ಹೊಸದಿಲ್ಲಿ: ಭಾರತದ ಮೊದಲ ವಂದೇ ಭಾರತ್ ಮೆಟ್ರೋ ರೈಲು ಜುಲೈಯಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದು ಮೆಟ್ರೋ ಮಾದರಿಯ ಸೀಟುಗಳನ್ನು ಹೊಂದಿರುವ ರೈಲಾಗಿದ್ದು, 250 ಕಿ.ಮೀ. ಅಂತರದಲ್ಲಿರುವ ನಗರಗಳನ್ನೂ ಸಂಪರ್ಕಿಸುತ್ತದೆ. “ಈ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಬೆಂಚ್ ಮಾದರಿಯ ಸೀಟಿಂಗ್ ಹೊಂದಿರುವ ಈ ರೈಲು ಅಲ್ಪ ದೂರದ ನಗರಗಳ ನಡುವೆ ಸಂಚಾರ ಮಾಡಲು ಇದು ಅನುಕೂಲವನ್ನು ಒದಗಿಸಲಿದೆ. ಮುಂದಿನ 2 ತಿಂಗಳ ಕಾಲ ವಂದೇ ಭಾರತ್ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರಗಳು ನಡೆಯಲಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ. ಪಂಜಾಬ್‌ನ ಕಪುರ್ತಲ ರೈಲ್ವೇ ಕೋಚ್ ಕಾರ್ಖಾನೆಯಲ್ಲಿ ಈ ರೈಲಿನ ಬೋಗಿಗಳು ನಿರ್ಮಾಣವಾಗುತ್ತಿದೆ.
ವಿಶೇಷತೆಗಳೇನು?
ಹವಾನಿಯಂತ್ರಿತ ವ್ಯವಸ್ಥೆ
ಪ್ರತೀ ಬೋಗಿಯಲ್ಲಿ ಬೆಂಕಿ ಗುರುತಿಸುವ ಸೆನ್ಸರ್‌ಗಳು
ಸ್ವಯಂಚಾಲಿತ ಬಾಗಿಲು ಗಳು, ಗಾಲಿ ಕುರ್ಚಿ ವ್ಯವಸ್ಥೆ
ಪ್ರತೀ ರೈಲಿನಲ್ಲಿ ಕನಿಷ್ಠ 12 ಬೋಗಿಗಳು, ಗರಿಷ್ಠ 16