Advertisement

ವನ ಮಹೋತ್ಸವಕ್ಕೆ ಡೀಸಿ ಚಾಲನೆ

12:18 PM Aug 08, 2020 | Suhan S |

ಶಿಡ್ಲಘಟ್ಟ: ಗೂಳೂರಿನ ನಿಡುಮಾಮಿಡಿ ಮಠವು ಬಹಳ ಸುಂದರ ಪರಿಸರದಲ್ಲಿ ನಿರ್ಮಾಣವಾಗಿದ್ದು, ಮಠವು ನಡೆಸಿಕೊಂಡು ಬರುತ್ತಿರುವ ಸಸ್ಯವರ್ಗ, ವೃದ್ಧಾಶ್ರಮ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಸಹಿತ ಸಾಮಾಜಿಕ ಚಟುವಟಿಕೆಗಳು, ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವೀರಭದ್ರ ಚನ್ನಮಲ್ಲ ಸ್ವಾಮಿಗಳ ಸೇವೆ ಪ್ರಶಂಸನೀಯ ಎಂದು ಜಿಲ್ಲಾ ಧಿಕಾರಿ ಆರ್‌.ಲತಾ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ, ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯ, ನಿಡುಮಾಮಿಡಿ ಮಹಾ ಸಂಸ್ಥಾನ ಮಠ ಗೂಳೂರಿನಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ, ಬಡ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ಮಾಡಲು ಶ್ರೀಗಳು ಮಾಡುತ್ತಿರುವ ಸೇವೆ ಅಮೂಲ್ಯ ಎಂದು ಶ್ಲಾಘಿ ಸಿದರು. ಮಠದ ಪೀಠಾಧಿಕಾರಿ ವೀರಭದ್ರ ಚನ್ನಮಲ್ಲಸ್ವಾಮಿ ಮಾತನಾಡಿ, ತನ್ನ 40 ವರ್ಷಗಳ ಅನುಭವದಲ್ಲಿ ಡಾ.ಆರ್‌.ಲತಾ ಶ್ರೇಷ್ಠ ಅಧಿಕಾರಿ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶೀರ್ವಾದ ನೀಡಿದರು.

ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಸುರೇಶ್‌ ಮಾತನಾಡಿ, ನಮ್ಮ ಕಾನೂನು ಮಹಾವಿದ್ಯಾಲಯ ಸ್ಥಾಪನೆ ಆದ ದಿನದಿಂದ ಇಲ್ಲಿಯವರೆಗೂ ನಿರಂತರವಾಗಿ ವಿದ್ಯಾರ್ಥಿಗಳ ಸವಾಂìಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಅರಣ್ಯಾಧಿಕಾರಿ ಅರಸಲನ್‌, ಬಾಗೇಪಲ್ಲಿ ತಾಲೂಕಿನ ತಹಶೀಲ್ದಾರ್‌ ನಾಗರಾಜು, ವಲಯ ಅರಣ್ಯಾಧಿಕಾರಿ ಚಿಕ್ಕಪ್ಪಯ್ಯ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಹನುಮಂತ ಗೌಡ, ಎಬಿವಿಪಿ ಮುಖಂಡ ಮಂಜುನಾಥ್‌, ಉಪನ್ಯಾಸಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next