ್ಟು, ವೈಷ್ಣೋದೇವಿ ಕಾಟ್ರಾ-ನವದೆಹಲಿ ಶೇ.104.89ರಷ್ಟು, ಹೌರಾ-ನ್ಯೂ ಜಲ್ಪೆ„ಗುರಿ ಶೇ.103.67ರಷ್ಟು, ಜಲ್ಪೆ„ಗುರಿ-ಹೌರಾ ಶೇ.102.01ರಷ್ಟು, ವಿಶಾಖಪಟ್ಟಣ-ಸಿಕಿಂದರಾಬಾದ್ ಶೇ.106.18ರಷ್ಟು ಹಾಗೂ ಸಿಕಿಂದರಾಬಾದ್-ವಿಶಾಖಪಟ್ಟಣ ರೈಲು ಶೇ.124.5ರಷ್ಟು ಭರ್ತಿಯಾಗಿವೆ.
ಕಡಿಮೆ ಸೀಟು ಭರ್ತಿಯಾಗಿರುವ ಪೈಕಿ ಬಿಲಾಸ್‌ಪುರ್-ನಾಗ್ಪುರ ರೈಲು ಸರಾಸರಿ ಶೇ.55.25ರಷ್ಟು, ನಾಗ್ಪುರ-ಬಿಲಾಸ್‌ಪುರ್ ಶೇ.52.86ರಷ್ಟು, ಅಂಬ್ ಅದೌರ-ನವದೆಹಲಿ ಶೇ.57.18ರಷ್ಟು, ನವದೆಹಲಿ-ಅಂಬ್ ಅದೌರ ಶೇ.77.92ರಷ್ಟು ಸೀಟುಗಳು ಭರ್ತಿಯಾಗಿವೆ. ಪ್ರಸ್ತುತ ದೇಶದಲ್ಲಿ ಹತ್ತು ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.