Advertisement

ಯಕ್ಷಗಾನದ ಮೂಲಕ ಜನರಿಗೆ ಮೌಲ್ಯಾಧಾರಿತ ಸಂದೇಶ : ಮೇಯರ್‌

06:00 AM Aug 13, 2017 | |

ವಾಮಂಜೂರು: ಯಕ್ಷಗಾನ ಭಾರತೀಯ ಸಂಸ್ಕೃತಿಯ ವಿಶಿಷ್ಟ ಕಲೆ. ಪರಂಪರೆ ಉಳಿಸಿ, ಬೆಳೆಸಲು ಇದರಿಂದ ಸಾಧ್ಯ. ಯಕ್ಷಗಾನದ ಮೂಲಕ ಜನರಿಗೆ ಉತ್ತಮ ಮೌಲ್ಯಾಧಾರಿತ ಸಂದೇಶವನ್ನು ಸುಲಭವಾಗಿ ಮುಟ್ಟಿಸಬಹುದಾಗಿದೆ. ಯಕ್ಷಗಾನ ಪರಂಪರೆಯನ್ನು  ಬೆಳೆಸುವಲ್ಲಿ ಯಕ್ಷಾಮೃತ ವಾಮಂಜೂರು ಶಕ್ತಿಮೀರಿ ಪ್ರಯತ್ನಿ ಸುತ್ತಿರುವುದು ಶ್ಲಾಘನೀಯ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

Advertisement

ಅವರು ಯಕ್ಷಾಮೃತ ವಾಮಂಜೂರು ಇದರ ವತಿಯಿಂದ  ವಾಮಂಜೂರು ಚರ್ಚ್‌ ಸಭಾಭವನ ದಲ್ಲಿ   ಮೂರು ದಿನಗಳ ಕಾಲ ನಡೆಯುವ ಯಕ್ಷ ವೈಭವ-ಪ್ರಥಮ ಹೆಜ್ಜೆಯ ಕಾರ್ಯಕ್ರಮವನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದರು. ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್‌, ಕುಡುಪು ದೇಗುಲದ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ ಹಾಗೂ ಸೈಂಟ್‌ ಜೋಸೆಫ್‌ ಚರ್ಚ್‌ನ ಧರ್ಮಗುರು ಫಾ| ಸಿಪ್ರಿಯನ್‌ ಪಿಂಟೋ ಆಶೀರ್ವಚನ  ನೀಡಿದರು. ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ  ಅಧ್ಯಕ್ಷತೆ ವಹಿಸಿದ್ದರು.

ಯಕ್ಷಾಮೃತ ಪ್ರಶಸ್ತಿ ಪ್ರದಾನ
ಕಟೀಲು ಮೇಳದ ಪ್ರಸಿದ್ಧ  ಸ್ತ್ರೀ ವೇಷಧಾರಿ ಅಕ್ಷಯ್‌ ಕುಮಾರ್‌ ಮಾರ್ನಾಡ್‌ ಅವರನ್ನು ಯಕ್ಷಾಮೃತ ಪ್ರಶಸ್ತಿ-2017 ನೀಡಿ ಗೌರವಿಸಲಾಯಿತು. ಯಕ್ಷಾಮೃತ ವಾಮಂಜೂರು ಇದರ ಅಧ್ಯಕ್ಷ  ವಾಸುದೇವ ರಾವ್‌ ಕುಡುಪು  ಅಭಿನಂದನಾ ಭಾಷಣಗೈದರು. ಕೀರ್ತಿ ಅನಿಲ್‌ ಸಮ್ಮಾನ ಪತ್ರ ವಾಚಿಸಿದರು. ಯಕ್ಷ ಧ್ರುವ ಫೌಂಡೇಶನ್‌ಗೆ ಯಕ್ಷಾಮೃತ ವಾಮಂಜೂರು ಇದರ ವತಿಯಿಂದ 50 ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ತಿರುವೈಲು ವಾರ್ಡ್‌ನ ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್‌, ಉದ್ಯಮಿಗಳಾದ ಸತೀಶ್‌ ಶೆಟ್ಟಿ ಮೂಡುಜಪ್ಪುಗುತ್ತು, ಕಾವೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ದಯಾನಂದ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಮೋಹನ್‌ದಾಸ್‌ ಕಿಲ್ಲೆ, ಉದ್ಯಮಿಗಳಾದ ಅಶೋಕ್‌ ಅಡ್ಯಾರು, ಸಿವಿಲ್‌ ಎಂಜಿನಿಯರ್‌ ರಾಜೀವ, ಕಿರಣ್‌ ಶೆಟ್ಟಿ ಮೂಡುಶೆಡ್ಡೆ, ಉದ್ಯಮಿ ದೀಪಕ್‌ ಶೆಟ್ಟಿ ಲಿಂಗಮಾರುಗುತ್ತು, ಚಂದ್ರಹಾಸ ಮೊಲಿ ಕುಡುಪು, ಉಮಾನಾಥ ಕೋಟ್ಯಾನ್‌ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯಾಧ್ಯಕ್ಷ ನಾಗೇಶ್‌ ಕೋಟ್ಯಾನ್‌, ಗೌರವಾಧ್ಯಕ್ಷ ರಾಜೇಶ್‌ ಕೊಟ್ಟಾರಿ, ಪ್ರಧಾನ ಕಾರ್ಯ ದರ್ಶಿ ವಿನಯ ಕುಮಾರ್‌, ಉಪಾಧ್ಯಕ್ಷರಾದ  ಶ್ರೀನಿವಾಸ ಮಲ್ಲೂರು, ಶಿವಾನಂದ ಆಚಾರ್ಯ, ಐತಪ್ಪ ಪೂಜಾರಿ, ಶೇಖರ ಪೂಜಾರಿ, ಕೋಶಾಧಿಕಾರಿ ವೆಂಕಪ್ಪ, ಗೌರವ ಸಲಹೆಗಾರ ಸುಧಾಕರ ರಾವ್‌ ಪೇಜಾವರ, ಟಿ. ಜಯರಾಮ ಶೆಟ್ಟಿ, ರಾಜೀವ ಪೂಜಾರಿ ಕೈಕಂಬ, ಪ್ರವೀಣ್‌ ಕುತ್ತಾರ್‌, ರಾಜೀವ ಅಪ್ಪನ ಬೆಟ್ಟು, ಸುಭಾಷ್‌ ಬಿಲ್ಡಿಂಗ್‌ ಕಂಟ್ರಾಕ್ಟರ್‌, ದೀಪಕ್‌ ಶೆಟ್ಟಿ, ಸ್ವಾಗತ  ಸಮಿತಿಯ  ದಿನೇಶ್‌ ಕರ್ಕೇರ, ದಿವಾಕರ್‌ ಆಚಾರ್ಯ, ಕೃಷ್ಣ ಕೋಟ್ಯಾನ್‌  ಮುಂಬಯಿ, ಅನಿಲ್‌ ರೈ, ಚಂದ್ರಶೇಖರ ಅಮೀನ್‌, ಜತೆ ಕಾರ್ಯದರ್ಶಿಗಳಾದ  ಚಂದ್ರ ಮೋಹನ್‌, ಕಿರಣ್‌ ಅಂಚನ್‌, ಸದಸ್ಯರಾದ ರಾಜೇಶ್‌ ಭಟ್‌, ಗಣೇಶ್‌ ಭಟ್‌, ಮಧುಕರ ಭಟ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಶರತ್‌ ಶೆಟ್ಟಿ  ಪಡುಪಳ್ಳಿ ಸ್ವಾಗತಿಸಿ, ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್‌ ಪೇಜಾವರ ವಂದಿಸಿದರು. ಬಳಿಕ ಶ್ರೀ ಕೃಷ್ಣ ಪಾರಿಜಾತ-ಶ್ರೀನಿವಾಸ ಕಲ್ಯಾಣ ಎಂಬ ಕಥಾಭಾಗ ಅಭಿವ್ಯಕ್ತಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next