ಜಮ್ಮು: ವೈಷ್ಣೋ ದೇವಿ ಯಾತ್ರಿಕರಿಗೆ ಪ್ರಯಾಣ ಸುಲಭವಾಗಲು ಕಳೆದ ವರ್ಷ ಉದ್ಘಾಟಿಸಿದ ಭವನ್-ಭೈರೋನ್ ಪ್ರಯಾಣಿಕರ ರೋಪ್ ವೇ ಸೌಲಭ್ಯವನ್ನು 20 ಲಕ್ಷಕ್ಕೂ ಹೆಚ್ಚು ಜನರು ಪಡೆದುಕೊಂಡಿದ್ದಾರೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ (ಎಸ್‌ಎಂವಿಡಿಎಸ್‌ಬಿ) ಅಧಿಕಾರಿಗಳು ತಿಳಿಸಿದ್ದಾರೆ.
ರೋಪ್ ವೇ ಮಂಗಳವಾರ ತನ್ನ ಯಶಸ್ವಿ ಕಾರ್ಯಾಚರಣೆಯ ಒಂದು ವರ್ಷವನ್ನು ಪೂರ್ಣಗೊಳಿಸಿದೆ. 24 ಡಿಸೆಂಬರ್ 2018ರಂದು ಕಾರ್ಯಾರಂಭ ಮಾಡಿದ ಈ ಹೈಟೆಕ್ ರೋಪ್ ವೇ ಸೌಲಭ್ಯವನ್ನು 20.20 ಲಕ್ಷ ಯಾತ್ರಾರ್ಥಿಗಳು ಪಡೆದುಕೊಂಡಿದ್ದಾರೆ.
ಪ್ರಯಾಣಿಕರ ರೋಪ್ ವೇ ಯೋಜನೆಯನ್ನು ಮಂಡಳಿಯು ಸುಮಾರು 85 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಸಿದೆ. ಇದರಲ್ಲಿ ಅದರ ಮೂಲಸೌಕರ್ಯ ಮತ್ತು ಸಂಬಂಧಿತ ಯಾತ್ರಾ-ಕೇಂದ್ರಿತ ಸೌಲಭ್ಯಗಳು ಸೇರಿವೆ.
ಒಂದೇ ಕ್ಯಾಬಿನ್‌ನಲ್ಲಿ 45 ಜನರನ್ನು ಸಾಗಿಸುವ ಸಾಮರ್ಥ್ಯವಿರುವ ಎರಡು ವಿಶಾಲವಾದ ಕ್ಯಾಬಿನ್‌ಗಳಿದ್ದು, ರೋಪ್ ವೇ ಗಂಟೆಗೆ 800 ಜನರನ್ನು ಹೊತ್ತೂಯ್ಯುತ್ತದೆ.
ಮಹತ್ವಾಕಾಂಕ್ಷೆಯ ಯೋಜನೆ ಪೂರ್ಣಗೊಂಡ ನಂತರ, ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ವೃದ್ಧರು ಮತ್ತು ವಿಶೇಷ ಸಾಮರ್ಥ್ಯದ ಯಾತ್ರಿಕರಿಗೆ ಈ ದೇಗುಲ ಪ್ರವೇಶಿಸುವುದು ಕಷ್ಟವಾದ ಕಾರಣ ಈಗ ಅವರು ಸುಲಭವಾಗಿ 6,600 ಅಡಿ ಎತ್ತರಕ್ಕೆ ಏರಲು ಅನುವಾಗುತ್ತಿದೆ. ರೋಪ್ ವೇ ಭವನ ಮತ್ತು ಭೈರೋನ್ ದೇವಾಲಯದ ನಡುವಿನ ಏಕಮುಖ ಪ್ರಯಾಣದ ಪ್ರಯಾಣದ ಸಮಯವನ್ನು ಒಂದು ಗಂಟೆಯಿಂದ ಕೇವಲ ಮೂರು ನಿಮಿಷಕ್ಕೆ ಕಡಿಮೆ ಮಾಡಿದೆ.