Advertisement
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
Related Articles
Advertisement
ಯಾದಗಿರಿ: ರಾಮಾಯಣವನ್ನು ಸಮಾಜಕ್ಕೆ ನೀಡಿದ ವಾಲ್ಮೀಕಿ ಮಹರ್ಷಿ ಅವರು ಶ್ರೀರಾಮನಷ್ಟೇ ಪೂಜನೀಯ ಸಂತ. ಅವರು ಒಂದು ಸಮಾಜಕ್ಕೆ ಸೀಮಿತರಲ್ಲ ಎಂದು ಮಾಜಿ ಶಾಸಕ ಡಾ.ವೀರಬಸಂತರಡ್ಡಿ ಮುದ್ನಾಳ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದ ಆದಿಕವಿ ಎನಿಸಿದ ಮಹರ್ಷಿ ವಾಲ್ಮೀಕಿ ಭಾತೃತ್ವ, ಸ್ನೇಹದ ಚಿಂತನೆಯನ್ನು ಸಮಾಜಕ್ಕೆ ನೀಡಿದರು. ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್ ಅವರು, ತಮ್ಮ ಕಠಿಣ ನಿರ್ಧಾರಗಳ ಮೂಲಕ ದೇಶವನ್ನು ಸದೃಢವಾಗಿ ಕಟ್ಟಿದವರು ಎಂದು ತಿಳಿಸಿದರು.
ಖಂಡಪ್ಪ ದಾಸನ್, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ, ನಗರಸಭಾ ಸದಸ್ಯ ಮತ್ತು ನಗರ ಮಂಡಲ ಅಧ್ಯಕ್ಷ ಸುರೇಶ್
ಅಂಬಿಗೇರ ಮತ್ತು ಸ್ವಾಮಿದೇವ ದಾಸನಕೇರಿ, ಚಂದ್ರಕಾಂತ್ ಮಡ್ಡಿ, ಕೃಷ್ಣಾನಾಯಕ್ ನಾನೇಕ, ಮೊಹಮ್ಮದ್ ವಹಾಬ್, ಎಸ್.ಪಿ. ನಾಡಕರ್, ಶಂಕರ್ ಸೋನಾರ್, ಚಂದ್ರಕಾಂತ್ ಚವಾಣ್, ಕವಿತಾ ಮಾಲಿಪಾಟೀಲ್, ಮೌನೇಶ್ ಬೆಳಗೆರ,ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರ, ನಂದಪ್ಪ ಮುಂಡ್ರಿಗಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.