Advertisement

ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

09:32 PM Jan 14, 2022 | Team Udayavani |

ಚಿಕ್ಕಬಳ್ಳಾಪುರ: ವೈಕುಂಠ ಏಕಾದಶಿ ಪ್ರಯುಕ್ತ ಗುರುವಾರ ಜಿಲ್ಲಾದ್ಯಂತ ಇರುವ ವೈಷ್ಣವ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬಂದಿತ್ತು. ಏಕಾದಶಿ ಪ್ರಯುಕ್ತ ಬಹುತೇಕ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು.

Advertisement

ಬೆಳಗ್ಗೆ ಭಕ್ತರು ಉತ್ತರ ಬಾಗಿಲಿನ ಮೂಲಕ ಪ್ರವೇಶ ಮಾಡಿ ಭಕ್ತಿ ಮೆರೆದರು. ನಗರದ ಕಂದವಾರ ಬಾಗಿಲಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಗುರುವಾರ ಭಕ್ತರ ದಂಡು ಆಗಮಿಸಿ ಲಕ್ಷಿವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಪಡೆದರು. ದೇವಾಲಯದಲ್ಲಿ ಬೆಳಗ್ಗೆ ಮಹಾಭಿಷೇಕ, ಅಲಂಕಾರ, ಗೋಪೂಜೆ, ದ್ವಾರಪೂಜೆ, ವೈಕುಂಠ ದರ್ಶನ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.ನಗರದ ಬಾಲಕೃಷ್ಣ ಭಜನೆ ಮಂದಿರ, ಪಾಂಡುರಂಗಸ್ವಾಮಿ ದೇವಾಲಯ, ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಗೋಪಿನಾಥ ಬೆಟ್ಟದಲ್ಲಿರುವ ಲಕ್ಷಿ$¾à ನರಸಿಂಹಸ್ವಾಮಿ ದೇವಾಲಯ, ರಂಗಸ್ಥಳ ರಂಗನಾಥ ಸ್ವಾಮಿ, ಬಾರ್ಲಹಳ್ಳಿ ನರಸಿಂಹಸ್ವಾಮಿ, ಗವಿಗಾನಹಳ್ಳಿಯ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಾಗೇಪಲ್ಲಿ ತಾಲೂಕಿನ ಗಡಿದಿಂ ಲಕ್ಷಿ$¾àವೆಂಕಟರಮಣ ಸ್ವಾಮಿ ದೇವಾಲಯ, ಚಿಂತಾಮಣಿ ತಾಲೂಕಿನ ಕೋನನಕುಂಟ್ಲ ಲಕ್ಷಿ$¾à ವೆಂಕಟರಮಣ ಸ್ವಾಮಿ ದೇವಾಲಯ, ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಸೇರಿ ಜಿಲ್ಲಾದ್ಯಂತ ಇರುವ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ವೈಕುಂಠ ಏಕಾದಶಿ ಅಂಗವಾಗಿ ಗುರುವಾರ ರಾತ್ರಿಯೂ ಧಾರ್ಮಿಕ ಗ್ರಂಥಗಳ ಪಠಣ, ಹರಿಕಥೆ, ಇತರೆ ಕಾರ್ಯಕ್ರಮಗಳು ನಡೆದವು.

 

Advertisement

Udayavani is now on Telegram. Click here to join our channel and stay updated with the latest news.

Next