ಮಹಾನಗರ: ವಾಮಂಜೂರು ಶ್ರೀ ಅಮೃತೇಶ್ವರ ಕ್ಷೇತ್ರಕ್ಕೆ ನೂತನವಾಗಿ ನಿರ್ಮಿಸಿರುವ ಚಂದ್ರಮಂಡಲ ರಥದ ಸಮರ್ಪಣೆ ಕಾರ್ಯಕ್ರಮ ಶುಕ್ರವಾರ ಸಂಜೆ 6 ಗಂಟೆಗೆ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಟಿ. ಸೀತಾರಾಮ ಜಾಣು ಶೆಟ್ಟಿ ಅವರು ಶುಭ ಹಾರೈಸಿದರು. ಧಾರ್ಮಿಕ ಉಪನ್ಯಾಸ ದೊಂದಿಗೆ ಚಂದ್ರಮಂಡಲ ರಥದ ಮಾಹಿತಿಯನ್ನು ಕುಡುಪು ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ ಅವರು ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್, ಸುಬ್ಬಣ್ಣ ಶೆಟ್ಟಿ ಲಿಂಗಮಾರುಗುತ್ತು, ಭವಾನಿ ಶಿಪ್ಪಿಂಗ್‌ನ ಕುಸುಮೋದರ ಡಿ. ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಕೆಲ್ಲರಾç ಡಾ| ದಯಾಕರ ಪೂಂಜಾ, ಕೆ. ಮೋಹನ್ ಅಮೀನ್, ವಾಮಂಜೂರಿನ ನಾಗರಾಜ್ ಪಂಡಿತ್, ಉದ್ಯಮಿ ರಮೇಶ್ ಶೆಟ್ಟಿ ಮಿತ್ತಮೂಡಜಪ್ಪುಗುತ್ತು, ಉದ್ಯಮಿ ಭಾಸ್ಕರ್ ಶೆಟ್ಟಿ, ಗುರುದೇವ್ ಮುಂಬಯಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಚಂದ್ರಹಾಸ ರೈ ವಾಮಂಜೂರು, ಅರ್ಚಕರಾದ ಬಾಲಕೃಷ್ಣ ಭಟ್, ಶ್ರೀಹರಿ ಅನಂತ ಉಪಾಧ್ಯಾಯ ಚಂದ್ರಮಂಡಲ ರಥದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಟ್ರಸ್ಟಿಗಳು ಉಪ ಸ್ಥಿ ತರಿದ್ದರು.
ಸಮ್ಮಾನ
ಈ ಸಂದರ್ಭ ರಥದ ಶಿಲ್ಪಿ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು ಹಾಗೂ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಅನಂತರ ದೇವರಿಗೆ ರಂಗಪೂಜೆ ನಡೆದು ಬಲಿ ಉತ್ಸವವಾಗಿ ಚಂದ್ರಮಂಡಲ ರಥೋತ್ಸವ ನಡೆದು ಪ್ರಸಾದ ವಿತರಿಸಲಾಯಿತು. ಅಶ್ವಿನ್ ಶೆಟ್ಟಿ ಬೊಂಡಂತಿಲ ಸ್ವಾಗಸಿದರು. ಪೆರ್ಮಂಕಿಗುತ್ತು ಕಿರಣ ಪಕ್ಕಳ ನಿರೂಪಿಸಿದರು.