Advertisement

20 ಜೋಡಿಗಳನ್ನು ಒಂದುಗೂಡಿಸಿದ ಪೊಲೀಸರು

07:52 PM Feb 16, 2023 | Team Udayavani |

ದಾಂಪತ್ಯದಲ್ಲಿ ಕಲಹ ಸಾಮಾನ್ಯ. ಅದೆಲ್ಲವನ್ನೂ ದಾಟಿ, ಅರಿತು-ಬೆರೆತು ಬಾಳಿದರೆ ಸ್ವರ್ಗಸುಖ ಎನ್ನುವ ಮಾತು ಸರ್ವಕಾಲಿಕ ಸತ್ಯ. ಆ ಸತ್ಯವನ್ನು 20 ಜೋಡಿಗಳಿಗೆ ಅರ್ಥಸಿ, 20 ಕುಟುಂಬವನ್ನು ಒಂದುಗೂಡಿಸಿ, ಅರ್ಥಪೂರ್ಣವಾಗಿ ಪ್ರೇಮಿಗಳ ದಿನಾಚರಣೆ ಆಚರಿಸಲು ಲುಧಿಯಾನ ಪೊಲೀಸರು ಕಾರಣೀಕರ್ತರಾಗಿದ್ದಾರೆ.

Advertisement

ಹೌದು ! “ಪೊಲೀಸ್‌ ವಿತ್‌ ಎ ಹಾರ್ಟ್‌’ ಎನ್ನುವ ಉಪಕ್ರಮದೊಂದಿಗೆ ಸಣ್ಣಪುಟ್ಟ ಕಲಹಗಳಿಂದ ಬೇರಾಗಲು ಇಚ್ಛಿಸಿದ್ದ 20 ಜೋಡಿಗಳಿಗೆ ಪೊಲೀಸರು ಫೆ.14ರಂದು ಕೌನ್ಸಿಲಿಂಗ್‌ ಕೊಡಿಸಿದ್ದಾರೆ. ಅಲ್ಲದೆ, ದಂಪತಿಗಳ ನಡುವಿನ ವೈಮನಸ್ಸು ಸರಿಪಡಿಸಿ, ಒಟ್ಟಿಗೆ ಸಮಯ ಕಳೆಯಲು ಮಲ್ಟಿಪ್ಲೆಕ್ಸ್‌ ಥಿಯೇಟರ್‌ನಲ್ಲಿ ಉಚಿತವಾಗಿ ಸಿನಿಮಾ ಟಿಕೆಟ್‌ ಕೂಡ ನೀಡಿದ್ದಾರೆ.

ದಂಪತಿಗಳನ್ನು ಒಂದು ಮಾಡುವ ಕಾರ್ಯಕ್ಕೆ ಮಲ್ಟಿಪ್ಲೆಕ್ಸ್‌ ಕೂಡ ಸಹಕರಿಸಿದ್ದು, ಪ್ರೇಮಿಗಳ ದಿನದ ಪೊಲೀಸರ ವಿನೂತನ ಆಚರಣೆ ಜಾಲತಾಣದಲ್ಲಿ ವೈರಲ್‌ ಆಗಿದ್ದಲ್ಲದೆ, ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next