Advertisement

ಮೌಲ್ಯಾಧಾರಿತ ರಾಜಕೀಯ ಮುಕುಟ ಹೆಗಡೆ

03:30 PM Aug 31, 2018 | |

ವಿಜಯಪುರ: ಇಂದಿನ ಕಲುಷಿತ ರಾಜಕಾರಣಿದ ಮಧ್ಯೆಯೂ ಪರಿಶುದ್ಧ ರಾಜಕೀಯ ಜೀವನ ನಡೆಸಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ದೇಶಕ್ಕೆ ಮಾದರಿಯಾದ ಸಾರ್ವಕಾಲಿಕ ಅತ್ಯುತ್ತಮ ರಾಜ್ಯಾಡಳಿತ ನಡೆಸಿ ಮೌಲ್ಯಾಧಾರಿತ ರಾಜಕೀಯ ಎಂಬ ಹೊಸ ಶಕೆಯನ್ನೇ ಆರಂಭಿಸಿದ್ದ ರಾಜಕೀಯ ಆದರ್ಶ ಎಂದು ಎ.ಬಿ. ಜತ್ತಿ ಪ.ಪೂ ಕಾಲೇಜಿನ ಉಪನ್ಯಾಸಕ ಅಮರೇಶ ಸಾಲಕ್ಕಿ ಅಭಿಪ್ರಾಯಪಟ್ಟರು.

Advertisement

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 93ನೇ ಜನ್ಮದಿನ ಅಂಗವಾಗಿ ನಗರದ ಕೆ.ಎಚ್‌.ಬಿ ಕಾಲೋನಿಯಲ್ಲಿ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಹೆಗಡೆ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೇಶ ಕಂಡ ಅಪರೂಪದ ರಾಜಕೀಯ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರ ವ್ಯಕ್ತಿತ್ವ ಮೇರುಗಿರಿಯಾಗಿದ್ದರೂ ಅಧಿಕಾರದ ಸಂದರ್ಭದಲ್ಲಿ ಹಲವು ಏಳು-ಬೀಳು ಕಂಡವರು. ರಾಜಕೀಯ ನೈತಿಕ ಮೌಲ್ಯಗಳಿಗೆ
ಮತ್ತೂಂದು ನಿದರ್ಶನ ಎಂಬಂತಿದ್ದ ಅವರು, ದೂರದೃಷ್ಟಿತ್ವದ ಮಹತ್ವಾಕಾಂಕ್ಷೆಯ ನಾಯಕರಾಗಿದ್ದರು ಎಂದರು.

ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ ಪ್ರಧಾನ ಕಾರ್ಯದರ್ಶಿ ಸಂತೋಕುಮಾರ ನಿಗಡಿ ಮಾತನಾಡಿ, ಅಧಿ ಕಾರಕ್ಕಾಗಿ ಜೋತುಬಿದ್ದು ಕೊರಗಿದ ರಾಮಕೃಷ್ಣ ಹೆಗಡೆ ಅವರು, ಅಧಿಕಾರ ಸಿಕ್ಕಾಗ ಜನಪರ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದವರು. ಸ್ಥಳೀಯ ಆಡಳಿತ ಬಲವರ್ಧನೆಗೆ ಅಧಿಕಾರ ವಿಕೇಂದ್ರೀಕರಣ ಮಾಡಿ ರಾಜ್ಯದಲ್ಲಿ ಪಂಚಾಯತ ರಾಜ್ಯ ವ್ಯವಸ್ಥೆ ಜಾರಿಗೆ ತಂದರು ಎಂದರು.

ಮಹಾಂತೇಶ ಅಲೆಗಾವಿ ಮಾತನಾಡಿ, ಭಾರತ ಕಂಡ ಚತುರ ರಾಜಕೀಯ ನಾಯಕ ಎನಿಸಿಕೊಂಡಿದ್ದ ಹೆಗಡೆ ಅವರ ವ್ಯಕ್ತಿತ್ವ ತೀರಾ ವಿಭಿನ್ನವಾಗಿತ್ತು. ಅದ್ಭುತ ವಾಕಚಾತುರ್ಯದ ವಾಗ್ಮಿಯಾಗಿದ್ದರು. ಆಡು ಪ್ರತಿ ಮಾತಿನಲ್ಲೂ ಹೊಣೆಗಾರಿಕೆ ಇರುತ್ತಿತ್ತು. ಕರ್ನಾಟಕದ ಭವಿಷ್ಯ ಅಡಗಿರುತ್ತಿತ್ತು. ಭವಿಷ್ಯಕ್ಕೆ ದೊಡ್ಡ ಮಟ್ಟದ ರಾಜಕೀಯ ನಾಯಕರ ಕೊಡುಗೆ ನೀಡುವ ಉದ್ಧಾತ್ತ ಧ್ಯೇಯದೊಂದಿಗೆ ರಾಜಕೀಯ ನಡೆಸಿದರು ಎಂದರು. 

ಪಿ.ವಿ.ಕುಲಕರ್ಣಿ, ಮಾರುತಿ ಹುಲ್ಲನ್ನವರ, ಅಮೋಘ ಗವಳಿ, ಬಸವರಾಜ ಜುಮನಗೋಳ, ಸಚಿನ ಒಳಸಂಗ, ಮುತ್ತು ಅಥರ್ಗಾ, ಶಿವಾನಂದ ಕಟಾಯಿ, ಅಶೋಕ ಅಂಬಾಜಿ ಇತರರು ಹಾಜರಿದ್ದರು. ರವಿ ಕುರ್ಲೆ ಸ್ವಾಗತಿಸಿದರು.
ಸತೀಶ ಆಹೇರಿ ನಿರೂಪಿಸಿದರು. ರುದ್ರೇಶ ಜತ್ತಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next