Advertisement
ಸಾನಿಧ್ಯ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಸೇರಿದಂತೆ ಸಮುದಾಯದ ಪರಂಪರೆ, ಕಲಾ ವೈಭವವನ್ನು ಅನಾವರಣಗೊಳಿಸುವುದರ ಜೊತೆಗೆ ಸಾಹಿತ್ಯ, ಸಂಘಟನೆ, ಹೋರಾಟಗಳ ಬಗ್ಗೆ ಚಿಂತನೆ ನಡೆಸಲು ಪ್ರತಿ ವರ್ಷ ಜಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಹಿಂದುಳಿದ ವಾಲ್ಮೀಕಿ ಸಮಾಜವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಮುಖ್ಯವಾಗಿ ರಾಜಕೀಯವಾಗಿಜಾಗೃತಗೊಳಿಸಿ, ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀಮಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
Related Articles
Advertisement
ಎಲ್ಲವೂ ಅಚ್ಚುಕಟ್ಟು
ಮೊದಲ ದಿನದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಭಾಗವಹಿಸಿದ್ದರು. 50ಕ್ಕಿಂತ ಹೆಚ್ಚು ಊಟದ ಕೌಂಟರ್‌ಗಳಲ್ಲಿ ನಿಂತು ಗೋಧಿ ಪಾಯಸ, ರೊಟ್ಟಿ, ಪಲ್ಯ, ಚಟ್ನಿಪುಡಿ, ಅನ್ನ ಸಾಂಬಾರ್ ಪಡೆದು ಸೇವಿಸಿದರು. ಮಹಿಳೆಯರು, ಪೊಲೀಸ್ ಸಿಬ್ಬಂದಿಗಳಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಠದ ಆವರಣದಲ್ಲಿ ತೆರೆದಿರುವ 30 ಕೌಂಟರ್‌ಗಳಲ್ಲಿ ವಿವಿಧ ಇಲಾಖೆಯ ಅ ಧಿಕಾರಿಸಿಬ್ಬಂದಿ ಉಪಸ್ಥಿತರಿದ್ದರು.
ಆಸಕ್ತರಿಗೆಸಂಬಂಧಿ ತ ವಿವರಣಾ ಪತ್ರ ವಿತರಿಸಿ ಮಾಹಿತಿ ನೀಡುತ್ತಿದ್ದರು. ಪೀಠದ ಆವರಣದಲ್ಲಿ ಅಲ್ಲಲ್ಲಿ 6-7 ಬೃಹತ್ ಶೌಚಾಲಯ, ಸ್ನಾನಗƒಹ ನಿರ್ಮಿಸಿರುವುದು ಸೇರಿದಂತೆ ಈ ಸಲದ ಜಾತ್ರೆಯಲಲ್ಲಿ ಬಂದಂತ ಜನರಿಗೆ ಅಗತ್ಯ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಲಾಗಿತ್ತು. ಪೊಲೀಸ್, ಗೃಹರಕ್ಷಕ ದಳದವರು ಬಂದೋಬಸ್ತ್ ನಿರ್ವಹಿಸಿದರೆ,ಸಮಾಜದ ಯುವಕರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.