ತೀರ್ಥಹಳ್ಳಿ: ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪೈರ್ಮೆಂಟ್ ಆಂಡ್ ಸ್ಪೋರ್ಟ್ಸ್ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಂಯೋಗದೊಂದಿಗೆ ದಿ 24-08-2024 ರಿಂದ 30-8-2024ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಮಿನಿ ಒಲಂಪಿಕ್ ಕಬಡ್ಡಿ ಚಾಂಪಿಯನ್ ಶಿಪ್ ಗೆ ತೀರ್ಥಹಳ್ಳಿಯ ಪ್ರತಿಷ್ಠಿತ ವಾಗ್ದೇವಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ವಾಗ್ದೇವಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಹೊರಬೈಲು ಗ್ರಾಮದ ಅನಿಲ್ ಶೆಟ್ಟಿ ಮತ್ತು ದೀಪಾ ಶೆಟ್ಟಿ ದಂಪತಿಗಳ ಪುತ್ರಿಯಾದ ಅವನಿ ಹಾಗೂ ಏಳನೇ ತರಗತಿಯಲ್ಲಿ ಓದುತ್ತಿರುವ ಮೇಲಿನಕುರುವಳ್ಳಿ ನಿವಾಸಿಯಾದ ರಾಜ ಹಾಗೂ ಅನಿತಾ ದಂಪತಿಗಳ ಪುತ್ರಿ ವರ್ಷಿತ 14 ವರ್ಷದ ಒಳಗಿನ ಕಬ್ಬಡಿ ಒಲಂಪಿಕ್ ಚಾಂಪಿಯನ್ ಶಿಪ್
ಗೆ ಆಯ್ಕೆಯಾಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳಿಗೆ ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್, ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Bhopal: ಜಮೀನು ಮರಳಿ ಪಡೆಯಲು ಡಿಸಿ ಕಚೇರಿಯಲ್ಲಿ ರೈತನ ಉರುಳುಸೇವೆ!