Advertisement

ವಳಚ್ಚಿಲ್‌ ಶ್ರೀನಿವಾಸ ಕ್ಯಾಂಪಸ್‌: ‘ವೈಕುಂಠ’ದಲ್ಲಿ ಶ್ರೀನಿವಾಸ ಮೂರ್ತಿಯ ಶೋಭಾಯಾತ್ರೆ

11:49 AM Feb 22, 2024 | Team Udayavani |

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯ, ಎ. ಶಾಮ ರಾವ್‌ ಫೌಂಡೇಶನ್‌, ಶ್ರೀನಿವಾಸ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ನಗರ ಹೊರ ವಲಯದ ವಳಚ್ಚಿಲ್‌ ಶ್ರೀನಿವಾಸ ಕ್ಯಾಂಪಸ್‌ನ “ವೈಕುಂಠ’ದಲ್ಲಿ ಶ್ರೀನಿವಾಸ ದೇವರ ಭವ್ಯ ಮೆರವಣಿಗೆ ನಡೆಯಿತು.

Advertisement

ವಿ.ವಿ. ಕ್ಯಾಂಪಸ್‌ ಒಳಗೆ ನೂತನ ದೇವಾಲಯದಲ್ಲಿ ಫೆ. 22ರಂದು ನಡೆಯುವ ಶ್ರೀನಿವಾಸ ದೇವರ ಪ್ರತಿಷ್ಠಾಪನ ಮಹೋತ್ಸವದ ಹಿನ್ನೆಲೆಯಲ್ಲಿ ಈ ಮೆರವಣಿಗೆ ನಡೆಯಿತು.

ಬೆಳಗ್ಗೆ ಲಕ್ಷ್ಮೀನಾರಾಯಣ ಹೋಮ, ವಾಯುಸ್ತುತಿ ಪುನಶ್ಚರಣ ಹವನ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ನವಗ್ರಹ ಶಾಂತಿ ಹೋಮ, ಚಕ್ರಾಬj ಮಂಡಲ ಪೂಜೆ, ಅಧಿವಾಸ ಹೋಮ, ಶಯ್ನಾ ಧಿವಾಸ, ಕಲಶ ಮಂಡಲ ರಚನೆ, ಕಲಶ ಪೂಜೆ, ಅಘೋರ ಹೋಮ, ಲಕ್ಷ್ಮೀ ದುರ್ಗಾಪೂಜೆ, ಅಷ್ಟಾವಧಾನ, ಆಶ್ಲೇಷಾ ಬಲಿ ಸೇವೆ, ವಿಷ್ಣು ಸಹಸ್ರನಾಮಾವಳಿ ಪಾರಾಯಣ ಸಹಿತ ಶಾಸ್ತ್ರೋಕ್ತ ವಿಧಿವಿಧಾನಗಳ ಬಳಿಕ ಸಂಜೆ ಶ್ರೀನಿವಾಸ ದೇವರ ಮೆರವಣಿಗೆ ನಡೆಯಿತು.

ತಿರುಪತಿಯಿಂದ ಆಗಮಿಸಿದ ಮೂರ್ತಿ

ಶ್ರೀದೇವರ ಭವ್ಯ ಮಂದಿರ ಕ್ಯಾಂಪ ಸ್‌ನಲ್ಲಿ ನಿರ್ಮಾಣಗೊಂಡಿದ್ದು, ಪ್ರತಿ ಷ್ಠಾಪನೆಗೊಳ್ಳಲಿರುವ ಶ್ರೀನಿವಾಸ ದೇವರ ಮೂರ್ತಿಯನ್ನು ತಿರುಪತಿ ಯಿಂದ ತರಲಾಗಿದೆ. ಪಾರಂಪರಿಕ ಶಿಲ್ಪಿ ಗಳಿಂದ ಈ ಮೂರ್ತಿಯನ್ನು ಬೇವಿನ ಮರ ಬಳಸಿ ಕೆತ್ತಲಾಗಿದೆ. ಶ್ರೀನಿವಾಸ ದೇವರ ಪ್ರತಿಷ್ಠಾಪನಪೂರ್ವ ಪೂಜಾ ವಿಧಿ ವಿಧಾನದ ಬಳಿಕ ಶ್ರೀ ದೇವರ ಶೋಭಾ ಯಾತ್ರೆ ಪೂರ್ಣಗೊಂಡಿತು. ಬಳಿಕ ಅಧಿ ವಾಸ ಹೋಮ ಮತ್ತು ಶಯ್ನಾಧಿ ವಾಸ ಕಲಶ ಮಂಡಲ ಸೇವೆ ನಡೆಯಿತು.

Advertisement

ವಿ.ವಿ. ಕುಲಾಧಿಪತಿ ಡಾ| ಎ. ರಾಘ ವೇಂದ್ರ ರಾವ್‌, ಸಹ ಕುಲಾಧಿಪತಿ ಡಾ| ಎ. ಶ್ರೀನಿವಾಸ್‌ ರಾವ್‌, ಆಡಳಿತ ಮಂಡ ಳಿಯ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮೀ ಆರ್‌. ರಾವ್‌, ಪ್ರೊ| ಮಿತ್ರಾ ಎಸ್‌. ರಾವ್‌, ಮತ್ತು ಪದ್ಮಿನಿ ಕುಮಾರ್‌, ಕುಲಸಚಿವ ಡಾ| ಅನಿಲ್‌ ಕುಮಾರ್‌, ಮೌಲ್ಯಮಾಪನ ಕುಲಸಚಿವ ಡಾ| ಶ್ರೀನಿವಾಸ್‌ ಮಯ್ಯ ಡಿ., ಅಭಿವೃದ್ಧಿ ವಿಭಾಗದ ಕುಲಸಚಿವ ಡಾ| ಅಜಯ್‌ ಕುಮಾರ್‌ ಇದ್ದರು.

ಇಂದು ಶ್ರೀನಿವಾಸ ಕಲ್ಯಾಣೋತ್ಸ:

ಫೆ. 22ರಂದು ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಪ್ರಸನ್ನ ಪೂಜೆಯ ಬಳಿಕ 7.40ಕ್ಕೆ ಶ್ರೀ ದೇವರ ಪ್ರತಿಷ್ಠಾಪನ ಸಮಾರಂಭ ನಡೆಯಲಿದೆ. ಅನಂತರ ಕಲಶಾಭಿಷೇಕ, ವಿಷ್ಣು ಸಹಸ್ರನಾಮ ಹವನ, ಕಲೊ³àಕ್ತ ಪೂಜೆ, ದಂಪತಿ ಪೂಜೆ, ಮಂತ್ರಾಕ್ಷತೆ ಮತ್ತು ಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ಶ್ರೀನಿವಾಸ ಕಲ್ಯಾಣೋತ್ಸವ ಆರಂಭಗೊಂಡು ರಾತ್ರಿಯವರೆಗೂ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ನಿತ್ಯವೂ ದೇವರಿಗೆ ಪೂಜೆ ನೆರವೇರಲಿದ್ದು, ಬೆಳಗ್ಗೆ 6ರಿಂದ ರಾತ್ರಿ 8ರ ವರೆಗೆ ದೇವರ ದರ್ಶನ ಪಡೆಯಬಹುದು ಎಂದು ಶ್ರೀನಿವಾಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎ. ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next