Advertisement

Congress ರಾಹುಲ್‌ ಗಾಂಧಿ ಕ್ಷೇತ್ರ ಅಮೇಠಿಯಿಂದ ವಾದ್ರಾ ಸ್ಪರ್ಧೆ?

01:27 AM Apr 05, 2024 | Team Udayavani |

ಹೊಸದಿಲ್ಲಿ: ರಾಹುಲ್‌ ಗಾಂಧಿ ತೆರವು ಮಾಡಿರುವ ಅಮೇಠಿಯಿಂದ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸುತ್ತಾರಾ? ಇಂಥ ಒಂದು ಸಾಧ್ಯತೆಯ ಬಗ್ಗೆ ವಾದ್ರಾ ಅವರೇ ಸುಳಿವು ನೀಡಿದ್ದಾರೆ. ಒಂದು ವೇಳೆ, ರಾಬರ್ಟ್‌ ವಾದ್ರಾ ಕಣಕ್ಕೆ ಇಳಿಯುವುದು ನಿಜವೇ ಆದಲ್ಲಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಗಳಿವೆ.

Advertisement

ಸುದ್ದಿಸಂಸ್ಥೆಯೊಂದರ ಜತೆಗೆ ಮಾತನಾಡಿದ ರಾಬರ್ಟ್‌ ವಾದ್ರಾ “ಅಮೇಠಿ ಲೋಕಸಭಾ ಕ್ಷೇತ್ರದ ಜನರು ನಾನು ಸ್ಪರ್ಧಿಸಬೇಕೆಂದು ಬಯಸಿದ್ದಾರೆ. ಕ್ಷೇತ್ರದ ಜನರು ಈಗ ತಮ್ಮ ತಪ್ಪು ಅರಿತಿದ್ದಾರೆ. ಗಾಂಧಿ ಕುಟುಂಬದ ಸದಸ್ಯರೇ ತಮ್ಮ ಪ್ರತಿನಿಧಿ ಆಗಬೇಕು ಎಂದು ಬಯಸಿದ್ದಾರೆ. ಒಂದು ವೇಳೆ ರಾಜಕೀಯ ಪ್ರವೇಶ ಮಾಡಿ, ಚುನಾವಣೆಗೆ ಸ್ಪರ್ಧೆ ಮಾಡುವುದಿದ್ದರೆ ಅಮೇಠಿಯಿಂದಲೇ ಆಗಬೇಕು ಎಂಬ ಬಗ್ಗೆ ಸ್ಥಳೀಯರಿಂದ ಕೋರಿಕೆ ವ್ಯಕ್ತವಾಗುತ್ತಿದೆ. 1999ರಲ್ಲಿ ಮೊದಲ ಬಾರಿಗೆ ಪ್ರಿಯಾಂಕಾ ಜತೆಗೆ ಪ್ರಚಾರ ಮಾಡಿದ್ದು ನೆನಪಿನಲ್ಲಿ ಇದೆ’ ಎಂದಿದ್ದಾರೆ.
ಆದರೆ ಉ.ಪ್ರ.ಕಾಂಗ್ರೆಸ್‌ ಮೂಲಗಳ ಪ್ರಕಾರ ಚುನಾವಣೆಗೆ ರಾಬರ್ಟ್‌ ವಾದ್ರಾರನ್ನು ಪರಿಗಣಿಸುವ ಸಾಧ್ಯತೆಗಳು ಬಹುತೇಕ ಕಡಿಮೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next