Advertisement

Raichur: ವಾಲ್ಮೀಕಿ ಹಗರಣ… ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆ

01:33 PM Jul 16, 2024 | Team Udayavani |

ರಾಯಚೂರು: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮೂಲ ಹುಡುಕುತ್ತಿದ್ದ ಇಡಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ದೊರಕಿದ್ದು, ಬಂಧಿತ ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಮಾಜಿ ಸಚಿವ ನಾಗೇಂದ್ರನ ಆಪ್ತ ಸಹಾಯಕ ನೆಕ್ಕಂಟಿ‌ ನಾಗರಾಜ್ ಅಕೌಂಟ್ ಮೂಲಕವೇ ಇತರರ ಅಕೌಂಟಿಗೆ ಹಣ ಜಮಾಗೊಂಡಿರುವ ದಾಖಲೆಗಳು ಬಯಲಾಗಿದೆ.

Advertisement

ಸಿಂಧನೂರನ ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮಿ, ರತ್ನಕುಮಾರಿ, ಹಾಗೂ ಮೊಮ್ಮಗ‌ ಎಲ್. ಸುನೀಲನ ಅಕೌಂಟಿಗೆ ಹಣ ವರ್ಗಾವಣೆ. ಕೋನಾ ವೆಂಕಟರಾವ್ ರೆಡ್ಡಿ ಅಕೌಂಟಿಗೆ 12 ಲಕ್ಷ, ಪುತ್ರಿ ಲಕ್ಕಂಸಾನಿ ಲಕ್ಷ್ಮಿ ಅಕೌಂಟಿಗೆ 25 ಲಕ್ಷ, ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ, ಮೊಮ್ಮಗ ಸುನೀಲ್ ಅಕೌಂಟಿಗೆ 36 ಲಕ್ಷ ಜಮಾಗೊಂಡಿದೆ. ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ ಇವರ ಇಡೀ ಕುಟುಂಬಕ್ಕೆ ಒಟ್ಟು 98 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಬೂದಿಹಾಳ ಕ್ಯಾಂಪ್ ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿವೆ ವೆಂಕಟರಾವ್ ರೆಡ್ಡಿ ಕುಟುಂಬದವರ ಅಕೌಂಟ್ ಗಳಿವೆ.

ಇದೇ ವಿಚಾರವಾಗಿ ಈ ನಾಲ್ವರ ಅಕೌಂಟ್ ಗಳು ಸದ್ಯಕ್ಕೆ ಸೀಜ್. ಬೆಂಗಳೂರಿನಿಂದಲೇ ಇಡಿ ಅಧಿಕಾರಿಗಳಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ನಾಲ್ವರ ಅಕೌಂಟ್ ಸೀಜ್ ಮಾಡಲಾಗಿದೆ. ಕಮಿಷನ್ ಆಸೆ ತೋರಿಸಿ ಹಣ ಜಮಾ ಮಾಡಲಾಗಿದೆ ಎಂದು ಕಳೆದ ಮಾ.8ರಂದು ಈ ನಾಲ್ವರ ಅಕೌಂಟ್ ಗೆ ಹಣ ವರ್ಗಾವಣೆ ಮಾಡಲಾಗಿದೆ. ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡದಂತೆ ತಡೆ ಹಿಡಿದಿರುವ ಇಡಿ ಅಧಿಕಾರಿಗಳು.

ಇದನ್ನೂ ಓದಿ: Ankola: ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ; 7 ಮಂದಿ ದುರ್ಮರಣ – ಸಂಸದ ಕಾಗೇರಿ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next