Advertisement

Valmiki Case: 94 ದಿನಗಳವರೆಗೆ ಬಂಧಿಯಾಗಿದ್ದ ನಾಗೇಂದ್ರಗೆ ಜಾಮೀನು

12:06 AM Oct 15, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ 187 ಕೋಟಿ ರೂ. ಅವ್ಯವಹಾರದ ಸೂತ್ರಧಾರ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಈ ಹಿಂದೆ ಆರೋಪಿ ಪರ ವಕೀಲ ಹಾಗೂ ಸರಕಾರಿ ಅಭಿಯೋಜಕರ ಸುದೀರ್ಘ‌ವಾದ ವಾದ ಆಲಿಸಿದ್ದ ಕೋರ್ಟ್‌ ಅ. 14ಕ್ಕೆ ತೀರ್ಪು ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಆರೋಪಿಗೆ 2 ಲಕ್ಷ ರೂ. ಬಾಂಡ್‌, ಇಬ್ಬರ ಭದ್ರತೆ, ಸಾಕ್ಷ್ಯ ನಾಶಪಡಿಸಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಕೋರ್ಟ್‌ ಅನುಮತಿ ಇಲ್ಲದೆ ಹೊರ ರಾಜ್ಯ ಅಥವಾ ವಿದೇಶಕ್ಕೆ ತೆರಳಬಾರದು; ಪ್ರಮುಖವಾಗಿ ಇ.ಡಿ. ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next