Advertisement

ಶ್ರೀ ರಾಮಾಯಣ ದರ್ಶನಂನ ವಾಲಿ ಸುಗ್ರೀವರು

04:21 PM Feb 03, 2018 | |

ರಾಮಾಯಣ ಓದಿದವರಿಗೆಲ್ಲರಿಗೂ ವಾಲಿ-ಸುಗ್ರೀವರ ಕಥೆ ಗೊತ್ತೇ ಇರುತ್ತೆ. ಸುಗ್ರೀವನ ಅನುಪಸ್ಥಿತಿಯಲ್ಲಿ ವಾಲಿ ತಮ್ಮನ ರಾಜ್ಯ ಕಬಳಿಸಿದ್ದು ಸರಿಯೇ? ಸ್ವಂತ ಅಣ್ಣನ ಮೇಲೆ ಯುದ್ಧಕ್ಕೆ ಹೊರಟ ಸುಗ್ರೀವನದ್ದೂ ತಪ್ಪಿಲ್ಲವೇ? ಸಹೋದರರ ಯುದ್ಧದಲ್ಲಿ ಶ್ರೀರಾಮ ಮಧ್ಯಪ್ರವೇಶಿಸಿದ್ದು ಸರಿಯೇ?

Advertisement

ಕಥೆ ಓದಿದ ನಂತರ ಇಂಥಾ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆಲ್ಲಾ ಉತ್ತರ ನೀಡುವ ಪ್ರಯತ್ನವೇ ಈ “ವಾಲಿ ವಧೆ’ ನಾಟಕ. ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಆಧಾರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದ್ದು, ಕಲೆಯ ವಿವಿಧ ಪ್ರಕಾರಗಳನ್ನು ಹಾಗೂ ಅದ್ಭುತ ನೃತ್ಯ-ಸಂಗೀತವನ್ನು ಇದು ಒಳಗೊಂಡಿದೆ. 

ಎಲ್ಲಿ?: ಕೆಎಫ್ಎ ಪ್ರಭಾತ್‌ ರಂಗಮಂದಿರ, 8ನೇ ಮುಖ್ಯರಸ್ತೆ, 2 ಕ್ರಾಸ್‌, ಕಮಲಾನಗರ
ಯಾವಾಗ?: ಫೆ.3, ಬೆಳಗ್ಗೆ 11
ಟಿಕೆಟ್‌: 200 ರೂ.

Advertisement

Udayavani is now on Telegram. Click here to join our channel and stay updated with the latest news.

Next