Advertisement

ವನಮಹೋತ್ಸವ ನಿರಂತರವಾಗಿ ನಡೆಯಲಿ

12:15 PM Jul 13, 2018 | Team Udayavani |

ಔರಾದ: ವನಮಹೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಉಪವಲಯ ಅರಣ್ಯಾಧಿಕಾರಿ ಅಂಕುಶ ಹೇಳಿದರು.

Advertisement

ತಾಲೂಕಿನ ಕಮಲನಗರದಲ್ಲಿ ಗುರುಪ್ಪ ಟೋಣ್ಣೆ ಪ್ರಾಥಮಿಕ ಶಾಲೆ, ಡಾ| ಚನ್ನಬಸವ ಪಟ್ಟದೇವರು ಪ್ರೌಢಶಾಲೆ, ಸಿದ್ದಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತಪುರ ಅರಣ್ಯ ಇಲಾಖೆಯಿಂದ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ವಿಶ್ವ ಪರಿಸರ ದಿನ ಆಚರಣೆ ಮಾಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಶಾಲೆ-ಕಾಲೇಜಿನ ಮಕ್ಕಳು ಮನೆಗೆ ತೆರಳಿದರೆ ಸಾಲದು. ನಮ್ಮ ಸುತ್ತಮುತ್ತಲಿನ ಸುಂದರ ಪರಿಸರ ಹಾಗೂ ಸಕಾಲಕ್ಕೆ ಮಳೆ ಬರಲು ಗಿಡಗಳು ಬೆಳೆಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಶಾಲೆ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ತಿಳಿ ಹೇಳಿ ಮನೆ ಹಾಗೂ ಹೊಲದಲ್ಲಿ ಸಸಿಗಳು ಹಚ್ಚುವಂತೆ
ಅರಿವು ಮೂಡಿಸಲು ಮುಂದಾಗಬೇಕು. ಸಸಿ ಹಚ್ಚಲು ಇಚ್ಛೆ ಉಳ್ಳು ರೈತರು ಇದ್ದರೆ ತಮ್ಮ ಗ್ರಾಪಂ ಹಾಗೂ ವಲಯ ಅರಣ್ಯಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಬೇಕು. ಸಸಿಗಳು ಹಚ್ಚುತ್ತಾರೆ ಎಂದು ಹೇಳಿದರು.

ಕಮಲನಗರ ಸಿಪಿಐ ದಿಲೀಪ ಸಾಗರೆ ಮಾತನಾಡಿ, ಭಾರತ ದೇಶದಲ್ಲಿ ಆಚರಿಸಲಾಗುವ ಹಬ್ಬಗಳು ಬೇರೆ ಯಾವುದೇ ದೇಶದಲ್ಲಿಯೂ ಇಲ್ಲ. ಅಂತಹ ಹಬ್ಬಗಳ ಪೈಕಿ ವನಮಹೋತ್ಸವ ಆಚರಣೆಯೂ ಒಂದಾಗಿದೆ. 1950ರಿಂದ ಭಾರತದಲ್ಲಿ ವನಮಹೋತ್ಸವ ಆಚರಿಸಲಾಗುತ್ತಿದೆ. ಈಗ ಮರಗಳನ್ನು ನಿರಂತರವಾಗಿ ಕಡಿಯಲಾಗುತ್ತಿದ್ದು, ಇದರ ಪರಿಣಾಮ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಹೇಳಿದರು.

Advertisement

ಗಿಡಗಳನ್ನು ನೆಡುವ ಮೂಲಕ ಅರಣ್ಯ ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣವಾಗುವುದರ ಜತೆಗೆ ಜನರಲ್ಲಿ ಶಾಲೆ ಕಾಲೇಜಿನಲ್ಲಿರುವ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿರುವ ಅರಣ್ಯ ಅಧಿಕಾರಿಗಳ ಕೆಲಸ ಉತ್ತಮವಾಗಿದೆ ಎಂದು ಬಣ್ಣಿಸಿದರು. ವಿಜಯಕುಮಾರ ಶೆಖೇದಾರ, ಹಾವಗೀರಾವ ಮಠಪತಿ, ನಿಜಲಿಂಗಯ್ಯ ಸ್ವಾಮಿ, ಜ್ಞಾನೋಬಾ ಹೇಡೆ, ರಾಜು ಮಚಕುರೆ, ಅಂಬಾದಾಸ, ಮಹಾದೇವ ಪಪ್ಪು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next